ದಕ್ಷಿಣ ಭಾರತ ಚಿತ್ರರಂಗದ ಗಾನ ಕೋಗಿಲೆ, ಗಾನ ಸರಸ್ವತಿ ಎಸ್‌ ಜಾನಕಿ ನಿಧನದ ವದಂತಿ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಗಾಳಿ ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಗಾಯಕಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಗರಂ ಆಗಿದ್ದಾರೆ.

ಕೆಲವು ತಿಂಗಳ ಹಿಂದೆ ಶಸ್ತ್ರಿ ಚಿಕಿತ್ಸೆಗೆ ಒಳಗಾಗಿದ್ದ ಜಾನಕಿ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ತಪ್ಪು ಸುದ್ದಿಗಳನ್ನು ಹರಡಬೇಡಿ ಎಂದು ಪುತ್ರ ಮರಳಿ ಖಾಸಗಿ ವೆಬ್‌ಸೈಟ್‌ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಜಾನಕಿ ಅಮ್ಮನವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹಬ್ಬುತ್ತಿರುವುದು ಮೊದಲೇನಲ್ಲ. 2017ರಲ್ಲೂ ಅನಾರೋಗ್ಯರಾಗಿ ನಿಧನರಾಗಿದ್ದಾರೆ ಎಂದು ಹರಿದಾಡುತ್ತಿದ್ದ ಗಾಳಿ ಸುದ್ದಿಗೆ ಕುಟುಂಬಸ್ಥರು ಬ್ರೇಕ್‌ ಹಾಕಿದ್ದರು. 82 ವರ್ಷ ಜಾನಕಿ ಅಮ್ಮ ಸುಮಾರು 17 ಭಾಷೆಯಲ್ಲಿ48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಚಿತ್ರರಂಗದವರು, ಆಪ್ತರು ಹಾಗೂ ಕುಟುಂಬದವರು ಆವರು ಎಂದೂ ಹೆಸರಿಟ್ಟು ಕರೆಯದೇ, ಅವರನ್ನು ಜಾನಕಿ ಅಮ್ಮ ಅಂತಾನೆ ಕರೆಯುತ್ತಾರೆ.

ಎಸ್‌. ಜಾನಕಿ, ರಾಕ್‌ಲೈನ್‌ ವೆಂಕಟೇಶ್‌ ಸೇರಿ 12 ಮಂದಿಗೆ ಚಿತ್ರವಾಣಿ ಪ್ರಶಸ್ತಿ

ಮೈಸೂರಿನಲ್ಲಿ ಪ್ರಾರಂಭಗೊಂಡ ಸಂಗೀತ ಪಯಣವನ್ನು ಮೈಸೂರಿನಲ್ಲಿಯೇ ಕೊನೆಗೊಳ್ಳಿಸಿದ್ದಾರೆ ಈ ಗಾನ ಸರಸ್ವತಿ. ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಅದ್ಧೂರಿ ಮ್ಯೂಸಿಕಲ್ ಕಾರ್ಯಕ್ರಮದಲ್ಲಿ ಕೊನೆಯ ಬಾರಿ ಹಾಡುವ ಮೂಲಕ ಸಂಗೀತಕ್ಕೆ ವಿದಾಯ ಹೇಳಿದ್ದರು. ಮೊದಲ ಬಾರಿಗೆ ಮೈಸೂರಿನಲ್ಲಿ ಜಿ.ಕೆ. ವೆಂಕಟೇಶ್‌ ಆಯೋಜಿಸಿದ ಈ ಸಂಗೀತ ಸಂಜೆಯಲ್ಲಿ ಪಿ ಬಿ ಶ್ರೀನಿವಾಸ್‌ ಅವರ ಜೊತೆ ಸಾರ್ವಜನಿಕವಾಗಿ ಹಾಡಿದ್ದರು ಜಾನಕಿಯಮ್ಮ.

 

ಜಾನಕಿ ಅವರು ಸಾವಿನ ವದಂತಿ ಬಗ್ಗೆ ಗಾಯಕಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ' ನಮಸ್ತೆ ನಾನು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇವತ್ತು ಬೆಳಗ್ಗೆಯಿಂದ ನನಗೆ ಜಾನಕಿ ಅಮ್ಮನವರ ಆರೋಗ್ಯದ ಬಗ್ಗೆ ವಿಚಾರಿಸಲು ಸುಮಾರು 20 ಹೆಚ್ಚು ಪೋನ್‌ ಕಾಲ್‌ಗಳು ಬಂದಿವೆ. ಸೋಷಿಯಲ್ ಮೀಡಿಯಾದಲ್ಲಿ ಯಾರೋಬ್ಬರು ಆಕೆ ಇನ್ನಿಲ್ಲ ಎಂದು ವದಂತಿ ಮಾಡಿದ್ದಾರೆ. ನಾನು ಅವರೊಟ್ಟಿಗೆ ಮಾತನಾಡಿದ್ದು, ಅಮ್ಮ ಆರೋಗ್ಯವಾಗಿದ್ದಾರೆ. ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಪಾಸಿಟಿವ್ ವಿಚಾರಕ್ಕೆ ಬಳಸಿ' ಎಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮನವಿ ಮಾಡಿದ್ದಾರೆ.