ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ರಾಧಿಕಾ ಪಂಡಿತ್-ಯಶ್ ತಮ್ಮ ಮಗಳ ಫೋಟೋವನ್ನು ಇದುವರೆಗೂ ಎಲ್ಲಿಯೂ ರಿವೀಲ್ ಮಾಡಿಲ್ಲ. ಅವರ ಮಗಳನ್ನು ನೋಡುವ ಕಾತರ, ಕುತೂಹಲ ಎಲ್ಲರಿಗೂ ಇದೆ. ಆ ಸಮಯ ಹತ್ತಿರ ಬಂದಿದೆ. ಮೇ 07 ಅಕ್ಷಯ ತೃತೀಯದಂದು ಮಗಳ ಫೋಟೋ ರಿವೀಲ್ ಮಾಡುವುದಾಗಿ ರಾಧಿಕಾ ಪಂಡಿತ್ ಹೇಳಿದ್ದಾರೆ. 

 

ಯಶ್ ಮಗಳ ಜತೆ ತುಂಟಾಟ ಆಡುತ್ತಿರುವ ಫೋಟೋವನ್ನು ಶೇರ್ ಮಾಡುತ್ತಾ, ಅಪ್ಪ-ಮಗಳ ಸಂಬಂಧ ಬೆಲೆಕಟ್ಟಲಾಗದ್ದು. ನೀವೆಲ್ಲರೂ ಲಿಟಲ್ ಏಂಜಲ್ ನನ್ನು ನೋಡಲು ಕಾತರರಾಗಿದ್ದೀರಿ ಎಂದು ನನಗೆ ಗೊತ್ತು. ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಇದೇ ಮೇ 7 ರಂದು ಅಕ್ಷಯ ತೃತೀಯದಂದು ಮಗಳ ಫೋಟೋವನ್ನು ರಿವೀಲ್ ಮಾಡಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.