ಹರಿಪ್ರಿಯಾ ಸೀಮಂತದಲ್ಲಿ ಸಿನಿರಂಗದ ಸಮಾಗಮ, ಈ ಅದ್ಭುತ ಲೊಕೇಶನ್ ಇರೋದೆಲ್ಲಿ?
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್’ವುಡ್ ಜನಪ್ರಿಯ ಜೋಡಿಗಳಾದ ಹರಿಪ್ರಿಯಾ - ವಸಿಷ್ಠ ಸಿಂಹ ಅದ್ಧೂರಿಯಾಗಿ ಸೀಮಂತ ಕಾರ್ಯ ನಡೆಸಿದ್ದು, ಸಿನಿಮಾ ನಟ ನಟಿಯರು ಆಗಮಿಸಿದ್ದರು.
ಸ್ಯಾಂಡಲ್’ವುಡ್ ಜನಪ್ರಿಯ ತಾರಾ ಜೋಡಿಗಳಾದ ಹರಿಪ್ರಿಯಾ (Haripriya ) ಹಾಗೂ ವಸಿಷ್ಠ (Vasishta Simha) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಜೋಡಿ ಖಾಸಗಿ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ತಮ್ಮ ಸೀಮಂತ ಶಾಸ್ತ್ರವನ್ನು ನಡೆಸಿದ್ದು. ಈ ಸಂಭ್ರಮದಲ್ಲಿ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ. ವಸಿಷ್ಠ ಸಿಂಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸೀಮಂತದ ವಿಡಿಯೋ (baby shower video) ಹಂಚಿಕೊಂಡಿದ್ದು, ಅದ್ಧೂರಿ ಸಂಭ್ರಮದ ಜಲಕ್ ಇಲ್ಲಿದೆ.
ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ 2023ರ ಜನವರಿ 26ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದರು. ಇದೀಗ ಸೀಮಂತ ಸಮಾರಂಭ ಮಾಡಿಕೊಂಡಿದ್ದು, ಮದುವೆ ನಡೆದು ಸರಿಯಾಗಿ 2 ವರ್ಷಗಳ ಬಳಿಕ ವಸಿಷ್ಠ ಮತ್ತು ಹರಿಪ್ರಿಯಾ ಕುಟುಂಬದಲ್ಲಿ ಜ್ಯೂ ಸಿಂಹ ಅಥವಾ ಜ್ಯೂನಿಯರ್ ಹರಿಪ್ರಿಯಾ ಎಂಟ್ರಿಗೆ ಕುಟುಂಬ ಎದುರು ನೋಡುತ್ತಿದೆ. ಸೀಮಂತ ಸಮಾರಂಭದಲ್ಲಿ ಹರಿಪ್ರಿಯಾ ಹಸಿರು ಬಣ್ಣದ ಸೀರೆ ಹಾಗೂ ಪಿಂಕ್ ಬಣ್ಣದ ಬ್ಲೌಸ್ ಧರಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದರು. ಇನ್ನು ವಸಿಷ್ಠ ಬಿಳಿ ಬಣ್ಣದ ಪಂಚೆ ಶರ್ಟ್, ಶಲ್ಯ ಧರಿಸಿ ಹೆಂಡತಿಗೆ ಸಾತ್ ನೀಡಿದ್ದರು. ಸೀಮಂತ ಸಮಾರಂಭಕ್ಕೆ ನಟಿಯರಾದ ಶೃತಿ, ತಾರಾ, ಮಾಳವಿಕಾ, ಅಮೂಲ್ಯ, ಸುಧಾರಾಣಿ (Sudharani), ಸೋನಲ್ ಮೊಂಥೆರೋ ಮೊದಲಾದ ನಟಿಯರು ಭಾಗವಹಿಸುವ ಮೂಲಕ ಸೀಮಂತ ಸಂಭ್ರಮವನ್ನು ಹೆಚ್ಚಿಸಿದರು. ಆರೋಗ್ಯಯುತ ರೀತಿಯಲ್ಲಿ ಹೆರಿಗೆಯಾಗಲೆಂದು ಅಭಿಮಾನಿಗಳು ಹಾರೈಸಿದ್ದಾರೆ.
ಪತ್ನಿ ಬೇಬಿ ಬಂಪ್ ಗೆ ಮುತ್ತಿಟ್ಟ ವಸಿಷ್ಠ ಸಿಂಹ, ಹರಿಪ್ರಿಯಾಗೆ ಹರಸಿದ ಫ್ಯಾನ್ಸ್
ಹರಿಪ್ರಿಯಾ ಸೀಮಂತ ಸಂಭ್ರಮವು ಬೆಂಗಳೂರಿನ ಖಾಸಗಿ ರೆಸಾರ್ಟ್ (private resort of Bangalore) ಒಂದರಲ್ಲಿ ನಡೆದಿದ್ದು, ಸದ್ಯ ಈ ರೆಸಾರ್ಟ್ ಸಹ ಜನಮನ ಸೆಳೆದಿದಿದೆ. ಈ ರೆಸಾರ್ಟ್ ಹೆಸರು ಕಲಾನಿ ವಸ್ಥಿ ಎಂದಾಗಿದ್ದು, ಇಲ್ಲಿ ಮದುವೆ, ಹಳದಿ, ಮೆಹೆಂದಿ, ರಿಸೆಪ್ಶನ್ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿ ತುಂಬಾನೆ ಯುನಿಕ್ ಆಗಿರುವ ಕಲ್ಯಾಣ ಮಂಟಪ ಇದೆ. ನೀರಿನ ಮಧ್ಯದಲ್ಲಿರುವ ಕಲ್ಯಾಣ ಮಂಟಪವು ಯಾವುದೇ ಸಮಾರಂಭವೂ ಟ್ರೆಡಿಶನಲ್ ಟಚ್ ನೀಡುತ್ತೆ. ಇದಲ್ಲದೇ ಹೆರಿಟೇಜ್ ಕೋರ್ಟಿಯಾರ್ಡ್ ಕೂಡ ಇದ್ದು, ಇಲ್ಲೂ ಕೂಡ ಮದುವೆ ಕಾರ್ಯಕ್ರಮಗಳು ನಡೆಯುತ್ತವೆ. ಜೊತೆಗೆ ಕಾರ್ಪರೇಟ್ ಹಾಲ್ ಹಾಗೂ ಸುಂದರವಾದ ಲಾನ್ ಕೂಡ ಇವೆ. ಕನ್ನಡ ಕಿರುತೆರೆ, ಹಿರಿತೆರೆಯ ನಟ, ನಟಿಯರ ವಿವಾಹ ಕೂಡ ಇಲ್ಲಿ ಜರುಗಿದೆ.