Asianet Suvarna News

ಕಳೆದ ವರ್ಷ ಮೇಘನಾ ರಾಜ್‌ ಜೊತೆ ನಾವಿದ್ದೀವಿ ಎಂದಿದ್ದ ವಿಜಯ್; ಮೇಘನಾ ಭಾವುಕ ಪೋಸ್ಟ್!

ಕಳೆದ ವರ್ಷ ಧೈರ್ಯ ತುಂಬಿದ ನಟ ಸಂಚಾರಿ ವಿಜಯ್, ಈ ವರ್ಷ ಇಲ್ಲ ಎಂದು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ದೇವರು ನಮ್ಮ ಜೊತೆಗಿದ್ದಾನೆ ಎಂದಿದ್ದ ಸಂಚಾರಿ...
 

Sandalwood actress Meghana Raj condolences to death of Sanchari Vijay vcs
Author
Bangalore, First Published Jun 16, 2021, 2:26 PM IST
  • Facebook
  • Twitter
  • Whatsapp

ವರ್ಷದ ಮಿಡ್ ತಿಂಗಳು ಜೂನ್. ಈ ತಿಂಗಳಲ್ಲಿ ವಾತಾವರಣ ಮಾತ್ರವಲ್ಲ ಜೀವನದಲ್ಲೂ ಏನೇನೋ ಬದಲಾವಣೆಗಳು ಆಗುತ್ತವೆಂದು ಒಬ್ಬೊಬ್ರು ಹೇಳುತ್ತಾರೆ. ಜೂನ್‌ ತಿಂಗಳಲ್ಲಿ ಕನ್ನಡ ಚಿತ್ರರಂಗ ಅದ್ಭುತ ಕಲಾವಿದರನ್ನು ಕಳೆದುಕೊಂಡಿದೆ. ಅದಲ್ಲೂ ಅಂಗಾಂಗಗಳನ್ನು ದಾನ ಮಾಡಿ ಕೊನೆ ಉಸಿರೆಳೆದ ಸಂಚಾರಿ ವಿಜಯ್‌ ವ್ಯಕ್ತಿತ್ವ ಹಾಗೂ ಕುಟುಂಬದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. 

ಸಂಚಾರಿ ವಿಜಯ್ ಭರವಸೆ ಇಟ್ಟಿದ್ದ ಸಿನಿಮಾಗಳು! 

ಕಳೆದ ವರ್ಷ ಜೂನ್ 7ರಂದು ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದರು. ಅದಾದ 7 ದಿನಗಳ ಅಂತರದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡರು. ಈ ವರ್ಷ ಅದೇ ದಿನಾಂಕದಂದು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಂಚಾರಿ ವಿಜಯ್ ನಿಧನರಾದರು. ಚಿರಂಜೀವಿ ಅಗಲಿಕೆಯ ನೋವಲ್ಲಿ ಮೇಘನಾ ಬರೆದಿದ್ದ ಭಾವುಕ ಪತ್ರಕ್ಕೆ, ಸಂಚಾರಿ ವಿಜಯ್ ಹಂಚಿಕೊಂಡು 'ನಾವು ನಿಮ್ಮ ಜೊತೆ ನಾವು ಇದ್ದೀವಿ, ದೇವರು ನಮ್ಮ ಜೊತೆಗಿದ್ದಾನೆ,' ಎಂದು ಹೇಳಿದ್ದರು. 

ಸಂಚಾರಿ ಬರೆದ ಪೋಸ್ಟ್‌ ಅನ್ನು ಮೇಘನಾ ಶೇರ್ ಮಾಡಿಕೊಂಡು, ಬಹಳ ದುಃಖದಿಂದ ದೇವರು ನಿಜಕ್ಕೂ ಕ್ರೂರಿ ಎಂದಿದ್ದಾರೆ. ನಮ್ಮ ಜೊತೆ ದೇವರಿದ್ದಾನೆ, ಎಂದು ಹೇಳಿದ ವ್ಯಕ್ತಿ ದೇವರ ಮಡಿಲಿಗೆ ಸೇರಿದ್ದಾರೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಯಾರಿಗೆ ಎಷ್ಟು ಕಷ್ಟ ಬಂದರೂ ತಮ್ಮಿಂದ ಆಗುವ ಸಹಾಯ ಮಾಡುತ್ತಿದ್ದರು ವಿಜಯ್. ಕರೆ ಮಾಡಿ ಸಾಂತ್ವನ ಹೇಳಿ, ಮಾತನಾಡಿಸುತ್ತಿದ್ದರು. ಸದಾ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವ ವಿಜಯ್ ಅವರ ಕಣ್ಣು ಮತ್ತು ಕಿಡ್ನಿ, ಯಕೃತ್ ಹಾಗೂ ಶ್ವಾಸಕೋಶವನ್ನು ಅಗತ್ಯ ಇರೋರಿಗೆ ಕಸಿ ಮಾಡಲಾಗಿದೆ.

Follow Us:
Download App:
  • android
  • ios