ನಟಿ, ನಿರೂಪಕಿ ಶೀತಲ್‌ ಶೆಟ್ಟಿಬಹುದಿನಗಳ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಲ ಅವರು ‘ರಣಭೂಮಿ’ ಚಿತ್ರದಲ್ಲಿ ವಿಲನ್‌ ಲುಕ್‌ನಲ್ಲಿ ತೆರೆ ಮೇಲೆ ಅಬ್ಬರಿಸಲು ರೆಡಿ ಆಗಿದ್ದಾರೆ. 

ನಿರ್ದೇಶಕ ಚಿರಂಜೀವಿ ದೀಪಕ್‌ ಸಾರಥ್ಯದ ಚಿತ್ರ ಇದೀಗ ಫಸ್ಟ್‌ಲುಕ್‌ ಹಾಗೂ ಟೀಸರ್‌ ಮೂಲಕ ಸದ್ದು ಮಾಡುತ್ತಿದೆ. ನಿರಂಜನ್‌ ಒಡೆಯರ್‌ ಹಾಗೂ ಕಾರುಣ್ಯಾ ರಾಮ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶೀತಲ್‌ ಪಾತ್ರದ ಬಗ್ಗೆ ನಿರ್ದೇಶಕ ದೀಪಕ್‌ ಹೇಳಿದ್ದು

ರಾಜು ತಾಳಿಕೋಟೆ ‘ಕೈ-ಚೇಷ್ಟೆಗೆ’ ಬುಸುಗುಟ್ಟಿದ ‘ನಾಗಿಣಿ’

1. ಇದೊಂದು ಕ್ರೈಮ್‌ ಥ್ರಿಲ್ಲರ್‌ ಕತೆ. ಭಜರಂಗಿ ಲೋಕಿ, ಡ್ಯಾನಿಯಲ್‌ ಕುಟ್ಟಪ್ಪ ಸೇರಿದಂತೆ ಹಲವರು ಈ ಚಿತ್ರದ ಪ್ರಮುಖ ವಿಲನ್‌. ಈ ಪೈಕಿ ಶೀತಲ್‌ ಶೆಟ್ಟಿಕೂಡ ಒಬ್ಬ ಪ್ರಮುಖ ವಿಲನ್‌. ಅವರ ಪಾತ್ರವೇ ಇಲ್ಲಿ ವಿಭಿನ್ನ ಮತ್ತು ವಿಶೇಷ. ತನಗೆ ಬೇಕೆನಿಸಿದ್ದನ್ನು ಪಡೆದಕೊಳ್ಳುವ ಹಂಬಲ. ಹಾಗೆಯೇ ತನಗೆ ಆಗದಿರುವುದನ್ನು ಮುಗಿಸಿ ಬಿಡಬೇಕೆನ್ನುವ ಕ್ರೂರಿ. ಅಂತಹವಳ ದೃಷ್ಟಿಚಿತ್ರದ ನಾಯಕಿ ಮೇಲೆ ಬಿದ್ದಾಗ ಏನಾಗುತ್ತೆ ಎನ್ನುವುದು ಅವರ ಪಾತ್ರದ ಒನ್‌ಲೈನ್‌.

ಶ್ರೀಮುರುಳಿ ತಾಳ್ಮೆಗೆ ಮಾರು ಹೋದೆ: ಶ್ರೀಲೀಲಾ

2. ಇದೊಂದು ಡಿಫೆರೆಂಟ್‌ ಪಾತ್ರ. ಈ ಪಾತ್ರಕ್ಕೆ ಯಾರು ಸೂಕ್ತ ಅಂತ ಯೋಚಿಸುತ್ತಿದ್ದಾಗ ನಮಗೆ ಸಿಕ್ಕವರು ಶೀತಲ್‌ ಶೆಟ್ಟಿ. ಪಾತ್ರದ ವಿವರ ಕೇಳಿದಾಗ ಅವರು ಥ್ರಿಲ್‌ ಆದರು. ವಿಲನ್‌ ಶೇಡ್‌ ಇದ್ದರೂ ಪರವಾಗಿಲ್ಲ ಅಭಿನಯಿಸುತ್ತೇನೆಂದು ಒಪ್ಪಿಬಂದರು. ಅಂದುಕೊಂಡಂತೆ ಆ ಪಾತ್ರದಲ್ಲಿ ಅದ್ಭುತವಾಗಿಯೂ ಅಭಿನಯಿಸಿದ್ದಾರೆ. ಅವರ ಸಿನಿ ಕರಿಯರ್‌ಗೆ ಇದೊಂದು ಚೇಂಜ್‌ ಓವರ್‌ ಪಾತ್ರವಾಗುತ್ತೆ’ ಎನ್ನುತ್ತಾರೆ ದೀಪಕ್‌. ಈ ಚಿತ್ರಕ್ಕೆ ಅವರು ನಿರ್ದೇಶಕ ಕಮ್‌ ನಿರ್ಮಾಪಕ.