Asianet Suvarna News Asianet Suvarna News

ಶ್ರೇಯಸ್ ಕೆ.ಮಂಜು ಹೊಸ ಸಿನಿಮಾ ಹೆಸರು ರಾಣ!

ನಂದಕಿಶೋರ್ ಮುಂದಿನ ಚಿತ್ರದ ಟೈಟಲ್ ರಿಲೀವ್. 'ರಾಣ'ಗೆ ಶ್ರೇಯಸ್ ನಾಯಕ.
 

Shreyas K manju and Nandakishore next film project Raana vcs
Author
Bangalore, First Published Jul 2, 2021, 4:18 PM IST
  • Facebook
  • Twitter
  • Whatsapp

ಶ್ರೇಯಸ್ ಕೆ. ಮಂಜು ಹೊಸ ಚಿತ್ರದ ಹೆಸರು ‘ರಾಣ’. ನಂದಕಿಶೋರ್ ನಿರ್ದೇಶನದ, ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಈ ಚಿತ್ರದ ಹೆಸರನ್ನು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಅನಾವರಣ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. ಜುಲೈ 7ಕ್ಕೆ ಮುಹೂರ್ತ ನಡೆಯಲಿದೆ. ಚಿತ್ರದ ನಾಯಕಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ವಿಷ್ಣುಪ್ರಿಯಾ ಚಿತ್ರದಲ್ಲಿ ಶ್ರೇಯಸ್ ,ಪ್ರಿಯಾ ವಾರಿಯಲ್ ಲವ್‌ ಸ್ಟೋರಿ ಹೇಗಿದೆ ನೋಡಿ! 

ಈ ಚಿತ್ರದ ಶೀರ್ಷಿಕೆ ಮೊದಲು ನಿರ್ಮಾಪಕ ರಮೇಶ್ ಕಶ್ಯಪ್ ಅವರ ಬಳಿಯಿತ್ತು. ಯಶ್ ಅವರು ‘ರಾಣ’ ಹೆಸರಿನ ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಆದರೆ, ಈಗ ಇದೇ ಹೆಸರಿನಲ್ಲಿ ಶ್ರೇಯಸ್ ನಟಿಸುತ್ತಿದ್ದಾರೆ. ಶೀರ್ಷಿಕೆ ನೀಡಿದ ರಮೇಶ್ ಕಶ್ಯಪ್ ಹಾಗೂ ಯಶ್ ಅವರಿಗೆ ನಿರ್ಮಾಪಕ ಪುರುಷೋತ್ತಮ ಗುಜ್ಜಲ್, ಕೆ.ಮಂಜು ಹಾಗೂ ಶ್ರೇಯಸ್ ಧನ್ಯವಾದ ತಿಳಿಸಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ.

 

Follow Us:
Download App:
  • android
  • ios