ಬೆಂಗಳೂರು(ಜು.  08) ಆಸ್ಪತ್ರೆಗೆ  ದಾಖಲಾಗಿದ್ದ ನಿರ್ಮಾಪಕ ಧೀರ ರಾಕ್ ಲೈನ್ ವೆಂಕಟೇಶ್ ಅವರಿಗೆ ಕೊರೋನಾ ದೃಢವಾಗಿದೆ.

ರಾಕ್ ಲೈನ್ ವೆಂಕಟೇಶ್ ಪುತ್ರ ಅಭಿಲಾಷ್ ವೈದ್ಯರಾಗಿದ್ದು, ತಂದೆಗೆ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.  ರಾಕ್ ಲೈನ್ ಅವರಿಗೆಗೆ ಕೊರೊನಾ ಸೋಂಕು ತಾಗಿರುವ ವಿಚಾರವನ್ನ ಅವರ ಮತ್ತೊಬ್ಬ ಪುತ್ರ ಯತೀಶ್ ಸುವರ್ಣ ನ್ಯೂಸ್ ಗೆ ಖಚಿತ ಪಡಿಸಿದ್ದಾರೆ

ಕೊರೋನಾ ವೈರಸ್ ಗೆ ತುತ್ತಾದ ಕರ್ನಾಟಕದ ರಾಜಕಾರಣಿಗಳಿವರು

ತಂದೆಯ ಸಂಪರ್ಕದಲ್ಲಿದ್ದವರೆಲ್ಲರೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲಿ ಅಂತಲೂ ಯತೀಶ್ ಕಳಕಳಿಯಿಂದ ಕೇಳಿಕೊಂಡಿದ್ದಾರೆ.  ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮುಂಜಾಗೃತಾ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಸಂಸದೆ ಸುಮಲತಾ ಅವರಿಗೂ ಕೊರೋನಾ ಪಾಸಿಟಿವ್ ಬಂದಿತ್ತು. ಅಂಬರೀಶ್ ಸ್ಮಾರಕದ ವಿಚಾರ ಸಂಬಂಧ  ಸಿಎಂ ಯಡಿಯೂರಪ್ಪ ಅವರನ್ನು ಸುಮಲತಾ, ಪುತ್ರ ಅಭಿಷೇಕ್,  ಹಿರಿಯ ನಟ ದೊಡ್ಡಣ್ಣ ಮತ್ತು ರಾಕ್ ಲೈನ್ ವೆಂಕಟೇಶ್ ಭೇಟಿ ಮಾಡಿದ್ದರು.