ಬಹುಭಾಷಾ ವಿಡಿಯೋ ಸಾಂಗ್‌ನಲ್ಲಿ ತುಪ್ಪದ ಬೆಡಗಿ ಇದು ನಟಿಯ ಮೊದಲ ಒರಿಜಿನಲ್ ಮ್ಯೂಸಿಕ್ ವಿಡಿಯೋ ಆಲ್ಬಂ

ನಟಿ ರಾಗಿಣಿ ಒಂದು ವಿಡಿಯೋ ಆಲ್ಬಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಲ್ಲೂ ಈ ಹಾಡು ಬಿಡುಗಡೆ ಆಗಲಿದೆ. ವಿ ಮನೋಹರ್ ಸಂಗೀತ ನೀಡಿರುವ, ಬಾಲಾಜಿ ಮೋಹನ್ ಕೋರಿಯೋಗ್ರಫಿ ಮಾಡಿರುವ ಈ ಹಾಡನ್ನು ಚರಿತ್ರಾ ಹಾಡಿದ್ದಾರೆ.

ಈ ಹಾಡಿನಲ್ಲಿ ರಾಗಿಣಿ ಹೇಗೆ ಕಾಣಿಸಿಕೊಳ್ಳುತ್ತಾರೆಂಬ ಕುತೂಹಲಕ್ಕೆ ಉತ್ತರವೆಂಬಂತೆ ಫೋಟೋ ಬಿಡುಗಡೆ ಮಾಡಲಾಗಿದೆ. ‘ಇದು ನನ್ನ ಮೊದಲ ಒರಿಜಿನಲ್ ಮ್ಯೂಸಿಕ್ ವಿಡಿಯೋ ಆಲ್ಬಂ. ಹೊಸ ರೀತಿಯ ಹಾಡಿನ ಟ್ರೆಂಡ್ ಇದು.

ಶರಾವತಿ ಕಣಿವೆಯಲ್ಲಿ ಸಂಯುಕ್ತಾ ಹೊರನಾಡು..!

ಒಂದೊಂದು ಹಾಡನ್ನು ಒಳಗೊಂಡ ವಿಡಿಯೋ ಆಲ್ಬಂಗಳು ಬಾಲಿವುಡ್‌ನಲ್ಲಿ ಮೂಡಿ ಬರುತ್ತವೆ. ಕನ್ನಡದಲ್ಲೂ ಅದೇ ರೀತಿಯ ಹಾಡು ಮಾಡಬೇಕು ಎಂದಾಗ ಮೂಡಿದ ಐಡಿಯಾ ಇದು.

ಸಾಕಷ್ಟು ವಿಭಿನ್ನತೆಯಿಂದ ಕೂಡಿರುವ ಈ ಹಾಡಿನಲ್ಲಿ ನಾಲ್ಕು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮಾಸ್ ಹಾಗೂ ಗ್ಲಾಮರಸ್ ಹಾಡು ಇದಾಗಿರುತ್ತದೆ’ ಎನ್ನುತ್ತಾರೆ ನಟಿ ರಾಗಿಣಿ.