ಚಿತ್ರಮಂದಿರಕ್ಕೆ ಬರ್ತಿದ್ದಾಳೆ ದಿಯಾ/ ಕ್ಲೈಮಾಕ್ಸ್ ಬದಲು ಮಾಡಿದ್ದಾರಂತೆ/ ಅಕ್ಷೋಬರ್ 23 ಕ್ಕೆ ಬಿಡುಗಡೆ/ ಸದಭಿರುಚಿಯ ಚಿತ್ರ ನೋಡಿ ಹಾರೈಸಿ
ಬೆಂಗಳೂರು(ಅ. 16) ಕೊರೋನಾ ಲಾಕ್ ಡೌನ್ ಕಾರಣಕ್ಕೆ ಅನೇಕ ಸದಭೀರುಚಿಯ ಚಿತ್ರಗಳನ್ನು ಪ್ರೇಕ್ಷಕರು ಅನಿವಾರ್ಯವಾಗಿ ಆನ್ ಲೈನ್ ನಲ್ಲಿ ವೀಕ್ಷಿಸಬೇಕಾಗಿ ಬಂತು. ಅಂಥದ್ದೇ ಒಂದೊಳ್ಳೆ ಸಿನಿಮಾ ದಿಯಾ. ಈ ಚಿತ್ರ ಮನೋಡಿದವರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ದಿಯಾ ನಾಯಕಿ ಸದಾ ಖುಷಿಯಾಗಿರುವುದೇಕೆ?
ಈಗ ಅದೆ ದಿಯಾ ಅಕ್ಟೋಬರ್ 23 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಇಡಲಾಗಿದೆ. ಚಿತ್ರದ ಕ್ಲೈಮಾಕ್ಸ್ ಬದಲಿಸಲಾಗಿದೆಯಂತೆ. ನಾಯಕಿ ಯಾರಿಗೆ ಸಿಗುತ್ತಾಳೆ? ಲವ್ ಸ್ಟೋರಿ ಒಂದಾಗಲಿದೆಯೇ? ಎಂಬೆಲ್ಲ ಕುತೂಹಲ ತಣಿಸಿಕೊಳ್ಳಲು ಚಿತ್ರಮಂದಿರಕಲ್ಕೆ ತೆರಳಬೇಕಿದೆ.
ಕೊರೋನಾ ಲಾಕ್ ಡೌನ್ ಕಾರಣಕ್ಕೆ ಚಿತ್ರಮಂದರಿಗಳನ್ನು ಬಂದ್ ಮಾಡಿ ಸುಮಾರು ಆರು ತಿಂಗಳುಗಳೇ ಕಳೆದಿದ್ದವು. ಸಿನಿಮಾ ಶೂಟಿಂಗ್ ಸಹ ನಿಲ್ಲಿಸಲಾಗಿತ್ತು. ನಿಧಾನವಾಗಿ ಅನ್ ಲಾಕ್ ತೆರೆದುಕೊಂಡಿದ್ದು ಅಕ್ಟೋಬರ್ 15 ರಿಂದ ಚಿತ್ರಮಂದಿರ ತೆರೆಯಲಾಗಿದೆ.
