’ಸಿಂಪಲ್ಲಾಗ್ ಒಂದು ಲವ್’ ಸ್ಟೋರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಭರವಸೆಯನ್ನು ಮೂಡಿಸಿದವರು ಶ್ವೇತಾ ಶ್ರೀವಾಸ್ತವ್. ಅ ನಂತರ ’ಕಿರಗೂರಿನ ಗಯ್ಯಾಳಿಗಳು’ ಸಾಕಷ್ಟು ಹೆಸರನ್ನು ತಂದು ಕೊಟ್ಟಿತು.  ಆ ನಂತರ 3 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ನವರಾತ್ರಿ ಹಬ್ಬದಂದು ಅಭಿಮಾನಿಗಳ ಸಂತಸದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

ನಮಸ್ಕಾರ😍 , ಹಬ್ಬದ ಶುಭಾಶಯಗಳು!! ಇಂದು ನನ್ನ ಒಂದು ಸಂತಸದ ವಿಷಯವನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ 🙏. Would like to inform that I have signed a movie after a long break😄👼!! And I'll be portraying as a super cop in this one. Below are the further details. As always need all of your's support and best wishes ,friends😊🙏 Title- Rahadhaari ರಹದಾರಿ" , Robbery thriller , Director : @girishg_official ( ಗಿರೀಶ್ ವೈರಮುಡಿ ) Producer : Manjunath Shamanur ( ಮಂಜುನಾಥ್ ಶಾಮನೂರ್) and Mukthamba Basavaraju. Music direction : Ronada Bakkesh & KC Rao (ರೋಣದ ಬಕ್ಕೇಶ್ & ಕೆ ಸಿ ರಾವ್ ) Director's 1st movie name "ಒಂದ್ ಕಥೆ ಹೇಳಾ" 😊🙏

A post shared by Shwetha Srivatsav (@shwethasrivatsav) on Oct 6, 2019 at 9:27pm PDT

 

ಈಗ ‘ರಹದಾರಿ’ ಎನ್ನುವ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್ಸಗುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಶ್ವೇತಾ ಸೂಪರ್ ಕಾಪ್ ಪಾತ್ರವನ್ನು ಮಾಡುತ್ತಿದ್ದಾರೆ. ಗಿರೀಶ್ ವೈರಮುಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮಂಜುನಾಥ್ ಶಾಮನೂರು, ಮುಕ್ತಾಂಬಾ ಬಸವರಾಜು ನಿರ್ಮಾಣ ಮಾಡುತ್ತಿದ್ದಾರೆ. ರೋಣದ ಬಕ್ಕೇಶ್ ಮತ್ತು ಕೆ ಸಿ ರಾವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.  ಡಿಸಂಬರ್ ನಿಂದ ಶೂಟಿಂಗ್ ಶುರುವಾಗಲಿದೆ.