ಬೆಂಗಳೂರು[ಅ. 08]  ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್  ಅಡಿಯಲ್ಲಿ T.R. ಚಂದ್ರಶೇಖರ್ ನಿರ್ಮಾಣದೊಂದಿಗೆ ಜಾಕಿ ತಿಮ್ಮೇಗೌಡ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ ‘ಶೋಕಿವಾಲ’ ಕನ್ನಡದ ಮಟ್ಟಿಗೆ ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ.

ನಾಯಕ ಅಜಯ್ ರಾವ್ ರವರ ಕ್ಯಾರೆಕ್ಟರ್ ರೀವಿಲ್ ಪೋಟೋ ರೀಲಿಸ್ ಮಾಡಿದ್ದು ಒಳ್ಳೆ ಮಾತುಗಳು ಕೇಳಿ  ಬಂದಿವೆ.  ನಾಯಕಿ ಸಂಜನಾ ಆನಂದ್ ಅವರ ಲುಕ ಸಹ ಜನಮೆಚ್ಚುಗೆ ಪಡೆದುಕೊಂಡಿದೆ.

ವಿಜಯದಶಮಿ ಹಬ್ಬಕ್ಕೆ ಒಂದು ಪೋಟೋ ವನ್ನು ರೀವಿಲ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.  ಶೋಕಿವಾಲ ಚಿತ್ರ ಒಂದು ಕಮರ್ಷಿಯಲ್‌ ಸಿನಿಮಾವಾಗಿ ಮೂಡಿ ಬರುವ ಎಲ್ಲ ಸೂಚನೆ ನೀಡಿದೆ.

ಹಳ್ಳಿ ಹುಡುಗನಿಗೆ ಬೋಲ್ಡ್ ಆದ ಚುಟು ಚುಟು ಹುಡುಗಿ

ಅಜಯ್ ರಾವ್ ಹಳ್ಳಿ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಕಿ, ಸಂತು ಸ್ಟ್ರೇಟ್ ಫಾರ್ವಡ್, ಕೆಜಿಎಫ್ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿದ್ದ ಜಾಕಿ ತಿಮ್ಮೇಗೌಡ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು ಹೊಸ ತರಹದ ಹಳ್ಳಿ ಪ್ರೇಮ ಕತೆ ಬಹಳಷ್ಟು ನಿರೀಕ್ಷೆ ಮೂಡಿಸಿದೆ.