ಒಂದು ಕಾಲದ ತೆಲುಗು ಚಿತ್ರ​ರಂಗದ ಖ್ಯಾತ ನಟ ದಿ.ರಾ​ವ್‌ ಗೋಪಾಲ್‌ ರಾವ್‌ ಅವರ ಪುತ್ರ ರಾವ್‌ ರಮೇಶ್‌. ತೆಲು​ಗಿನ ಹೊಸ​ಬ​ರಿಂದ ಶುರು​ವಾ​ಗಿ ಸ್ಟಾರ್‌ ನಟರವರೆಗೂ ಎಲ್ಲಾ ಥರದ ಪಾತ್ರ​ಗ​ಳನ್ನು ಮಾಡುತ್ತ ಬಂದಿ​ರುವ ಅದ್ಭುತ ಕಲಾ​ವಿದ. ಇಂಥ ನಟ​ನನ್ನು ಪ್ರಶಾಂತ್‌ ನೀಲ್‌ ‘ಕೆಜಿ​ಎಫ್‌ 2’ ಮೂಲಕ ಕನ್ನಡಕ್ಕೆ ಕರೆ​ ತಂದಿ​ದ್ದಾರೆ.

"

ರವೀನಾ ಟಂಡನ್‌ ಕೈಗೆ ಡೆತ್‌ ವಾರೆಂಟ್‌ ಕೊಟ್ಟ ಕೆಜಿಎಫ್‌- 2 ನಿರ್ದೇಶಕ ಪ್ರಶಾಂತ್ ನೀಲ್!

ರಾವ್‌ ರಮೇಶ್‌ ಯಾವ ಪಾತ್ರ ಮಾಡ​ಲಿ​ದ್ದಾರೆ ಎಂಬುದು ಪ್ರಶಾಂತ್‌ ನೀಲ್‌ ಬಿಟ್ಟು ಕೊಟ್ಟಿಲ್ಲ. ‘ರಾವ್‌ ರಮೇಶ್‌ ನಮ್ಮ ಚಿತ್ರ​ದಲ್ಲಿ ನಟಿ​ಸು​ವು​ದಕ್ಕೆ ಒಪ್ಪಿ​ಕೊಂಡಿ​ರು​ವುದು ಖುಷಿ ಕೊಟ್ಟಿದೆ. ಅವರ ಪಾತ್ರ ಕತೆಗೆ ಪೂರ​ಕ​ವಾ​ಗಿದ್ದು, ಪ್ರೇಕ್ಷ​ಕ​ರಿಗೆ ಮೆಚ್ಚು ಆಗು​ವಂತಹ ಪಾತ್ರ​ದಲ್ಲೇ ಕಾಣಿ​ಸಿ​ಕೊ​ಳ್ಳು​ತ್ತಿ​ದ್ದಾ​ರೆ’ ಎಂದು ಪ್ರಶಾಂತ್‌ ನೀಲ್‌ ಹೇಳಿ​ಕೊಂಡಿ​ದ್ದಾರೆ.