Asianet Suvarna News

ಉಪೇಂದ್ರ, ಸುದೀಪ್ ನಟನೆಯ ಕಬ್ಜ ಪೋಸ್ಟರ್ ವೈರಲ್!

ಆರ್ ಚಂದ್ರು ನಿರ್ದೇಶನದ ಉಪೇಂದ್ರ ಹಾಗೂ ಸುದೀಪ್ ನಟನೆಯ ಕಬ್ಜ ಚಿತ್ರ ಮತ್ತೊಮ್ಮೆ ಗಮನ ಸಳೆದಿದೆ. ಈ ಬಾರಿ ಚಿತ್ರದ ಇಬ್ಬರು ನಾಯಕರ ಪೋಸ್ಟರ್ ಸಾಕಷ್ಟು ಸದ್ದು ಮಾಡುತ್ತಿದೆ. 

Upendra Sudeep kannada film Kabza new look poster viral vcs
Author
Bangalore, First Published Jun 28, 2021, 12:28 PM IST
  • Facebook
  • Twitter
  • Whatsapp

 ಚಿತ್ರದ ಮೇಕಿಂಗ್ ಯಾವ ಮಟ್ಟಕ್ಕೆ ಇರಬಹುದು ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ. ಜೊತೆಗೆ ಉಪೇಂದ್ರ ಹಾಗೂ ಸುದೀಪ್ ಅವರ ಸ್ಟೈಲಿಶ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರದ ಪೋಸ್ಟರ್‌ಅನ್ನು ದೊಡ್ಡ ಮಟ್ಟದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಟರ ಚಿತ್ರವನ್ನು ವೈರಲ್ ಮಾಡುತ್ತಿದ್ದಾರೆ. ‘ಪೋಸ್ಟರ್ ನೋಡಿದವರು ಹಾಲಿವುಡ್ ಶೈಲಿಯ ಸಿನಿಮಾ ಇದು ಎಂದು ಮೆಚ್ಚಿಕೊಳ್ಳುತ್ತಿದ್ದಾರೆ’ ಎಂಬುದು ನಿರ್ದೇಶಕ ಆರ್ ಚಂದ್ರು ಅವರ ಉತ್ಸಾಹದ ಮಾತು.

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರವನ್ನು ಕೊಂಡು ಕೊಳ್ಳಲು ದೊಡ್ಡ ನಿರ್ಮಾಣ ಸಂಸ್ಥೆಗಳು ಕೂಡ ಮುಂದೆ ಬಂದಿವೆಯಂತೆ. ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿರುವ ಅದ್ದೂರಿ ಸೆಟ್‌ಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಸಚಿವ ಎಂ.ಟಿ.ಬಿ ನಾಗರಾಜ್ ಅರ್ಪಿಸುವ ಚಿತ್ರವನ್ನು ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೇ ನಿರ್ಮಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ ಇದೆ.

ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಕೆಲವೇ ಪ್ಯಾನ್ ಇಂಡಿಯಾ ಚಿತ್ರಗಳ ಸಾಲಿನಲ್ಲಿ ನಮ್ಮ ಕಬ್ಜ ಸಿನಿಮಾ ಕಾಣಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಇದೆ. ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2, ಸುದೀಪ್ ಅವರ ವಿಕ್ರಾಂತ್ ರೋಣ, ರಾಮ್ ಚರಣ್ ತೇಜ ಹಾಗೂ ಜ್ಯೂ.ಎನ್‌ಟಿಆರ್ ಅವರ ಆರ್‌ಆರ್‌ಆರ್ ಹಾಗೂ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರಗಳು ಮುಂದಿನ ದಿನಗಳಲ್ಲಿ ಚಿತ್ರರಂಗವನ್ನು ಅಳಲಿವೆ. ಈ ಚಿತ್ರಗಳ ಸಾಲಿಗೆ ಸೇರುವ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಉಪೇಂದ್ರ ಹಾಗೂ ಸುದೀಪ್ ಕಾಂಬಿನೇಶನ್‌ನ ಕಬ್ಜ. ಪೋಸ್ಟರ್ ನೋಡಿದರೆ ಚಿತ್ರದ ಮೇಕಿಂಗ್ ಹೇಗಿರುತ್ತದೆ ಎನ್ನುವ ಅಂದಾಜು ಸಿಗುತ್ತದೆ. - ಆರ್ ಚಂದ್ರು, ನಿರ್ದೇಶಕ
 

ತಮಿಳಿನ ಐ ಚಿತ್ರದ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆ ಆಗಬೇಕಿದೆ. ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ. ಇದಕ್ಕೂ ಮೊದಲು ಈಗ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

'ಕಬ್ಜ' ಶೂಟಿಂಗ್ ವೇಳೆ ನಟ ಉಪೇಂದ್ರ ತಲೆಗೆ ಗಾಯ! 

 
 
 
 
 
 
 
 
 
 
 
 
 
 
 

A post shared by Upendra (@nimmaupendra)

Follow Us:
Download App:
  • android
  • ios