ಬೆಂಗಳೂರು( ಜ.  29)  ಬಹುನಿರೀಕ್ಷಿತ ಕೆಜಿಎಫ್  2  ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.  ಕೆಜಿಎಫ್ ಚಾಪ್ಟರ್ 2   ನೋಡೋಕೆ‌ ಕಾಯ್ತಿದ್ದವರಿಗೆ ಗುಡ್ ನ್ಯೂಸ್ ಚಿತ್ರತಂಡದಿಂದ ಸಿಕ್ಕಿದೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಡೇಟ್ ಫಿಕ್ಸ್ ಆಗಿದ್ದು ಜುಲೈ 16ಕ್ಕೆ ತೆರೆ ಮೇಲೆ ರಾಕಿಂಗ್‌ ಸ್ಟಾರ್ ಯಶ್ ರ ಕೆಜಿಎಫ್ ಚಾಪ್ಟರ್ 2 ರಾರಾಜಿಸಲಿದೆ.

ಕೆಜಿಎಫ್ ಬಂಡವಾಳ ಎಷ್ಟು? 

ವಿಶ್ವದಾಧ್ಯಂತ‌ ಜುಲೈ 16ಕ್ಕೆ ತೆರೆ ಮೇಲೆ‌ ಕೆಜಿಎಫ್ ಚಾಪ್ಟರ್ 2 ಬರಲಿದೆ. ಹೊಂಬಾಳೆ  ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದ್ದು ಕೆಜಿಎಫ್ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ಯಶ್ ರಾಕಿ ಬಾಯ್ ಆಗಿ ಕಾಣಿಸಿಕೊಂಡಿದ್ದು ಎಲ್ಲ ಕಡೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು.

ಯಶ್ ಹುಟ್ಟುಹಬ್ಬದ (ಜ. 8)  ದಿನ ಕೆಜಿಎಫ್ 2 ಟೀಸರ್ ಬಿಡುಗುಡೆ ಮಾಡಲು ಚಿತ್ರತಂಡ  ಯೋಜನೆ ಹಾಕಿಕೊಂಡಿತ್ತು. ಆದರೆ  ಕಿಡಿಗೇಡಿಗಳು  ಜನವರಿ ಏಳರಂದು ರಾತ್ರಿಯೇ ಟೀಸರ್ ಲೀಕ್ ಮಾಡಿದ್ದರು. ತಕ್ಷಣ ಪರಿಹಾರ ತೆಗೆದುಕೊಂಡ ಚಿತ್ರತಂಡ ಅಂದು ರಾತ್ರಿಯೇ ಟೀಸರ್  ಅನಾವರಣ ಮಾಡಿತ್ತು.

ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ನೂರು ಮಿಲಿಯನ್ ವೀವ್ಸ್ ಕಂಡ ಟೀಸರ್ ಗೆ ಅಭಿಮಾನಿಗಳು ಜೈಕಾರ ಹಾಕಿದ್ದರು. ಟೀಸರ್ ಬಿಡುಗಡೆ ನಂತರ ಯಶ್ ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ತೆರಳಿ ಸಮಯ ಕಳೆದಿದ್ದರು.

ಪ್ರಕಾಶ್ ರಾಜ್ ಮತ್ತು  ಬಾಲಿವುಡ್ ನಟ ಸಂಜಯ್ ದತ್ ಚಾಪ್ಟರ್ 2 ಆಕರ್ಷಣೆಯಾಗಲಿದ್ದಾರೆ. ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಾಯಕಿ ರವೀನಾ ಟಂಡನ್ ಸಹ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ.