‘ಇದು ರಮೇಶ್‌ ಅರ​ವಿಂದ್‌ ನಟ​ನೆಯ 101ನೇ ಸಿನಿಮಾ. ಫೆ.21ಕ್ಕೆ ತೆರೆಗೆ ಬರು​ತ್ತಿದೆ. ಟ್ರೇಲ​ರ್‌ಗೆ ಒಳ್ಳೆಯ ಪ್ರತಿ​ಕ್ರಿ​ಯೆ​ಗಳು ಬರು​ತ್ತಿವೆ. ನಾನು ಆ್ಯಕ್ಸಿ​ಡೆಂಟ್‌ ಚಿತ್ರ​ದ ನಿರ್ದೇ​ಶ​ನದ ವಿಭಾ​ಗ​ದಲ್ಲಿ ಕೆಲಸ ಮಾಡು​ವಾಗ ರಮೇಶ್‌ ಅರ​ವಿಂದ್‌ ಜತೆಗೆ ಮತ್ತೆ ಇಂಥ ಸಿನಿಮಾ ಮಾಡ​ಬೇಕು ಎಂದು ಕನಸು ಕಂಡಿದ್ದೆ. ಅದು ಶಿವಾಜಿ ಸುರ​ತ್ಕಲ್‌ ಮೂಲ​ಕ ಈಡೇ​ರಿದೆ’ ಎನ್ನು​ತ್ತಾರೆ ಆಕಾಶ್‌ ಶ್ರೀವಾ​ಸ್ತವ್‌.

ರಮೇಶ್ ಅರವಿಂದ್ '100' ಚಿತ್ರದ ಪಾತ್ರಕ್ಕೆ ತ್ಯಾಗರಾಜನ ಇಮೇಜ್‌ ಇಲ್ಲ!

ಅಕಾಶ್‌ ಶ್ರೀವಾ​ಸ್ತವ್‌ ಅವರು ನನ್ನ ಜತೆ ‘ಆ್ಯಕ್ಸಿ​ಡೆಂಟ್‌’ ಚಿತ್ರ​ದಲ್ಲಿ ಕೆಲಸ ಮಾಡಿ​ದ​ವರು. ಆ ಚಿತ್ರಕ್ಕೆ ಪ್ರೇಕ್ಷ​ಕರು ದೊಡ್ಡ ಮಟ್ಟ​ದಲ್ಲಿ ಯಶಸ್ಸು ಕೊಟ್ಟರು. ಮತ್ತೆ ಆ ರೀತಿಯ ಸಿನಿಮಾ ಮಾಡಲು ಆಗ​ಲಿಲ್ಲ. ಈಗ ತೆರೆಗೆ ಬರಲು ಸಿದ್ಧ​ವಾ​ಗಿ​ರುವ ‘ಶಿವಾಜಿ ಸುರ​ತ್ಕ​ಲ್‌’ ಸಿನಿ​ಮಾ ಮೂಲಕ ಮತ್ತೊಮ್ಮೆ ಕ್ರೈಮ್‌ ಥ್ರಿಲ್ಲರ್‌ ಕತೆ​ಯನ್ನು ಪ್ರೇಕ್ಷ​ಕರ ಮುಂದೆ ತರು​ತ್ತಿ​ದ್ದೇ​ವೆ. ಚಿತ್ರದ ಟ್ರೇಲರ್‌ ನೋಡಿ​ದ​ವರು ‘ಆ್ಯಕ್ಸಿ​ಡೆಂಟ್‌’ ಚಿತ್ರ​ವನ್ನು ನೆನ​ಪಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ಆ ಸಿನಿ​ಮಾ​ದಷ್ಟೇ ಈ ಸಿನಿಮಾ ಕೂಡ ನಿರೀಕ್ಷೆ ಮೂಡಿ​ಸು​ತ್ತಿದೆ ಎಂದರೆ ಅದಕ್ಕೆ ಕಾರಣ ಚಿತ್ರದ ಟ್ರೇಲ​ರ್‌.-ರಮೇಶ್‌ ಅರ​ವಿಂದ್‌, ನಟ

ಈ ಚಿತ್ರ​ವನ್ನು ಕೆಆ​ರ್‌ಜಿ ಸ್ಟುಡಿಯೋ ಮೂಲಕ ಕಾರ್ತಿಕ್‌ ಗೌಡ ದೊಡ್ಡ ಮಟ್ಟ​ದಲ್ಲಿ ಬಿಡು​ಗಡೆ ಮಾಡು​ತ್ತಿ​ದ್ದಾರೆ. ಅಲ್ಲದೆ ಇತ್ತೀ​ಚೆಗೆ ಚಿತ್ರ​ದಲ್ಲಿ ಬರುವ ರಮೇಶ್‌ ಅರ​ವಿಂದ್‌ ಅವರ ದೃಶ್ಯದ ಎರಡು ಫೋಟೋ​ಗ​ಳನ್ನು ಬಿಡು​ಗಡೆ ಮಾಡಿ ಇದ​ರಲ್ಲಿ ವ್ಯತ್ಯಾಸ ಗುರು​ತಿ​ಸುವ ಗೇಮ್‌ ನಡೆ​​ಸ​ಲಾ​ಯಿತು. ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಈ ವ್ಯತ್ಯಾಸ ಗುರು​ತಿ​ಸುವ ಗೇಮ್‌ ಸಾಕ​ಷ್ಟುವೈರಲ್‌ ಆಗಿತ್ತು.

ಶಿವಾಜಿ ಸುರತ್ಕಲ್‌ ಪೂರ್ತಿ ಡಿಫರೆಂಟು: ರಮೇಶ್‌