ನಟ ಸುದೀಪ್ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ದಬಾಂಗ್ -3 ಯಲ್ಲಿ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ಕಿಚ್ಚ ಸುದೀಪ್ ದಬಾಂಗ್-3 ಸೆಟ್ ಸೇರಿಕೊಂಡಿದ್ದಾರೆ. ಶೂಟಿಂಗ್ ಶುರು ಮಾಡಿದ್ದಾರೆ. 
 
ಜಿಮ್ ನಲ್ಲಿ ಸಲ್ಮಾನ್ ಖಾನ್ ಜೊತೆಗೆ ನಿಂತಿರುವ  ಫೋಟೋವೊಂದನ್ನು ಶೇರ್ ಮಾಡಿಕೊಂಡು. ಸೆಟ್ ನ  ಅನುಭವಗಳನ್ನು ಕಿಚ್ಚ ಸುದೀಪ್ ಶೇರ್ ಮಾಡಿಕೊಂಡಿದ್ದಾರೆ.

 

ದಬಾಂಗ್ 3 ಸೆಟ್ ಜೊತೆ ಮೊದಲ ದಿನ ಚೆನ್ನಾಗಿತ್ತು. ಥ್ಯಾಂಕ್ಯೂ ಸಲ್ಮಾನ್ ಸರ್. ನೀವು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀರಿ. ಮನೆಯಲ್ಲಿದ್ದಂತೆ ಫೀಲ್ ಆಯ್ತು ಎಂದು ಟ್ವೀಟ್ ಮಾಡಿದ್ದಾರೆ. 

ದಬಾಂಗ್ 3 ಚಿತ್ರವನ್ನು ಪ್ರಭುದೇವ್ ನಿರ್ದೇಶನ ಮಾಡುತ್ತಿದ್ದು ಸೋನಾಕ್ಷಿ ಸಿನ್ಹ, ಅರ್ಬಜ್ ಖಾನ್, ರಜ್ಜಿಯೋ ಈ ಚಿತ್ರದಲ್ಲಿ ನಟಿಸಲಿದ್ದಾರೆ.  2019 ಡಿಸಂಬರ್ 20 ಕ್ಕೆ ತೆರೆ ಮೇಲೆ ಬರಲಿದೆ.