ಶ್ರೀಲಂಕಾದ ಕೊಲಂಬೋ ಸೇರಿದಂತೆ 8 ಕಡೆ ಬಾಂಬ್ ಸ್ಫೋಟವಾಗಿದ್ದು ಕನಿಷ್ಠ 160 ಮಂದಿ ಸಾವನ್ನಪ್ಪಿದ್ದಾರೆ. ಈ ಬಾಂಬ್ ಸ್ಫೋಟದಲ್ಲಿ ತಮಿಳು ನಟಿ ರಾಧಿಕಾ ಶರತ್ ಕುಮಾರ್ ಅದೃಷ್ಟವಶಾತ್ ಪಾರಾಗಿದ್ದಾರೆ. 

ಬಾಂಬ್ ಸ್ಫೋಟವಾದ ಹೋಟೆಲ್ ಸಿನ್ನಾಮೋನ್ ಗ್ರಾಂಡ್ ನಲ್ಲಿ ರಾಧಿಕಾ ಉಳಿದುಕೊಂಡಿದ್ದರು. ಹೋಟೆಲ್ ನಿಂದ ಹೊರಟ ನಂತರ ಬಾಂಬ್ ಸ್ಫೋಟವಾಗಿದೆ. ಈ ಬಗ್ಗೆ ರಾಧಿಕಾ ಟ್ವೀಟ್ ಮಾಡಿದ್ದಾರೆ. 

 

ಸದ್ಯ ರಾಧಿಕಾ ಪುನೀತ್ ಜೊತೆಗೆ ಯುವರತ್ನ ದಲ್ಲಿ ಅಭಿನಯಿಸುತ್ತಿದ್ದಾರೆ. 

ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಇಂದು ಬೆಳಿಗ್ಗೆ ದೊಡ್ಡ ಆಘಾತ ಕಾದಿತ್ತು. ಕೊಲಂಬೋದ ಚರ್ಚ್, ಹೋಟೆಲ್ ಗಳ ಮೇಲೆ ಸರಣಿ ಬಾಂಬ್ ಸ್ಫೋಟವಾಗಿದೆ. ಸ್ಫೋಟದಲ್ಲಿ 160 ಕ್ಕೂ ಹೆಚ್ಚು ಮಂದಿ