ನಟ ಕಾಕ್ರೋಚ್ ಸುಧಿ, "ಯುಐ" ಸಕ್ಸಸ್ ಮೀಟ್‌ನಲ್ಲಿ ಶಿವಣ್ಣನವರ ಬಗ್ಗೆ ಮಾತನಾಡಿದ್ದಾರೆ. ಶಿವಣ್ಣನವರು ಸಿನಿಮಾದಲ್ಲಿ ಶೂಟ್ ಮಾಡಿದರೆ, ನಟರು ಸ್ಟಾರ್ ಆಗುತ್ತಾರೆ. ಉಪೇಂದ್ರ, ದುನಿಯಾ ವಿಜಯ್, ಯಶ್, ಆದಿ ಲೋಕೇಶ್, ಧನಂಜಯ ಅವರ ಉದಾಹರಣೆಗಳನ್ನು ನೀಡಿದರು. ತಮಗೂ ಟಗರು ಸಿನಿಮಾದಲ್ಲಿ ಶಿವಣ್ಣ ಶೂಟ್ ಮಾಡಿದ್ದರಿಂದ ಅರ್ಧಂಬರ್ಧ ಸ್ಟಾರ್ ಆಗಿದ್ದೇನೆ ಎಂದರು. ಬೆಳೆಸುವ ಗುಣ ಶಿವಣ್ಣನಲ್ಲಿದೆ ಎಂದು ಸುಧಿ ಹೇಳಿದರು.

ಬೆಂಗಳೂರು (ಮಾ.11): ಪೊಲೀಸರು ಯಾರಿಗಾದರೂ ಶೂಟ್ ಮಾಡಿದರೆ ಅವರ ಫೋಟೋಗೆ ಹಾರ ಬೀಳುತ್ತದೆ. ಆದರೆ, ಅದೇ ಶಿವಣ್ಣ ಅವರು ಸಿನಿಮಾದಲ್ಲಿ ಶೂಟ್ ಮಾಡಿದರೆ ಅವರ ಕಟೌಟ್‌ಗೆ ಹಾರ ಬೀಳುತ್ತದೆ. ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರಿಂದ ಶೂಟ್ ಮಾಡಿಸಿಕೊಂಡಂತಹ ಎಲ್ಲ ನಟರೂ ಕೂಡ ಇದೀಗ ದೊಡ್ಡ ಸ್ಟಾರ್‌ಗಳಾಗುತ್ತಾರೆ ಎಂದು ನಟ ಕಾಕ್ರೋಚ್ ಸುಧಿ ಹೇಳಿದ್ದಾರೆ.

ಇತ್ತೀಚೆಗೆ ಯುಐ ಸಿನಿಮಾ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಶಿವರಾಜ್ ಕುಮಾರ್ ಅವರು ಅಮೇರಿಕಾದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್ ಬಂದಿದ್ದಾರೆ ಎಂಬ ಸುದ್ದಿಯನ್ನು ತಿಳಿದಿದ್ದಾರೆ. ಈ ವೇಳೆ ನಟ ಶಿವಣ್ಣನ ಬಗ್ಗೆ ಮಾತನಾಡಿದ ಕಾಕ್ರೋಚ್ ಸುಧಿ ತನಗೆ ಈ ಹೆಸರು ಬರಲು ಕಾರಣವಾದ ಟಗರು ಸಿನಿಮಾವನ್ನು ನೆನಪು ಮಾಡಿಕೊಂಡಿದ್ದಾರೆ. ಪೊಲೀಸರು ಯಾರಿಗಾದರೂ ಶೂಟ್ ಮಾಡಿದರೆ ಅವರ ಫೋಟೋಗೆ ಹಾರ ಬೀಳುತ್ತದೆ. ಆದರೆ, ಅದೇ ಶಿವಣ್ಣ ಅವರು ಸಿನಿಮಾದಲ್ಲಿ ಶೂಟ್ ಮಾಡಿದರೆ ಅವರ ಕಟೌಟ್‌ಗೆ ಹಾರ ಬೀಳುತ್ತದೆ. ಅಂದರೆ, ಅವರು ದೊಡ್ಡ ಸ್ಟಾರ್ ನಟರಾಗುತ್ತಾರೆ ಎಂದು ಹೇಳಿದರು.

ಮನೆಯಲ್ಲಿ ಮಗುಗೆ ಹುಷಾರಿಲ್ಲ ಎಂದರೆ ಡಾಕ್ಟರ್‌ಗೆ ತೋರಿಸಿದರೂ ಗುಣಮುಖ ಆಗುವುದಿಲ್ಲ. ಆಗ ಕೆಲವರು ಕೆಲವೊಂದು ಡಾಕ್ಟರ್ ಹೆಸರು ಹೇಳುತ್ತಾರೆ. ಅವರ ಕೈಗುಣ ಚೆನ್ನಾಗಿದೆ ಎಂದು ಸಲಹೆ ನೀಡುತ್ತಾರೆ. ಮನೆಯ ವಾಸ್ತು ಸರಿಯಾಗಿಲ್ಲ, ಮನೆಯಲ್ಲಿ ಹೆಚ್ಚು ಸಮಸ್ಯೆ ಕಾಡುತ್ತಿದ್ದರೆ ಆ ಸ್ವಾಮೀಜಿಯನ್ನು ಕರೆಸಿ, ಅವರ ಕಾಲ್ಗುಣ ಚೆನ್ನಾಗಿದೆ ಎಲ್ಲ ಸರಿ ಹೋಗುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ನಮಗೆ ಒಳ್ಳೆಯ ದಿನಗಳು ಇರುವುದಿಲ್ಲ, ನಾವು ಮಾಡುವ ಕೆಲಸ ಸಕ್ಸಸ್ ಆಗುವುದಿಲ್ಲ ಎಂದಾಗ ಆ.. ಗುರುಗಳ ಬಳಿ ಹೋಗಿ ಅವರ ಬಾಯಿಗುಣ ಚೆನ್ನಾಗಿದೆ ಎಂದು ಹೇಳುತ್ತಾರೆ. 

ಉಪೇಂದ್ರ ಸೂಪರ್ ಸ್ಟಾರ್:
ಉಪೇಂದ್ರ ಅವರು ಶಿವಣ್ಣ ಅವರ ಜೊತೆಗೆ ಪ್ರೀತ್ಸೆ ಸಿನಿಮಾ ಮಾಡ್ತಾರೆ. ಅದರಲ್ಲಿ ಶಿವಣ್ಣ ಉಪ್ಪಿ ಸರ್‌ಗೆ ಶೂಟ್ ಮಾಡ್ತಾರೆ. ಅಲ್ಲಿವರೆಗೆ ರಿಯಲ್ ಸ್ಟಾರ್ ಆಗಿದ್ದ ಉಪೇಂದ್ರ ಅವರು ನಂತರ ಸೂಪರ್ ಸ್ಟಾರ್ ಆಗಿ ಬೆಳೆಯುತ್ತಾರೆ.

ದುನಿಯಾ ವಿಜಯ್‌:
ರಾಕ್ಷಸ ಸಿನಿಮಾದಲ್ಲಿ ಶಿವಣ್ಣ ಅವರು ದುನಿಯಾ ವಿಜಯ್ ಅವರಿಗೆ ಶೂಟ್ ಮಾಡುತ್ತಾರೆ. ಅದನ್ನು ಕಟ್ ಮಾಡಿ ನೋಡಿದ್ರೆ ವಿಜಿ ಅಣ್ಣ ಸ್ಟಾರ್ ಆಗಿ ಬೆಳೆದಿದ್ದಾರೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್; ಮಾ.12ರಿಂದ ಮೈಸೂರಿನಲ್ಲಿ 4 ದಿನ ಡವಿಲ್ ಚಿತ್ರೀಕರಣಕ್ಕೆ ಅನುಮತಿ!

ರಾಕಿಂಗ್ ಸ್ಟಾರ್ ಯಶ್:
ತಮಸ್ಸು ಸಿನಿಮಾದಲ್ಲಿ ನಟ ಯಶ್ ಅವರಿಗೆ ಶಿವಣ್ಣ ಶೂಟ್ ಮಾಡುತ್ತಾರೆ. ಅದನ್ನು ಕಟ್ ಮಾಡಿದ್ರೆ ಯಶ್ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ.

ಆದಿ ಲೋಕೇಶ್:
ಜೋಗಿ ಸಿನಿಮಾದಲ್ಲಿ ಶಿವಣ್ಣ ಆದಿ ಅಣ್ಣಿಗೆ ಶೂಟ್ ಮಾಡುತ್ತಾರೆ. ನಂತರ ಅವರು ತುಂಬಾ ದೊಟ್ಟ ಮಟ್ಟಕ್ಕೆ ಬೆಳೆಯುತ್ತಾರೆ.

ಡಾಲಿ ಧನಂಜಯ:
ಟಗರು ಸಿನಿಮಾದಲ್ಲಿ ನಟ ಧನಂಜಯಗೆ ಡಾಲಿ ಎಂದು ಹೆಸರಿರುತ್ತದೆ. ಇದೇ ಸಿನಿಮಾದಿಂದ ಡಾಲಿ ಧನಂಜಯ ಎಂತಲೂ ಹೆಸರು ಬರುತ್ತದೆ. ಇದೇ ಟಗರು ಸಿನಿಮಾದಲ್ಲಿ ಶಿವಣ್ಣ ಡಾಲಿಗೆ ಶೂಟ್ ಮಾಡಿದ್ದಕ್ಕೆ ನಂತರ ದೊಡ್ಡ ಸ್ಟಾರ್ ನಟನಾಗಿ ಬೆಳೆದಿದ್ದಾರೆ.

ಕಾಕ್ರೋಚ್ ಸುಧಿ:
ಅದೇ ಸಿನಿಮಾದಲ್ಲಿ ಆರ್ಟ್ ಡಿಪಾರ್ಟ್‌ಮೆಂಟ್ ಹುಡುಗ ನನಗೆ ಬೇಕೋ ಬೇಡ್ವೋ ಎನ್ನುವ ಹಾಗೆ ಅರ್ಧಂಬರ್ಧ ಶೂಟ್ ಮಾಡ್ತಾರೆ. ಇದೀಗ ನಾನು ಅರ್ಧಂಬರ್ಧ ಸ್ಟಾರ್ ನಟನಾಗಿದ್ದೇನೆ ಎಂದು ನಟ ಕಾಕ್ರೋಚ್ ಸುಧಿ ಹೇಳಿದ್ದಾರೆ.

View post on Instagram

ಇನ್ನು ನಟ ಸುಧಿ ಅವರ ಮಾತಿಗೆ ಯುಐ ಸಿನಿಮಾದ ಸಕ್ಸಸ್‌ ಮೀಟ್‌ಗೆ ಬಂದಿದ್ದ ಎಲ್ಲ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ. ಇದೇ ವೇದಿಕೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅನುಶ್ರೀ ಅವರು ಕೂಡ ಶಹಬ್ಬಾಶ್ ಕೊಟ್ಟಿದ್ದಾರೆ. ಇನ್ನು ಸಿನಿಮಾದಲ್ಲಿ ಕೈ ಗುಣ, ಕಾಲ್ಗುಣಕ್ಕಿಂತ ಬೆಳೆಸೋ ಗುಣ ಇರುವ ಶಿವಣ್ಣ ಹಾಗೂ ದೊಡ್ಮನೆಯಲ್ಲಿದೆ ಎಂದರು.

ಇದನ್ನೂ ಓದಿ: ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಸಚಿವರ ಹೆಸರಲ್ಲ, ಮೊಬೈಲ್‌ನಲ್ಲಿ ರಾಜಕಾರಣಿ ಫೋಟೋನೇ ಸಿಕ್ತು!

ದುನಿಯಾ ವಿಜಯ್ ಅವರು ಸಲಗ ಹಾಗೂ ಭೀಮ ಸಿನಿಮಾದಲ್ಲಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಇನ್ನು ನಾನು ಧನು ಅಣ್ಣ ಬಡವರ ಮನೆಯ ಮಕ್ಕಳು. ಬಡವರ ಮಕ್ಕಳನ್ನು ಬೆಳೆಯೋಕೆ ಬಿಡಲ್ಲ ಎಂದು ಮಾತನಾಡುತ್ತಿದ್ದೆವು. ಕನ್ನಡ ಚಿತ್ರರಂಗ ನಮ್ಮನ್ನು ಇದೀಗ ದೊಡ್ಡ ಮಟ್ಟಕ್ಕೆ ಬೆಳೆಸಿದೆ. ಉಪ್ಪಿ ಸರ್ ಆಕ್ಷನ್ ನೋಡಿ ಬೆಳದವರು ನಾವು, ಇದೀಗ ಅವರ ಆಕ್ಷನ್ ಕಟ್‌ನಲ್ಲಿ ಕೆಲಸ ಕೊಟ್ಟಿದ್ದಾರೆ ಥ್ಯಾಂಕ್ಸ್ ಉಪ್ಪಿಸರ್ ಎಂದು ಕಾಕ್ರೋಚ್ ಸುಧಿ ಹೇಳಿಕೊಂಡಿದ್ದಾರೆ.