ಹಿರಿಯ ಲೇಖಕ ಕೋಟಿಗಾನಹಳ್ಳಿ ರಾಮಯ್ಯ ಅವರ ಕತೆ, ರಂಗಭೂಮಿ ಪ್ರತಿಭೆ ತಾಯ್ ಲೋಕೇಶ್ ನಿರ್ದೇಶನದ ‘ದಿ ಕಲರ್ ಆಫ್ ಟೊಮೆಟೊ’ ಚಿತ್ರದ ಶೀರ್ಷಿಕೆ ಹಾಗೂ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. 

ದಿ ಕಲರ್ ಆಫ್ ಟೊಮೆಟೋ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಿರಿಯ ಲೇಖಕ ಕೋಟಿಗಾನಹಳ್ಳಿ ರಾಮಯ್ಯ, ‘ಹಿಂಸೆಯ ವ್ಯಾಖ್ಯಾನ ಬದಲಾಗ್ತಿದೆ, ಅದಕ್ಕೆ ಹೊಸ ಡೈಮೆನ್ಶನ್ ಬಂದಿದೆ. ದಿ ಕಲರ್ ಆಫ್ ಟೊಮೆಟೊ ಈಗಿರುವ ಸಿನಿಮಾ ವ್ಯಾಖ್ಯಾನ, ವ್ಯಾಕರಣ ಬದಲಿಸುವ, ಕಿಮ್ ಕಿ ಡುಕ್ ಮಾದರಿಯ ಚಿತ್ರ’ ಎಂದರು.

ನಿರ್ದೇಶಕ ತಾಯ್ ಲೋಕೇಶ್ ಮಾತನಾಡಿ, ‘ಏಷ್ಯಾದ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಕೋಲಾರದಲ್ಲಿದೆ. ಇಲ್ಲಿನ ಆರ್ಥಿಕತೆ ನೆಲದ ಅಧಃಪತನಕ್ಕೆ ಸಂಕೇತದಂತಿದೆ. ಜೊತೆಗೆ ಏಳೆಂಟು ಗುಡ್ಡಗಾಡು ಹಳ್ಳಿಗಳು, ಅಲ್ಲಿನ ಜನರು, ಹಿಂಸೆ, ಕೌರ್ಯದ ಚಿತ್ರಣ ಇದರಲ್ಲಿದೆ. ಮೂರು ಕತೆಗಳು ಒಟ್ಟು ಸೇರಿ ಒಂದು ಚಿತ್ರವಾಗಿದೆ’ ಎಂದರು.

20 ಕೆಜಿ ಭಾರದ ಲಂಬಾಣಿ ವೇಷ ತೊಟ್ಟ ಶುಭಾ ಪೂಂಜಾ

ಮುಖ್ಯ ಪಾತ್ರದಲ್ಲಿರುವ ಪ್ರತಾಪ್ ನಾರಾಯಣ್, ‘ನನ್ನ ಹಿಂದಿನ ಚಿತ್ರ ಬೆಂಕಿ ಪಟ್ಣದಲ್ಲಿ ಮಿಸ್ ಆದ ಅಂಶಗಳು ಈ ಪಾತ್ರದಲ್ಲಿ ಸಿಗುತ್ತವೆ’ ಎಂದರು. ನಿರ್ಮಾಪಕರಾದ ಸ್ವಾತಿ ಕುಮಾರ್, ಕೋಲಾರದ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು.

YouTube video player