Asianet Suvarna News Asianet Suvarna News

ಕೊನೆಯ ಕ್ಷಣದಲ್ಲಿ ಕುಂಕುಮ ಕೇಳಿದ್ಯಾಕೆ ಟಾಲಿವುಡ್ ಸ್ಟಾರ್ ನಟಿ ಕನ್ನಡತಿ ಸೌಂದರ್ಯ..?

ತೆಲುಗಿನ ಆ ಕಾಲದ ಎಲ್ಲಾ ಸೂಪರ್ ಸ್ಟಾರ್ ನಟರ ಜೊತೆಗೂ ತೆರೆ ಹಂಚಿಕೊಂಡಿದ್ದರು ಸೌಂದರ್ಯ, ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಜಗಪತಿ ಬಾಬು ಹೀಗೆ ಸಾಕಷ್ಟು ನಟರ ಜೊತೆ ನಾಯಕಿಯಾಗಿ ಮಿಂಚಿದ್ದರು ಸೌಂದರ್ಯ. ಒಂದು ದಶಕಗಳ ಕಾಲ ನಂಬರ್ ಒನ್ ಪಟ್ಟವನ್ನು ಯಾರಿಗೂ..

star actress soundarya asks kumkum to her daughter in law in last travel srb
Author
First Published Sep 5, 2024, 3:34 PM IST | Last Updated Sep 5, 2024, 3:36 PM IST

ನಟಿ ಸೌಂದರ್ಯ (Soundarya) ಅವರು ಕನ್ನಡದ ಮಣ್ಣಿನ ಮಗಳಾದರೂ ಹೆಚ್ಚು ಹೆಸರು ಮಾಡಿದ್ದು ನೆರೆಯ ತೆಲುಗು ಚಿತ್ರರಂಗದಲ್ಲಿ. ನೂರಕ್ಕೂ ಅಧಿಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಟಾಲಿವುಡ್ ಸಿನಿಮಾ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿದ್ದರು ಕನ್ನಡತಿ ಸೌಂದರ್ಯ. ನಟಿ ಸೌಂದರ್ಯ ಅವರು ಕನ್ನಡದಲ್ಲಿ ಕೂಡ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದ್ವೀಪ ಎಂಬ ಚಿತ್ರವನ್ನು ಕನ್ನಡದ ತಮ್ಮ ಅಭಿಮಾನಕ್ಕಾಗಿ ನಿರ್ಮಿಸಿ ಕನ್ನಡಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ತಂದುಕೊಟ್ಟಿದ್ದಾರೆ ಸೌಂದರ್ಯ!

ತೆಲುಗಿನ ಆ ಕಾಲದ ಎಲ್ಲಾ ಸೂಪರ್ ಸ್ಟಾರ್ ನಟರ ಜೊತೆಗೂ ತೆರೆ ಹಂಚಿಕೊಂಡಿದ್ದರು ಸೌಂದರ್ಯ, ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಜಗಪತಿ ಬಾಬು ಹೀಗೆ ಸಾಕಷ್ಟು ನಟರ ಜೊತೆ ನಾಯಕಿಯಾಗಿ ಮಿಂಚಿದ್ದರು ಸೌಂದರ್ಯ. ಒಂದು ದಶಕಗಳ ಕಾಲ ನಂಬರ್ ಒನ್ ಪಟ್ಟವನ್ನು ಯಾರಿಗೂ ಬಿಟ್ಟುಕೊಡದೇ ಕಾಪಾಡಿಕೊಂಡಿದ್ದರು. ಇಂಥ ನಟಿ ಸೌಂದರ್ಯ ಕೇವಲ 32 ವರ್ಷಕ್ಕೇ ದುರಂತ ಅಂತ್ಯ ಕಂಡಿದ್ದು ಗೊತ್ತೇ ಇದೆ. 

ಗೌರಿ-ಗಣೇಶ ಹಬ್ಬಕ್ಕೆ 'ಇಬ್ಬನಿ ತಬ್ಬಿದ ಇಳೆಯಲಿ' ಟ್ರೀಟ್, ಈ ಸಿನಿಮಾ ವಿಶೇಷತೆಗಳೇನು..?

ಹೈದ್ರಾಬಾದ್‌ಗೆ ಯಾವುದೋ ರಾಜಕೀಯ ಪಕ್ಷದ ಪ್ರಚಾರಕ್ಕಾಗಿ ತಮ್ಮ ಅಣ್ಣ ಅಮರನಾಥ್ ಜೊತೆ ಹೆಲಿಕಾಪ್ಟರ್‌ ಏರಿದ್ದ ನಟಿ ಸೌಂದರ್ಯ ಅವರು ಮತ್ತೆ ವಾಪಸ್ ಆಗಲೇ ಇಲ್ಲ. ಕಾರಣ, ಅವರು ಹೋಗುತ್ತಿದ್ದ ವಿಮಾನ ಹೊರಟ ಸ್ವಲ್ಪೇ ಹೊತ್ತಿನಲ್ಲಿ ದುರಂಥಕ್ಕೀಡಾಗಿ ನಟಿ ಸೌಂದರ್ಯ ಹಾಗು ಅಣ್ಣ ಅಮರನಾಥ್ ಬೆಂಕಿಯಲ್ಲಿ ಸಜೀವ ದಹನವಾಗಿ ಹೋದರು. ಆ ದುರಂಥವನ್ನು ನೆನೆದು ಈಗಲೂ ಕಣ್ಣು ತುಂಬಿಕೊಳ್ಳುತ್ತಾರೆ. 

ಅಂದು ನಟಿ ಸೌಂದರ್ಯ ಕೊನೆಯ ಕ್ಷಣ ಹೇಗಿತ್ತು ಎಂಬುದನ್ನು ಅವರೊಂದಿಗೇ ದಿವಂಗತರಾದ ಅಣ್ಣ ಅಮರನಾಥ್ ಪತ್ನಿ ನಿರ್ಮಲಾ ಅವರು ಹೊರಜಗತ್ತಿಗೆ ಬಹಿರಂಗ ಪಡಿಸಿದ್ದಾರೆ. ನಟಿ ಸೌಂದರ್ಯ ಅವರು ಹೊರಟವರು ಮತ್ತೆ ವಾಪಸ್ ಬಂದು ಕುಂಕುಮ ಕೇಳಿದ್ದರಂತೆ. ಅದನ್ನು ಕಂಡು ಅವರ ಅತ್ತಿಗೆ ನಿರ್ಮಲಾಗೆ ಆಶ್ಚರ್ಯ ಆಗಿತ್ತಂತೆ. ಏಕೆಂದರೆ, ಸೌಂದರ್ಯ ಅವರಿಗೆ ಹೊರಗೆ ಹೋಗುವಾಗ ಯಾವತ್ತೂ ಕುಂಕುಮ ಹಚ್ಚಿಕೊಳ್ಳುವ ಅಭ್ಯಾಸ ಇರಲಿಲ್ಲವಂತೆ. 

ಕಿಚ್ಚ ಸುದೀಪ್ ಈ ಮಾತಿಗೆ 'ಡಿ ಬಾಸ್' ಫ್ಯಾನ್ಸ್ ಫಿದಾ ಆಗ್ಬಿಟ್ರಾ? ಸ್ವಲ್ಪ ಈ ಕಡೆ ಕಣ್ಣು ಹಾಯಿಸಿ..!

ಆದರೆ, ಆವತ್ತು ಪ್ರಯಾಣಕ್ಕೆ ಹೊರಟವರು ವಾಪಸ್ ಬಂದು ಕುಂಕುಮ ಕೊಡು ಎಂದು ಅತ್ತಿಗೆಯನ್ನು ಕೇಳಿ ಪಡೆದು, ಹಣೆಗೆ, ಬೈತಲೆಗೆ ಕುಂಕುಮ  ಇಟ್ಟುಕೊಂಡು ಅತ್ತಿಗೆಯನ್ನು ತಬ್ಬಿಕೊಂಡು ಹೊರಟಿದ್ದರಂತೆ. ಆಗ ಸೌಂದರ್ಯ ಅಣ್ಣ ಅಮರನಾಥ್ ಪತ್ನಿ ಅವರಿಗೆ ಯಾಕೆ ಇವರು ಹೀಗೆಲ್ಲಾ ಮಾಡಿದ್ರು ಅಂತ ಅರ್ಥವಾಗಿರಲಿಲ್ಲವಂತೆ. ಆದರೆ, ಬಳಿಕ ದುರ್ಘಟನೆ ನಡೆದು ಸೌಂದರ್ಯ ಇಹಲೋಕ ತ್ಯಜಿಸಿದ ಮೇಲೆ ಅಂದು ಅವರು ಮಾಡಿದ್ದು ನೆನಪಾಗಿದೆ ಅಂದಿದ್ದಾರೆ. 

ಹಾಗಿದ್ದರೆ ನಟಿ ಸೌಂದರ್ಯ ಅವರಿಗೆ ಹೇಳಿಕೊಳ್ಳುವಷ್ಟು ಅರಿವು ಆಗದಿದ್ದರೂ ಅಂದು ನಡೆಯಲಿರುವ ದುರ್ಘಟನೆಯ ಸೂಚನೆ ಸಿಕ್ಕಿತ್ತು ಎನ್ನಬಹುದು. ಆದರೆ, ಅವರಿಗೆ ಕ್ಲಿಯರ್‌ ಆಗಿ ಹಾಗೇ ಆಗುತ್ತೆ, ಅಥವಾ ತಮ್ಮಿಬ್ಬರ ಪ್ರಾಣಪಕ್ಷಿ ಹಾರಿ ಹೋಗುತ್ತೆ ಎಂಬುದು ಗೊತ್ತಾಗಿದ್ದರೆ ಅವರು ತಮ್ಮ ಪ್ರಯಾಣವನ್ನು ಖಂಡಿತ ಕ್ಯಾನ್ಸಲ್ ಮಾಡುತ್ತಿದ್ದರು. ಆದರೆ, ಹಾಗಾಗಲಿಲ್ಲ. ಅವರಿಗೆ ಸೂಚನೆ ಸಿಕ್ಕಿತ್ತಾ ಅಥವಾ ಯಾಕೋ ಒಳಮನಸ್ಸಿನಲ್ಲಿ ಗಾಬರಿಯಾಗಿತ್ತಾ?

ಹುಟ್ಟುಕಿವುಡರಾಗಿದ್ದ ನಟ ಬಾಲಣ್ಣ ಬದುಕಿನಲ್ಲಿ ನಡೆದ ಘನಘೋರ ದುರಂತವೇನು?

ಅದೇನಾಗಿತ್ತು ಎಂದು ನಾವೀಗ ಹೇಳುವುದು ಕಷ್ಟ ಎನ್ನುತ್ತಾರೆ ಸೌಂದರ್ಯ ಅವರ ಅತ್ತಿಗೆ ನಿರ್ಮಲಾ ಕೂಡ. ಏಕೆಂದರೆ, ಕೇಳೋಣ ಎಂದರೆ ಇಂದು ಸೌಂದರ್ಯ ನಮ್ಮ ಜೊತೆ ಇಲ್ಲ. ಆದರೆ, ಏನೂ ಸೂಚನೆ ಸಿಕ್ಕಿರಲಿಲ್ಲ ಎಂದರೆ ಅವರು ಕೊನೆ ಕ್ಷಣದಲ್ಲಿ ಕುಂಕುಮ ಬೇಡಿ ಇಟ್ಟುಕೊಳ್ಳುತ್ತಿರಲಿಲ್ಲ. ಎಲ್ಲವೂ ವಿಧಿಲಿಖಿತ ಅಂತಾರೆ ಅಮರನಾಥ್ ಪತ್ನಿ ನಿರ್ಮಲಾ. ಇಂದು ಅಮರ ಸೌಂದರ್ಯ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ. ಸತ್ತ ನಂತರವೂ ಸೌಂದರ್ಯ ಸೇವೆ ಈ ಮೂಲಕ ಮುಂದುವರೆಯುತ್ತಿದೆ. 

Latest Videos
Follow Us:
Download App:
  • android
  • ios