ನಿರ್ಮಾಪಕ ಸಿಆರ್ ಮನೋಹರ್ ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿರುವುದಾಗಿ ತಿಳಿದು ಬಂದಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನವರಿ 15ರಿಂದ ಫೆಬ್ರವರಿ 27ರವರೆಗೆ ದೇಣಿಗೆ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇತ್ತೀಚಿಗೆ ನಟಿ ಅಮೂಲ್ಯಾ ಹಾಗೂ ಪತಿ ಜಗದೀಶ್ ದೇಣಿಗೆ ನೀಡಿರುವುದರ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದರು. ಇದೀಗ ನಿರ್ಮಾಪಕ ಸಿಆರ್ ಮನೋಹರ್ ದೇಣಿಗೆ ನೀಡಿದ್ದಾರೆ, ಎನ್ನಲಾಗಿದೆ.
ರಾಮಂದಿರಕ್ಕೆ ಭಾರೀ ಮೊತ್ತದ ದೇಣಿಗೆ ಕೊಟ್ಟ ಅಮೂಲ್ಯ -ಜಗದೀಶ್; ರಶೀದಿ ಪೋಟೋ ಇಲ್ಲಿದೆ!
ಮನೋಹರ್ 5 ಲಕ್ಷ ರೂ. ದೇಣಿಗೆ ನೀಡಿರುವ ಬಗ್ಗೆ ನಿರ್ದೇಶಕ ಪವನ್ ಒಡೆಯರ್ ಫೇಸ್‌ಬುಕ್ ಹಾಗೂ ಟ್ಟಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರೆಮೋ ಚಿತ್ರದಲ್ಲಿ ಇಶಾನ್‌ಗೆ ನಟಿ ಆಶಿಕಾ ರಂಗನಾಥ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ, ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
![]()
'ರಾಮ ಮಂದಿರ ನಿರ್ಮಾಣಕ್ಕಾಗಿ 'ರೇಮೊ' ಚಿತ್ರದ ನಿರ್ಮಾಪಕರಾದ ಮನೋಹರ್ ಸರ್ 5 ಲಕ್ಷ ನೀಡಿದ ಸಂದರ್ಭ. ಸರ್ವೇ ಜನಃ ಸುಖಿನೋ ಭವಂತು,'ಎಂದು ಬರೆದು ಕೊಂಡಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಂದ 6 ಲಕ್ಷ ದೇಣಿಗೆ
ನಟಿ ಪ್ರಣೀತಾ ಸುಭಾಷ್ ರಾಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ ನೀಡಿದ್ದು, ಜಗದೀಶ್ ಅಮೂಲ್ಯ ದಂಪತಿಗಳು 1.5 ಲಕ್ಷ ರೂ. ನೀಡಿದ್ದಾರೆ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ 30 ಲಕ್ಷ ರೂ. ನೀಡಿದ್ದಾರೆ.
