ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಚಿತ್ರಕ್ಕಾಗಿ ವಿಶೇಷವಾಗಿ ರೂಪಿಸಿರುವ ಶಿಪ್ ಸಾಂಗ್ ಅನ್ನು ಶಿವರಾಜ್‌ಕುಮಾರ್ ಅವರು ಬಿಡುಗಡೆ ಮಾಡಿದರು. ಹಾಡಿನ ಬಿಡುಗಡೆ ಜೊತೆಗೆ ಹಾಡಿಗೆ ವೇದಿಕೆ ಮೇಲೆಯೇ ಡ್ಯಾನ್ಸ್ ಮಾಡಿ ರಂಜಿಸಿದರು.
ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಚಿತ್ರಕ್ಕಾಗಿ ವಿಶೇಷವಾಗಿ ರೂಪಿಸಿರುವ ಶಿಪ್ ಸಾಂಗ್ ಅನ್ನು ನಟ ಶಿವರಾಜ್‌ಕುಮಾರ್ ಅವರು ಬಿಡುಗಡೆ ಮಾಡಿದರು. ಹಾಡಿನ ಬಿಡುಗಡೆ ಜೊತೆಗೆ ಹಾಡಿಗೆ ವೇದಿಕೆ ಮೇಲೆಯೇ ಡ್ಯಾನ್ಸ್ ಮಾಡಿ ರಂಜಿಸಿದರು ಶಿವಣ್ಣ. ದೃಶ್ಯಂತ್ ಹಾಗೂ ಆಶಿಕಾ ರಂಗನಾಥ್ ಅವರು ಜೋಡಿಯಾಗಿ ನಟಿಸಿರುವ ಈ ಚಿತ್ರವನ್ನು ದೀಪಕ್ ತಿಮ್ಮಪ್ಪ ಹಾಗೂ ಸುನಿ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಶಿವರಾಜ್‌ಕುಮಾರ್, ‘ನಾನು ಗತವೈಭವ ಚಿತ್ರದ ಚಿತ್ರೀಕರಣದ ಸೆಟ್‌ಗೆ ಒಮ್ಮೆ ಹೋಗಿದ್ದೆ. ತುಂಬಾ ಇಷ್ಟವಾಗಿತ್ತು. ಸಿಂಪಲ್ ಸುನಿ ಅವರ ಯೋಚನೆ ಚಿಕ್ಕದಾಗಿ ಕಂಡರೂ ತೆರೆ ಮೇಲೆ ಅದನ್ನು ಸಿನಿಮಾ ಆಗಿ ನೋಡುವಾಗ ದೊಡ್ಡದಾಗಿ ಕಾಣಿಸುತ್ತದೆ. ಇದು ಅವರು ಸಿನಿಮಾ ನಿರ್ದೇಶನದ ವಿಶೇಷತೆ. ಸುನಿ ಅವರು ಕಮರ್ಷಿಯಲ್, ಜೀವನದ ಮೌಲ್ಯ, ಮೇಕಿಂಗ್, ಇಂದಿನ ಟ್ರೆಂಡ್‌ಗೆ ತಕ್ಕಂತೆ ಅಚ್ಚುಕಟ್ಟಾಗಿ ಸಿನಿಮಾ ಮಾಡುತ್ತಾರೆ. ಈ ಚಿತ್ರದ ಮೂಲಕ ಫ್ಯಾಂಟಸಿ ಮೈಥಾಲಜಿ ರೋಮ್ಯಾಂಟಿಕ್ ಲವ್ ಸ್ಟೋರಿ ಹೇಳೋದಿಕ್ಕೆ ಹೊರಟಿದ್ದಾರೆ’ ಎಂದರು. ನಿರ್ದೇಶಕ ಸಿಂಪಲ್ ಸುನಿ, ನಾಯಕ ದುಶ್ಯಂತ್, ನಾಯಕಿ ಆಶಿಕಾ ರಂಗನಾಥ್ ಹಾಜರಿದ್ದು ಚಿತ್ರದ ಬಗ್ಗೆ ಮಾತನಾಡಿದರು.
ದಿ ಟಾಸ್ಕ್ ಚಿತ್ರದ ಟ್ರೇಲರ್ ಬಿಡುಗಡೆ
ರಾಘು ಶಿವಮೊಗ್ಗ ನಿರ್ದೇಶನದ ‘ದಿ ಟಾಸ್ಕ್’ ಸಿನಿಮಾ ಇದೇ ನವೆಂಬರ್ 21ಕ್ಕೆ ತೆರೆಗೆ ಬರುತ್ತಿದೆ. ಈಗ ಚಿತ್ರದ ಟೀಸರ್ ಬಿಡುಗಡೆ ಆಯಿತು. ಪೊಲೀಸ್ ಅಧಿಕಾರಿ ಎಂ ಚಂದ್ರಶೇಖರ್, ಲಹರಿ ವೇಲು, ವಿಷ್ಣು ಸೇನೆಯ ವೀರಕಪುತ್ರ ಶ್ರೀನಿವಾಸ್, ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ‘ಪೆಂಟಗನ್’ ಚಿತ್ರದಲ್ಲಿ ಅಭಿನಯಿಸಿದ್ದ ಸಾಗರ್ ಹಾಗೂ ‘ಭೀಮ’ ಚಿತ್ರದ ಜಯಸೂರ್ಯ ಅವರು ಈ ಚಿತ್ರದ ನಾಯಕರು.
ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್, ಸಂಪತ್ ಮೈತ್ರಿಯಾ, ಬಿ ಎಂ ಗಿರಿರಾಜ್, ಪಿಡಿ ಸತೀಶ್ ಚಂದ್ರ, ಅಶ್ವಿನ್ ಹಾಸನ್ ಚಿತ್ರದ ಮುಖ್ಯ ಪಾತ್ರಧಾರಿಗಳು. ರಾಘು ಶಿವಮೊಗ್ಗ, ‘ಹಲವು ನೈಜ ಘಟನೆಗಳೇ ಈ ಚಿತ್ರಕ್ಕೆ ಸ್ಫೂರ್ತಿ. ಕ್ರೈಮ್, ಥ್ರಿಲ್ಲರ್ ಹಾಗೂ ಆ್ಯಕ್ಷನ್ ಸಿನಿಮಾ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಟೀಸರ್‌ನಷ್ಟೇ ಇಡೀ ಸಿನಿಮಾ ಕುತೂಹಕಾರಿಯಾಗಿರುತ್ತದೆ’ ಎಂದರು. ವಿಜಯ್ ಕುಮಾರ್ ಹಾಗೂ ರಾಮಣ್ಣ ಚಿತ್ರದ ನಿರ್ಮಾಪಕರು.
