ಬಾಹ್ಯಾಕಾಶದಿಂದ ವಿಚಿತ್ರ ವಸ್ತೊಂದು ನಿಗೂಢ ಸಂಕೇತಗಳನ್ನು ಭೂಮಿಗೆ ಕಳುಹಿಸುತ್ತಿದೆ. ಪ್ರತಿ 44 ನಿಮಿಷಕ್ಕೆ ಬಾಹ್ಯಾಕಾಶದಿಂದ ನಿಗೂಢ ಸಿಗ್ನಲ್ ಭೂಮಿಗೆ ಕಳುಹಿಸಲಾಗುತ್ತಿದೆ. ಈ ರೀತಿ ಸಂಕೇತಗಳು ಬಾಹ್ಯಾಕಾಶದಿಂದ ಭೂಮಿಗೆ ನೀಡಲಾಗುತ್ತಿದೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಏನಿದು?

ಸಿಡ್ನಿ(ಜೂ.01) ಭೂಮಿ, ಆಕಾಶ, ಸೂರ್ಯ, ಚಂದ್ರ ಸೇರಿದಂತೆ ಒಂದಷ್ಟು ಗ್ರಹಗಳು. ಆದರೆ ಇದರಾಚೆಗೆ ನಾವು ನೋಡದ ಜಗತ್ತು ಇದೆಯಾ? ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಜನರು ಅಥವಾ ಜೀವಿಗಳು ಇದೆಯಾ? ಈ ಪ್ರಶ್ನೆ ಎದುರಾದಾಗ ಅನ್ಯಗ್ರಹ ಜೀವಿಗಳು ಅಥವಾ ಏಲಿಯನ್ ಚರ್ಚೆ ಮೊದಲಿಗೆ ನಿಲ್ಲುತ್ತದೆ. ಈ ಚರ್ಚೆಗೆ ತಾರ್ಕಿಕ ಅಂತ್ಯವಾಗಲಿ, ಸಾಕ್ಷಿಯಾಗಲಿ ಸ್ಪಷ್ಟವಿಲ್ಲ. ಆದರೆ ಅಧ್ಯಯನಗಳು ನಡೆಯುತ್ತಲೇ ಇದೆ. ಇದೀಗ ಖಗೋಳ ಶಾಸ್ತ್ರಜ್ಞರು, ವಿಜ್ಞಾನಿಗಳು ಇದೀಗ ಅಚ್ಚರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಬಾಹ್ಯಾಕಾಶದಿಂದ ನಿಗೂಢ ಸಿಗ್ನಲ್ ಒಂದು ಭೂಮಿಗೆ ಬರುತ್ತಿದೆ. ಪ್ರತಿ 44 ನಿಮಿಷಕ್ಕೆ ಈ ಸಿಗ್ನಲ್ ಭೂಮಿಗೆ ನೀಡಲಾಗುತ್ತಿದೆ ಅನ್ನೋದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಖಚಿತಪಡಿಸಿದ ನಾಸಾ

ಆಸ್ಟ್ರೇಲಿಯಾದ ಖಗೋಳಶಾಸ್ತ್ರಜ್ಞರು ಈ ನಿಗೂಢ ಸಂಕೇತ ಪತ್ತೆ ಹಚ್ಚಿದ್ದಾರೆ. ಬಾಹ್ಯಾಕಾಶದಲ್ಲಿರುವ ನಿಗೂಢ ವಸ್ತುವಿನಿಂದ ಈ ಸಂಕೇತ ಕಳುಹಿಸಲಾಗುತ್ತಿದೆ. ಆಸ್ಟ್ರೇಲಿಯಾ ಸ್ಕೇರ್ ಕಿಲೋಮೀಟರ್ ಆ್ಯರೆ ಪಾಥ್‌ಫೈಂಡರ್(ASKAP) ರೇಡಿಯೋ ಟೆಲಿಸ್ಕೋಪ್ ಮೂಲಕ ಈ ಸಿಗ್ನಲ್ ಪತ್ತೆ ಹಚ್ಚಿದೆ. ಈ ನಿಗೂಢ ಸಿಗ್ನಲ್‌ಗೆ ASKAP J1832- 0911 ಎಂದು ಹೆಸರಿಡಲಾಗಿದೆ. ಬಳಿಕ ನಾಸಾದ ಚಂದ್ರ ಎಕ್ಸ್ ರೇ ಈ ಸಿಗ್ನಲ್ ಖಚಿತಪಡಿಸಿದೆ.

ಪ್ರತಿ 44 ನಿಮಿಷಕ್ಕೆ ಸಿಗ್ನಲ್ ಭೂಮಿಗೆ ರವಾನೆ

ಬಾಹ್ಯಾಕಾಶದಿಂದ ಭೂಮಿಗೆ ಈ ಸಂಕೇತಗಳನ್ನು ನಿಗೂಢ ವಸ್ತುವೊಂದು ಕಳುಹಿಸಿದೆ. ಈ ವಸ್ತು ಆಳ ಬಾಹ್ಯಾಕಾಶ ಕೇಂದ್ರದಿಂದ ಕಳುಹಿಸುತ್ತಿದೆ. ಪ್ರತಿ 44 ನಿಮಿಷಕ್ಕೆ ಭೂಮಿಗೆ ಸಿಗ್ನಲ್ ತಲುಪುತ್ತಿದೆ. ಪ್ರತಿ ಸಿಗ್ನಲ್ 2 ನಿಮಿಷ ಇರಲಿದೆ. ಎರಡು ನಿಮಿಷ ಹಲವು ತರಂಗಾತರಗಳು ಭೂಮಿಗೆ ಬರುತ್ತದೆ. ಇದುವರೆಗೆ ಪತ್ತೆಯಾಗದ ಸಿಗ್ನಲ್ ಇದೀಗ ಖಗೋಳಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದೀಗ ಸಂಶೋಧನೆ ಮುಂದುವರಿದಿದೆ.

ಜರ್ನಲ್ ನೇಚರ್ ಅನ್ನೋ ಅಧ್ಯಯನ ವರದಿಯಲ್ಲಿ ಕುರಿತು ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಆದರೆ ಬಾಹ್ಯಾಕಾಶದಿಂದ ಭೂಮಿಗೆ ಬರುತ್ತಿರುವ ಈ ಸಿಗ್ನಲ್ ಏನು? ಕಳುಹಿಸುತ್ತಿರುವ ನಿಗೂಢ ವಸ್ತು ಯಾವುದು ಅನ್ನೋ ಅಧ್ಯಯನ ಮುಂದುವರಿದಿದೆ. ಇದು ನಕ್ಷತ್ರದ ಅವಶೇಷಗಳಿಂದ ಅಥವಾ ಸಜೀವ ಇಲ್ಲದ ನಕ್ಷತ್ರಗಳ ಕಾಂತೀಯ ಮ್ಯಾಗ್ನೇಟರ್ ಕಳುಹಿಸುತ್ತಿರುವ ಸಂಕೇತ ಆಗಿರಬಹುದು. ಅಥವಾ ಕ್ಷುದ್ರಗ್ರಹಗಳ ಬೈನರಿ ವ್ಯವಸ್ಥೆಯ ಭಾಗವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಕೇತಗಳ ಏನು? ನಿಖರ ಮೂಲ ಸೇರಿದಂತೆ ಹಲವು ವಿಷಯಗಳ ಕುರಿತು ಅಧ್ಯಯನ ನಡೆಯುತ್ತಿದೆ. ಈ ಸಂಕೇತಗಳ ಮೂಲ ಹಾಗೂ ಸಂಕೇತಗಳನ್ನು ಡಿಕೋಟ್ ಮಾಡಲು ಸಾಧ್ಯವಾದರೆ ಅನ್ಯಗ್ರಹ ಸೇರಿದಂತೆ ಬಾಹ್ಯಾಕಾಶದ ಹಲವು ಕುತೂಹಲಗಳಿಗೆ ಉತ್ತರ ಸಿಗಲಿದೆ.

ಅನ್ಯಗ್ರಹ ಜೀವಿ ಕಳುಹಿಸುತ್ತಿದೆಯಾ ಸಂಕೇತ?

ಭೂಮಿಗೆ ಬರುತ್ತಿರುವ ಈ ನಿಗೂಢ ಸಂಕೇತಗಳ ಕುರಿತು ಚರ್ಚೆಯಾಗುತ್ತಿದೆ.ಇದು ಅನ್ಯಗ್ರಹ ಜೀವಿಗಳು ಕಳುಹಿಸುತ್ತಿರುವ ಸಂದೇಶವೇ? ಬಾಹ್ಯಾಕಾಶದಲ್ಲಿ ವಿಜ್ಞಾನಿಗಳು ಇನ್ನು ಪತ್ತೆ ಹಚ್ಚದ ಅಥವೂ ಭೂಮಿಯಿಂದ ವಿಜ್ಞಾನಿಗಳ ಕಣ್ಣಿಗೆ ಬೀಳದ ದೂರದಲ್ಲಿರುವ ಗ್ರಹದಲ್ಲಿ ಅನ್ಯಗ್ರಹ ಜೀವಿಗಳು ಇದೆಯಾ? ಈ ಅನ್ಯಗ್ರಹ ಜೀವಿಗಳು ಭೂಮಿಗೆ ಎಚ್ಚರಿಕೆ ಸಂದೇಶ ನೀಡುತ್ತಿದೆಯಾ? ಅಥವಾ ಭೂಮಿಯಲ್ಲಿರುವ ಜನರಿಗೆ ಅನ್ಯಗ್ರಹ ಏನಾದರು ಸೂಚನೆ ನೀಡುತ್ತಿದೆಯಾ? ಈ ರೀತಿಯ ಹಲವು ಪ್ರಶ್ನೆಗಳು, ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.