38ರ ಸಂಭ್ರಮಕ್ಕೆ ಕಾಲಿಟ್ಟ ನಟ ರಕ್ಷಿತ್ ಶೆಟ್ಟಿ ಈ ಸಲ ಸರಳವಾಗಿ ಲಾಕ್‌ಡೌನ್‌ ಬರ್ತಡೇ ಮಾಡಿಕೊಂಡಿದ್ದಾರೆ. '777 ಚಾರ್ಲಿ' ಚಿತ್ರದ ಟೀಸರ್ ಹಾಗೂ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಇದೇ ಸಂತೋಷದಲ್ಲಿ ರಕ್ಷಿತ್ ಇನ್‌ಸ್ಟಾಗ್ರಾಂ ಲೈವ್‌ ಬರುವ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. 

ರಕ್ಷಿತ್ ಆರೋಗ್ಯ, ಸಿನಿಮಾ ಬಗ್ಗೆ ವಿಚಾರಿಸಿದ ನೆಟ್ಟಿಗರು ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ರಕ್ಷಿತ್ ಮದುವೆ ಯಾವಾಗ ಎಂದು ಸದಾ ಚಿಂತಿಸುತ್ತಿರುವ ಅಭಿಮಾನಿಗಳಿಗೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಸಿಂಪಲ್ ಸ್ಟಾರ್ ಉತ್ತರ ಕೊಟ್ಟಿದ್ದಾರೆ. ಆದರೆ ಪದೇ ಪದೇ ರಶ್ಮಿಕಾ ಬಗ್ಗೆ ಕಾಮೆಂಟ್ ಬರುತ್ತಿರುವುದನ್ನು ನೋಡಿ ಅಭಿಮಾನಿಗಳಲ್ಲೊಂದು ಮನವಿ ಮಾಡಿಕೊಂಡಿದ್ದಾರೆ.

ಚಾರ್ಲಿ ಜೊತೆ ಬಂದ ರಕ್ಷಿತ್‌ ಶೆಟ್ಟಿಗೆ ಪರಭಾಷಾ ಸ್ಟಾರ್‌ಗಳಿಂದಲೂ ಸಾಥ್! 

'ಇಲ್ಲಿ ಬರುತ್ತಿರುವ ಕೆಲವು ಕಾಮೆಂಟ್ ನೋಡುವುದಕ್ಕೆ ಬೇಜಾರಾಗುತ್ತಿದೆ. ಕಾಮೆಂಟ್‌ಗಳು ನನ್ನ ಬಗ್ಗೆ ಅಲ್ಲ ಬೇರೊಬ್ಬರ ಬಗ್ಗೆ. ನನ್ನ ಮನವಿ ಏನೆಂದರೆ ಹಳೆಯದನ್ನು ಬಿಟ್ಟು ಬಿಡೋಣ. ಮುಗಿದಿದ್ದೆಲ್ಲ ಮುಗಿದು ಹೋಯಿತು. ಅದರ ಬಗ್ಗೆ ಇದೀಗ ಮಾತನಾಡಿ ಪ್ರಯೋಜನವಿಲ್ಲ.ಯಾವ ವ್ಯಕ್ತಿಗೂ ಅಗೌರವ ಮಾಡುವುದು ಬೇಡ. ಅಸಹ್ಯ ಪಟ್ಟುಕೊಳ್ಳುವಂಥ ಕಮೆಂಟ್ ಬೇರೆಯವರ ಬಗ್ಗೆ ಸಹ ಮಾಡಬಾರದು. ಇದು ನನ್ನ ಮನವಿ, ನಾವು ಮೊದಲು ಮಾನವರಾಗೋಣ. ಎಲ್ಲರಿಗೂ ಗೌರವ ಕೊಡೋಣ. ನನ್ನ ಕಾಮೆಂಟ್ ಸೆಕ್ಷನ್‌ನಲ್ಲಿ ಒಳ್ಳೆಯ ಕಾಮೆಂಟ್ಸ್ ನೋಡಲು ಇಷ್ಟ ಪಡುತ್ತೀನಿ,' ಎಂದು ರಕ್ಷಿತ್ ಮಾತನಾಡಿದ್ದಾರೆ. 

ಕಾಮೆಂಟ್‌ನಲ್ಲಿ ಆ ವ್ಯಕ್ತಿ ಯಾರೆಂದು ಎಲ್ಲರಿಗೂ ತಿಳಿದಿದ್ದರೂ, ರಕ್ಷಿತ್ ನೋಡಿದ್ದರೂ ಆ ವ್ಯಕ್ತಿಯ ಹೆಸರು (ಹೇಳುವುದೇ ಬೇಡ ಅಲ್ವಾ? ಅವರು ಬೇರೆ ಯಾರೂ ಅಲ್ಲ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ) ತೆಗೆಯದೇ ಮಾತನಾಡಿರುವ ರೀತಿಗೆ ಜನರು ನೀವು ಜೆಂಟಲ್‌ಮ್ಯಾನ್‌ ಎಂದು ಮೀಮ್ಸ್ ಮಾಡುತ್ತಿದ್ದಾರೆ.