'ಕ್ಲಬ್‌ಹೌಸ್' ಆ್ಯಪ್‌ನಲ್ಲಿ ಸೆಲೆಬ್ರಿಟಿಗಳನ್ನು ಮಾತನಾಡಿಸಬಹುದು!
ಸಿನಿಮಾ ತಾರೆಯರ ಜೊತೆ ಮಾತನಾಡಲು ಒಂದೊಳ್ಳೆ ಅವಕಾಶ. ಕ್ಲಬ್‌ಹೌಸ್‌ನಲ್ಲಿ ರೂಮ್ ಕ್ರಿಯೇಟ್ ಮಾಡಿ ಜನರನ್ನು ಚರ್ಚೆಗೆ ಆಹ್ವಾನಿಸಬಹುದು.
‘ಕ್ಲಬ್‌ಹೌಸ್’ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಸೋಷಿಯಲ್ ಮೀಡಿಯಾ ಆ್ಯಪ್ ಅಥವಾ ಆಡಿಯೋ ಆಧರಿತ ಸೋಷಿಯವಲ್ ಮೀಡಿಯಾ. ಕೆಲವು ವಾರಗಳ ಹಿಂದೆಯಷ್ಟೇ ಆ್ಯಂಡ್ರಾಯ್‌ಡ್ ಬಳಕೆದಾರರಿಗೆ ಲಭ್ಯವಾದ ಈ ಆ್ಯಪ್‌ನಲ್ಲಿ ಕುತೂಹಲ ಮೂಡಿಸುವ ಚರ್ಚೆ, ಮಾತುಕತೆ ನಡೆಯುತ್ತದೆ.
ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್
ಯಾರು ಬೇಕಿದ್ದರೂ ಪ್ಲೇ ಸ್ಟೋರ್‌ನಲ್ಲಿ ಕ್ಲಬ್ ಹೌಸ್ ಆ್ಯಪ್ ಡೌನ್‌ಲೋಡ್ ಮಾಡಬಹುದು. ಕ್ಲಬ್‌ಹೌಸ್‌ನಲ್ಲಿ ರೂಮ್ ಕ್ರಿಯೇಟ್ ಮಾಡಿ ಜನರನ್ನು ಚರ್ಚೆಗೆ ಆಹ್ವಾನಿಸಬಹುದು. ಅಥವಾ ನಮ್ಮಿಷ್ಟದ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾಗಿಯಾಗಬಹುದು.
ಈ ಆ್ಯಪ್‌ನಲ್ಲಿ ಸದ್ಯ ಸೆಲೆಬ್ರಿಟಿಗಳ ಜಾತ್ರೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ವಸಿಷ್ಠ ಸಿಂಹ, ಮಾನ್ವಿತಾ ಕಾಮತ್, ರಿಷಬ್ ಶೆಟ್ಟಿ, ಸಂಯುಕ್ತಾ ಹೆಗಡೆ, ನಿಧಿ ಸುಬ್ಬಯ್ಯ, ಚಂದನ್ ಆಚಾರ್, ಸಂಯುಕ್ತಾ ಹೊರನಾಡು, ಶ್ರುತಿ ಹರಿಹರನ್, ನಿರ್ದೇಶಕರಾದ ಟಿ.ಎನ್. ಸೀತಾರಾಂ, ಬಿ ಸುರೇಶ್, ಸಿಹಿ ಕಹಿ ಚಂದ್ರು, ಪವನ್ ಕುಮಾರ್, ಗಿರಿರಾಜ್, ಅರಿಷಡ್ವರ್ಗ ನಿರ್ದೇಶಕ ಅರವಿಂದ್, ಸುಷ್ಮಾ ಭಾರದ್ವಾಜ್, ಸಂಧ್ಯಾರಾಣಿ ಮೊದಲಾದವರಿದ್ದಾರೆ. ಹಲವು ಮಂದಿ ಸಿನಿಮಾ ತಂತ್ರಜ್ಞರು, ಕಥೆಗಾರರು, ಸಂಭಾಷಣೆಗಾರರು ವಿವಿಧ ಕ್ಷೇತ್ರಗಳ ತಜ್ಞರು ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಈ ಹೊತ್ತಲ್ಲಿ ನೀವೂ ಅವರ ಜೊತೆ ಮಾತನಾಡಬಹುದು.