ಮತ್ತೆ ಶುರು 'ಯುವ' ಹವಾ: ರಕ್ತ ಚರಿತ್ರೆ ಕಥೆ ಹೇಳ್ತಾರಾ ರೋಹಿತ್ ಪದಕಿ!
ಮತ್ತೆ ಯುವ ಹವಾ ಶುರುವಾಗಿದ್ದು, ಆಯುಧ ಪೂಜೆ ದಿನದಂದು ಯುವ 2 ಅನೌನ್ಸ್ ಆಗಿದೆ. ಯುವ ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಆನಂದ್‌ರಾಮ್, ಯುವ 2 ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿಲ್ಲ.
ಸ್ಯಾಂಡಲ್‌ವುಡ್‌ನ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ 'ಯುವ' ತೆರೆಕಂಡ ಬಳಿಕ ಎರಡನೇ ಸಿನಿಮಾ ಬಗ್ಗೆ ಸುದ್ದಿನೇ ಇರಲಿಲ್ಲ. ಇದೀಗ ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಅನೌನ್ಸ್ ಆಗಿದೆ. ಹೌದು! ಮತ್ತೆ ಯುವ ಹವಾ ಶುರುವಾಗಿದ್ದು, ಆಯುಧ ಪೂಜೆ ದಿನದಂದು ಯುವ 2 ಅನೌನ್ಸ್ ಆಗಿದೆ. ಯುವ ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಆನಂದ್‌ರಾಮ್, ಯುವ 2 ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿಲ್ಲ.
ಅವರ ಬದಲಾಗಿ ರತ್ನನ್ ಪ್ರಪಂಚ ಸಿನಿಮಾವನ್ನು ನಿರ್ದೇಶಿಸಿದ್ದ ರೋಹಿತ್ ಪದಕಿ ಯುವ ರಾಜ್‌ಕುಮಾರ್ 2ನೇ ಚಿತ್ರಕ್ಕೆ ಸಾರಥಿಯಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ರಕ್ತಸಿಕ್ತವಾದ ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡಿದ್ದಾರೆ ಯುವ. ಸದ್ಯ ರಕ್ತ ಚರಿತ್ರೆ ಕಥೆಯನ್ನು ರೋಹಿತ್ ಪದಕಿ ಹೇಳ್ತಾರಾ ಕಾದು ನೋಡಬೇಕಿದೆ.
ದೇಶಾಭಿಮಾನ ಇರೋ ಗ್ಯಾಂಗ್‌ಸ್ಟರ್ ಕತೆ ಮಾರ್ಟಿನ್: ನಿರ್ದೇಶಕ ಎ.ಪಿ.ಅರ್ಜುನ್
ಹೊಂಬಾಳೆ ಫಿಲ್ಮ್ಸ್ ಯುವ ರಾಜ್‌ಕುಮಾರ್ ಮೊದಲ ಸಿನಿಮಾ 'ಯುವ'ವನ್ನು ನಿರ್ಮಾಣ ಮಾಡಿತ್ತು. ಆದ್ರೀಗ ಸೀಕ್ವೆಲ್ ಯುವ 2 ಅನ್ನು ಮೂರು ಸಂಸ್ಥೆಗಳು ಸೇರಿಕೊಂಡು ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿದೆ. ಕೆಆರ್‌ಜಿ ಸ್ಟುಡಿಯೋ, ಜಯಣ್ಣ ಫಿಲ್ಮ್ಸ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್‌ಗೂ 'ಯುವ 2'ಗೂ ಯಾವುದೇ ಸಂಬಂಧವಿಲ್ಲ ಅನ್ನೋದು ಗೊತ್ತಾಗುತ್ತಿದೆ.
ಯುವ ಸಿನಿಮಾದಲ್ಲಿ ಕಲಿತ ಪಾಠ ದೊಡ್ಡದು: ‘ಸಿನಿಮಾ ರಂಗದಲ್ಲಿ ನಾನು ಮೊದಲ ಹೆಜ್ಜೆ ಇಡುವಂತೆ ಮಾಡಿದ್ದು ಯುವ ಸಿನಿಮಾ. ಈ ಚಿತ್ರದಲ್ಲಿ ನಟಿಸುವಾಗ ಕಲಿತ ಪಾಠ ದೊಡ್ಡದು. ಬಹಳ ತಪ್ಪು ಮಾಡುತ್ತಿದ್ದೆ. ಎಲ್ಲವನ್ನೂ ನಿರ್ದೇಶಕರು ತಾಳ್ಮೆಯಿಂದ ತಿದ್ದುತ್ತಿದ್ದರು. ಸುಧಾರಾಣಿ, ಅಚ್ಯುತ್ ಅವರಂಥಾ ಹಿರಿಯ ಕಲಾವಿದರು ನೀಡಿದ ಸಹಕಾರಕ್ಕೂ ಧನ್ಯವಾದ’ ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ.
ಅಲಾ ವೈಕುಂಠಪುರಂಲೋ ಸಿನಿಮಾದ ಭರ್ಜರಿ ಐಷಾರಾಮಿ ಬಂಗಲೆ ಯಾರದ್ದು? ಬೆಲೆ ಕೇಳಿ ಅಲ್ಲು ಅರ್ಜುನ್ ಶಾಕ್!
ಈ ಸಂದರ್ಭದಲ್ಲಿ ಯುವ, ‘ಮೈಸೂರು ರಾಜವಂಶದ ಕುರಿತಾದ ಸಿನಿಮಾ ಮಾಡುವ ಆಸೆ ಇದೆ. ಇವತ್ತಿಗೂ ನನ್ನ ಆಯ್ಕೆ ಪೌರಾಣಿಕ ಚಿತ್ರಗಳು. ತಾತ ಡಾ ರಾಜ್ ಅವರ ಮಯೂರ ನನ್ನ ಫೇವರಿಟ್ ಸಿನಿಮಾ. ಆ ಥರದ ಪಾತ್ರದಲ್ಲೂ ನಟಿಸುವ ಆಸೆ ಇದೆ’ ಎಂದರು. ನನ್ನ ಪ್ರತಿ ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತವರು ಚಿಕ್ಕಪ್ಪ. ಅವರನ್ನ ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಿನಿಮಾ ನೋಡಿ ಮೊದಲು ಖುಷಿಯಿಂದ ವಿಷ್ ಮಾಡುತ್ತಿದ್ದರು. ಆ ನಂತರ ಏನೆಲ್ಲ ತಪ್ಪುಗಳು ಮಾಡಿದ್ದೇನೆ, ಏನೆಲ್ಲ ಚೆನ್ನಾಗಿ ಮಾಡಿದ್ದೇನೆ ಅಂತ ಬೆಸ್ಟ್ ರಿವ್ಯೂ ಕೊಡುತ್ತಿದ್ದರು.