ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದಿನ ಉಲ್ಕೆಯ ತುಣುಕು ಪತ್ತೆ!
ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದಿನ ಉಲ್ಕೆಯ ತುಣುಕು| ತಮಿಳುನಾಡಿನ ಕೋಯಂಬತ್ತೂರು ಬಳಿಯ ಫಾರ್ಮಹೌಸ್| ಲಕ್ಷ್ಮೀ ನಾರಾಯಣ್ ಎಂಬುವವರ ಫಾರ್ಮಹೌಸ್’ನಲ್ಲಿ ಪತ್ತೆ| ಭೂವೈಜ್ಞಾನಿಕ ಸಂಸ್ಥೆಯ ಸುಪರ್ದಿಗೆ ಉಲ್ಕಾಶಿಲೆಯ ತುಣುಕು|
ಕೊಯಂಬತ್ತೂರು(ಜೂ.25): ಅದು 35 ವರ್ಷಗಳ ಹಿಂದೆ ಬಿದ್ದ ಉಲ್ಕಾಶಿಲೆಯ ತುಣುಕು. ವ್ಯಕ್ತಿಯೋರ್ವನ ಫಾರ್ಮಹೌಸ್ ಹಿಂಭಾಗದಲ್ಲಿ ಸಿಕ್ಕ ಈ ಉಲ್ಕಾಶಿಲೆಯ ತುಣುಕು ಇದೀಗ ಸರ್ಕಾರದ ಆಸ್ತಿ.
ಹೌದು, ತಮಿಳುನಾಡಿನ ಕೊಯಂಬತ್ತೂರು ಬಳಿ ಲಕ್ಷ್ಮೀ ನಾರಾಯಣ್ ಎಂಬುವವರ ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದೆ ಬಿದ್ದಿದ್ದ ಉಲ್ಕಾಶಿಲೆಯ ತುಣುಕು ದೊರೆತಿದೆ.
ಲಕ್ಷ್ಮೀ ನಾರಾಯಣ್ ಈ ತುಣುಕನ್ನು ಜಿಲ್ಲಾಧಿಕಾರಿ ಕಚೇರಿಯ ಭಾರತೀಯ ಭೂವೈಜ್ಞಾನಿಕ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿದ್ದಾರೆ.