ಕ್ರಿಕೆಟ್ ಗೆಲುವಿಗೆ ಹರ್ಷಿಸುತ್ತಲೇ ರಮ್ಯಾ ಅಸಮಾಧಾನ: ದೇಶದ ಹೆಸ್ರು ಕೆಡಿಸೋಕೇ ಕಾಯ್ತಿರ್ತೀರಾ ಎಂದ ನೆಟ್ಟಿಗರು!
ಕ್ರಿಕೆಟ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲುವ ಹರ್ಷ ವ್ಯಕ್ತಪಡಿಸುತ್ತಲೇ ಸ್ಟೇಡಿಯಂನ ಕಸದ ಬಗ್ಗೆ ಮಾತನಾಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ ನಟಿ ರಮ್ಯಾ.
ನಿನ್ನೆ ಗುಜರಾತ್ನ ಅಹಮಾದ್ನ ವಿಶ್ವದ ಅತಿ ದೊಡ್ಡ ಕ್ರಿಕೆಟ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ (Ind Vs Pak) ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ಭಾರತೀಯರೆಲ್ಲರೂ ಪುಳಕಗೊಂಡಿದ್ದಾರೆ. 1.30 ಲಕ್ಷ ಜನರು ಹಿಡಿಯುವ ಈ ಸ್ಟೇಡಿಯಂನಲ್ಲಿ ಎಲ್ಲಾ ಟಿಕೆಟ್ಗಳೂ ವಾರದ ಮೊದಲೇ ಸೋಲ್ಡ್ ಔಟ್ ಆಗಿದ್ದವು. ಪಂದ್ಯ ವೀಕ್ಷಣೆಗೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳು ಹೋಗಿದ್ದರು. ಸಿನಿ ತಾರೆಯರ ದಂಡೇ ಹೋಗಿತ್ತು. ಅಂತೆಯೇ ಮೋಹಕ ತಾರೆ ಖ್ಯಾತಿಯ ರಮ್ಯಾ ಅವರೂ ಅಹಮದಾಬಾದ್ಗೆ ಕ್ರಿಕೆಟ್ ವೀಕ್ಷಣೆಗೆ ಹೋಗಿದ್ದರು. ಕ್ರಿಕೆಟ್ಪ್ರೇಮಿಯಾಗಿರುವ ರಮ್ಯಾ, ಭಾರತದ ಗೆಲುವನ್ನು ಹರ್ಷಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ರಮ್ಯಾ ಅವರನ್ನು ನೋಡುತ್ತಿದ್ದಂತೆಯೇ ಹಲವು ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿದ್ದು ಸೆಲ್ಫಿ ತೆಗೆದುಕೊಂಡಿದ್ದಾರೆ. ರಮ್ಯಾ ಕೂಡ ನಗುತ್ತಲೇ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಅವುಗಳ ಪೈಕಿ ಕೆಲವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕ್ರಿಕೆಟ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿಗೆ ಅವರೂ ಹರ್ಷ ವ್ಯಕ್ತಪಡಿಸಿದ್ದು, ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಫ್ಯಾನ್ಸ್ ಜೊತೆ ತೆಗೆಸಿಕೊಂಡಿರುವ ಸೆಲ್ಫಿಯನ್ನೂ ಹಾಕಿದ್ದಾರೆ.
ನಾನು ನಂದಿನಿ... ಹಾಡಿಗೆ ನಟಿ ರಮ್ಯಾ ರೀಲ್ಸ್ ವೈರಲ್: ಇವ್ಳು ನಮ್ ನಂದು ಎಂದ ಫ್ಯಾನ್ಸ್
ಇವುಗಳ ಸಂತೋಷದ ನಡುವೆಯೇ ನಟಿ ರಮ್ಯಾ ಒಂದು ಬೇಸರ ವ್ಯಕ್ತಪಡಿಸಿದ್ದಾರೆ. ಅದರ ಕುರಿತು ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಅದೇನೆಂದರೆ, ಅಲ್ಲಿಗೆ ಬಂದಿರುವ ಕ್ರಿಕೆಟ್ ಅಭಿಮಾನಿಗಳು ಇಡೀ ಕ್ರೀಡಾಂಗಣದ ತುಂಬ ಕಸದ ರಾಶಿ ಹಾಕಿದ್ದಾರೆ. ಅದನ್ನು ನೋಡಿ ನಟಿ ಸಹಜವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನೋಡಲು ಬಂದ ಜನರು ನಡೆದುಕೊಂಡ ರೀತಿ ರಮ್ಯಾಗೆ ಇಷ್ಟ ಆಗಿಲ್ಲ. ಎಲ್ಲೆಂದರಲ್ಲಿ ಕಸ ಎಸೆದಿರುವುದನ್ನು ಅವರು ಖಂಡಿಸಿದ್ದಾರೆ. ರಮ್ಯಾ ಅವರು, ಯಾಕೆ ಭಾರತ ಯಾಕೆ, ಎಲ್ಲಿದೆ ಸ್ವಚ್ಛತೆ ( Why India, why? where’s the Swacch?) ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಸಲಿಗೆ ಅವರು ಅಲ್ಲಿಗೆ ಬಂದಿರುವ ಜನರು ಇಷ್ಟು ಗಲೀಜು ಮಾಡಿದ್ದರ ಬಗ್ಗೆ ಹೇಳಿದ್ದಾರೆ. ಇದೊಂದು ಉತ್ತಮ ಪಂದ್ಯವಾಗಿತ್ತು. ನಾವು ಗೆದ್ದೆವು. ಎಂದಿನಂತೆ ಅಹಮದಾಬಾದ್ ನಮಗೆ ನಿರಾಸೆ ಮಾಡಿಲ್ಲ. ಆಹಾರ ಚೆನ್ನಾಗಿತ್ತು. ಈ ವಿಡಿಯೋ ನೋಡಿ ನನಗೆ ನಿರಾಸೆ ಆಯಿತು. ಯಾಕೆ ಇಂಡಿಯಾ ಯಾಕೆ? ಎಲ್ಲಿದೆ ಸ್ವಚ್ಛತೆ ಬರೆದುಕೊಂಡಿದ್ದಾರೆ. ವಿಡಿಯೋ ನೋಡಿ ಹಲವರು ಅಸಮಾಧಾನ ಹೊರಹಾಕಿದ್ದಾರೆ. ನಾವು ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಆಗದೇ ಇರುವುದು ಬೇಸರದ ಸಂಗತಿ ಎಂದಿದ್ದಾರೆ.
ಆದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹಿತ ಶೇರ್ ಮಾಡಿ ಭಾರತ ಗಲೀಜು ಎನ್ನುವ ರೀತಿಯಲ್ಲಿ ಬಿಂಬಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ನಟಿ ಇದಾಗಲೇ ಕಾಂಗ್ರೆಸ್ನ ಮಾಜಿ ಸಂಸದೆಯೂ ಆಗಿರುವುದನ್ನು ಉಲ್ಲೇಖಿಸಿರುವ ಕೆಲವರು, ಕೊನೆಗೂ ನಿಮ್ಮ ಬುದ್ಧಿ ಬಿಡಬೇಡಿ. ವಿಶ್ವ ಮಟ್ಟದಲ್ಲಿ ಭಾರತದ ಹೆಸರನ್ನು ಹಾಳು ಮಾಡಲು ಎಷ್ಟು ಸಾಧ್ಯವೋ ಅಷ್ಟು ಮಾಡುತ್ತೀರಿ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ. ಭಾರತವನ್ನು ಹೊಗಳಲು ಮನಸ್ಸು ಬಾರದಿದ್ದರೆ ಸುಮ್ಮನಿದ್ದು ಬಿಡಿ, ಈ ರೀತಿಯ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಭಾರಿ ಕಾಳಜಿ ಇರುವಂತೆ ತೋರಿಸುವುದನ್ನು ಮಾಡಬೇಡಿ, ಅಷ್ಟು ಸ್ವಚ್ಛತೆಯ ಕಾಳಜಿ ಇದ್ದರೆ ಒಮ್ಮೆಯಾದರೂ ಸ್ವಚ್ಛತೆಯ ಕಾರ್ಯಕ್ಕೆಕೈ ಜೋಡಿಸಿದ್ದೀರಾ ಎಂದು ನಟಿಯ ಕಾಳೆಯುತ್ತಿದ್ದಾರೆ.
ನಟಿ ರಮ್ಯಾ ಸಾವಿನ ವದಂತಿ ಹಬ್ಬಿದ್ದೇಕೆ?: ಪದ್ಮಾವತಿ ಕೊಟ್ಟ ಕೌಂಟರ್ ಏನು?