ವಿಶ್ವದ ಮೊದಲ 3ಡಿ ಪ್ರಿಂಟೆಡ್ ರಾಕೆಟ್‌ ಹಾರಿಸಿದ ಭಾರತ..!

ಇಸ್ರೋ ಪ್ರಾಬಲ್ಯ ಹೊಂದಿರುವ ಶ್ರೀಹರಿಕೋಟದಲ್ಲಿ ತಾನೂ ಹೊಂದಿರುವ ಉಡ್ಡಯನ ನೆಲೆಯನ್ನು ಬಳಸಿಕೊಂಡು ಚೆನ್ನೈ ಮೂಲದ ಅಗ್ನಿಕುಲ್ ಕಾಸ್ಟೋಸ್ ಎಂಬ ಬಾಹ್ಯಾಕಾಶದ ಸ್ಟಾರ್ಟಪ್ ಕಂಪನಿಯೊಂದು ಈ ಸಾಧನೆ ಮಾಡಿದೆ.  ಉಪಕಕ್ಷೆಗೆ ರಾಕೆಟ್ ಉಡಾವಣೆ ಮಾಡುವ ಪ್ರಯೋಗವನ್ನು ಗುರುವಾರ ನಡೆಸಿ ಕಂಪನಿ ಯಶಸ್ವಿಯಾಗಿದೆ. 

India has Launched the World's First 3D Printed Rocket grg

ನವದೆಹಲಿ(ಮೇ.31):  ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ ಬಳಿಕ ಅಂತರಿಕ್ಷ ವಲಯದಲ್ಲಿ ಮಹತ್ತರ ಸಾಧನೆಯೊಂದು ಗುರುವಾರ ನಡೆದಿದೆ. 3ಡಿ ಪ್ರಿಂಟೆಡ್ ಸೆಮಿ ಕ್ರಯೋಜೆನಿಕ್ ಎಂಜಿನ್ ಬಳಸಿ 'ಅಗ್ನಿಬಾನ್' ಎಂಬ ರಾಕೆಟ್ ಅನ್ನು ಪ್ರಾಯೋಗಿಕವಾಗಿ ಉಡಾವಣೆ ಮಾಡಲಾಗಿದೆ. ಈ ರೀತಿ 3ಡಿ ಪ್ರಿಂಟೆಡ್ ಎಂಜಿನ್ ಅನ್ನು ರಾಕೆಟ್‌ವೊಂದಕ್ಕೆ ಬಳಸಿ ಉಡಾವಣೆ ಮಾಡಿದ್ದು ವಿಶ್ವದಲ್ಲೇ ಮೊದಲು. 

ಇಸ್ರೋ ಪ್ರಾಬಲ್ಯ ಹೊಂದಿರುವ ಶ್ರೀಹರಿಕೋಟದಲ್ಲಿ ತಾನೂ ಹೊಂದಿರುವ ಉಡ್ಡಯನ ನೆಲೆಯನ್ನು ಬಳಸಿಕೊಂಡು ಚೆನ್ನೈ ಮೂಲದ ಅಗ್ನಿಕುಲ್ ಕಾಸ್ಟೋಸ್ ಎಂಬ ಬಾಹ್ಯಾಕಾಶದ ಸ್ಟಾರ್ಟಪ್ ಕಂಪನಿಯೊಂದು ಈ ಸಾಧನೆ ಮಾಡಿದೆ.  ಉಪಕಕ್ಷೆಗೆ ರಾಕೆಟ್ ಉಡಾವಣೆ ಮಾಡುವ ಪ್ರಯೋಗವನ್ನು ಗುರುವಾರ ನಡೆಸಿ ಕಂಪನಿ ಯಶಸ್ವಿಯಾಗಿದೆ. ಇಂತಹ ಸಾಧನೆ ಮಾಡಿದ ದೇಶದ ಎರಡನೇ ಕಂಪನಿ ಅಗ್ನಿಕುಲ್ ಆಗಿದೆ. ಹೈದರಾಬಾದ್ ಮೂಲದ ಸೈರೂಟ್ ಏರೋಸ್ಪೇಸ್ ಕಂಪನಿ ಉಪಕಕ್ಷೆಗೆ ವಿಕ್ರಮ್-ಎಸ್ ಎಂಬ ರಾಕೆಟ್ ಅನ್ನು 2022ರ ನವೆಂಬರ್‌ನಲ್ಲಿ ಉಡಾವಣೆ ಮಾಡಿತ್ತು ಎಂಬುದು ಗಮನಾರ್ಹ.

ಮಂಗಳಗ್ರಹದ 2 ವರ್ಷದ ಪ್ರಯಾಣ ಎರಡೇ ತಿಂಗಳಿಗೆ ಇಳಿಕೆ, ನಾಸಾ ರೆಡಿ ಮಾಡ್ತಿದೆ 'ಪ್ಲಾಸ್ಮಾ ರಾಕೆಟ್‌'

ಅಗ್ನಿಕುಲ್ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶವೇ ಹೆಮ್ಮೆ ಪಡುವಂತಹ ಗಮನಾರ್ಹ ಸಾಧನೆಯಾಗಿದೆ. ಶುಭಾಶಯಗಳು ಎಂದು ಹೇಳಿದ್ದಾರೆ. ಇಸ್ರೋ ಅಧ್ಯಕ್ಷ ಸೋಮನಾಥ್ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅಗ್ನಿಕುಲ್ ಸಂಸ್ಥೆ ಈ ಪ್ರಯೋಗವನ್ನು ಐದು ಬಾರಿ ನಡೆಸಿ ವಿಫಲವಾಗಿತ್ತು. ಅಗ್ನಿಬಾನ್ ರಾಕೆಟ್ ಎರಡು ಹಂತಗಳನ್ನು ಹೊಂದಿದೆ. 300 ಕೆ.ಜಿ.ವರೆಗಿನ ತೂಕವನ್ನು 700 ಕಿ.ಮೀ. ಎತ್ತರದವರೆಗಿನ ಕಕ್ಷೆವರೆಗೂ ಸಾಮರ್ಥ ಹೊಂದಿದೆ. ಒಯ್ಯುವ ಅಗ್ನಿಕುಲ್ ಕಂಪನಿಯ ಸೆಮಿ ಕ್ರಯೋಜೆನಿಕ್ ಎಂಜಿನ್ ದ್ರವ ಹಾಗೂ ಅನಿಲ ಇಂಧನಗಳನ್ನು ಬಳಸಿಕೊಳ್ಳುತ್ತದೆ. ಈ ರೀತಿಯ ತಂತ್ರಜ್ಞಾನವನ್ನು ಇಸ್ರೋ ಕೂಡ ಈವರೆಗೆ ಹೊಂದಿಲ್ಲ. 

Latest Videos
Follow Us:
Download App:
  • android
  • ios