'ನಿನ್ನ ಎದುರಲ್ಲಿ ನಾನು, ನನ್ನ ಎದುರಲ್ಲಿ ನೀನು' ಜೋಡಿ ಮತ್ತೆ ಒಂದಾಗಬೇಕು ಎಂದು ನೆಟ್ಟಿಗರು ಡಿಮ್ಯಾಂಡ್ ಮಾಡುತ್ತಿದ್ದಾರೆ.
2021ರ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಸಿನಿಮಾ 'ರಾಬರ್ಟ್'. ಚಿತ್ರದಲ್ಲಿ ದರ್ಶನ್‌ಗೆ ಆಪ್ತ ಗೆಳೆಯನಾಗಿ ಕಾಣಿಸಿಕೊಂಡ ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡ ಸೋನಾಲ್ ಕನ್ನಡ ಸಿನಿ ಪ್ರೇಮಿಗಳ ಮನ ಗೆದ್ದಿದ್ದಾರೆ.
ಮುದ್ದಾದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡ ಸೋನಾಲ್ ಪ್ರೀತಿಸಿ, ಪೋಷಕರನ್ನು ವಿರೋಧಿಸಿ ರಾಘವ್‌ನನ್ನು ಮದುವೆ ಆಗುತ್ತಾಳೆ. ವಿಲನ್ ಮಾಡಿದ ಪಿತೂರಿಯಿಂದ ಪುತ್ರನನ್ನು ಉಳಿಸಿಕೊಳ್ಳಲು ಮುಂದಾಗುವ ತನು ಪ್ರಾಣ ಕಳೆದುಕೊಳ್ಳುತ್ತಾಳೆ. ಚಿತ್ರದಲ್ಲಿ ತನು ಪಾತ್ರ ಚಿಕ್ಕದಾಗಿದ್ದರೂ, ಅದ್ಭುತವಾಗಿದೆ. ತನು ಇಲ್ಲದ ಜೀವನ ನೆನೆದು ರಾಘವ ಕಂಗಾಲಾಗುತ್ತಾನೆ. ಇವರಿಬ್ಬರ ಕೆಮಿಸ್ಟ್ರಿ ವರ್ಕ್ಔಟ್ ಆಗಿದೆ ಹಾಗೂ ಇವರಿಬ್ಬರಿಗಾಗಿಯೇ ಮಾಡಿರುವ 'ನಿನ್ನ ಎದುರಲ್ಲಿ ನಾನು ನನ್ನ ಎದುರಲ್ಲಿ ನೀನು' ಹಾಡು ಹಿಟ್ ಆಗಿದೆ.
ನನ್ನದಲ್ಲದ ತಪ್ಪಿಗೆ ನಾನು ಬೆಲೆ ತೆರಬೇಕಾಗಿದೆ: ವಿನೋದ್ ಪ್ರಭಾಕರ್
ಇದೇ ಜೋಡಿ ಚಿತ್ರವೊಂದಕ್ಕೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು, ಸಿನಿಮಾ ಮಾಡಬೇಕು ಎಂದು ಜನರಿಟ್ಟ ಡಿಮ್ಯಾಂಡ್ ನಿರ್ದೇಶಕರಿಗೆ ಕೇಳಿಸಿದೆ. ಈಗಾಗಲೇ ಹಲವು ಚಿತ್ರಕತೆಯನ್ನು ಇಬ್ಬರೂ ಕೇಳಿದ್ದಾರೆ. ಲಾಕ್‌ಡೌನ್ ಸಡಿಲಿಕೆ ನಂತರ ಚಿತ್ರದ ಬಗ್ಗೆ ಅನೌನ್ಸ್ ಮಾಡುವುದಾಗಿ ವಿನೋದ್ ತಿಳಿಸಿದ್ದಾರೆ.
ಸದ್ಯ 'ಲಂಕಾಸುರ' ಸಿನಿಮಾ ಚಿತ್ರೀಕರಣದಲ್ಲಿ ವಿನೋದ್ ಬ್ಯುಸಿಯಾಗಿದ್ದಾರೆ. ಇನ್ನು ಸೋನಾಲ್ 'ತಲ್ವಾರ್ ಪೇಟೆ', 'ಶಂಭೋ ಶಿವ ಶಂಕರ' ಮತ್ತು 'ಬುದ್ಧಿವಂತ-2' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
