ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾ ಮತ್ತು ಪುತ್ರ ಯಥರ್ವ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುತ್ತಲೇ ಇರುತ್ತವೆ. ಸ್ಟಾರ್ ದಂಪತಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ಮಕ್ಕಳ ವಿಡಿಯೋ ಹಾಗೂ ಪೋಟೋ ಅಪ್ಲೋಡ್ ಮಾಡುವಂತೆ ಅಭಿಮಾನಿಗಳು ಆಗಾಗ ಮನವಿ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಯಥರ್ವ್ ಬಳಸಿರುವ ಈ ಎರಡು ಮ್ಯಾಜಿಕ್ ಪದಗಳಿಗೆ ಎಷ್ಟು ಶಕ್ತಿ ಇದೆ ಗೊತ್ತಾ? 

ರಾಧಿಕಾ ಪಂಡಿತ್ ಮೂರು ಸನ್ನಿವೇಶಗಳನ್ನು ಒಂದು ಮಾಡಿ ವಿಡಿಯೋ ಶೇರ್ ಮಾಡಿದ್ದಾರೆ. ಮೊದಲು ಯಥರ್ವ್‌ಗೆ ಆಹಾರ ನೀಡುತ್ತಾ ಏನು ಹೇಳಬೇಕು ಎಂದು ಕೇಳಿದ್ದಾರೆ, ಆಟವಾಡಲು ಟೈಗರ್ ಗೊಂಬೆ ನೀಡಿ 'What should you say?' ಎಂದು ಪ್ರಶ್ನಿಸಿದ್ದಾರೆ. ಆನಂತರ ಏನೂ ಹೇಳದೆ ರಾಧಿಕಾ ಯಥರ್ವ್‌ ಕೈಗೆ ವಸ್ತು ನೀಡಿದ್ದಾರೆ. ಆಗ ಯಥರ್ವ್ 'ಥ್ಯಾಂಕ್‌ ಯು ' ಎಂದಿದ್ದಾನೆ. ಹೌದು ರಾಧಿಕಾ ಮಗನಿಗೆ ಹೇಳಿಕೊಟ್ಟಿರುವ ಪವರ್‌ ಫುಲ್ ಪದ ಥ್ಯಾಂಕ್‌ ಯು. ಏನನ್ನೇ ಆಗಿರಲಿ ಒಬ್ಬರಿಂದ ಪಡೆದರೆ ಥ್ಯಾಂಕ್ ಯು ಎಂದು ಹೇಳಬೇಕು ಎಂದು ಹೇಳಿ ಕೊಟ್ಟಿದ್ದಾರೆ. ತಾಯಿ ಕೊಟ್ಟಿದ್ದು, ಅಕ್ಕ ಕೊಟ್ಟಿದ್ದೆಂಬ ಅಸಡ್ಡೆ ಮಾಡಬಾರದು ಎಂದು ಜೀವನದಲ್ಲಿ ಮಹತ್ವವಾದ ಮೌಲ್ಯಗಳನ್ನು ಚಿಕ್ಕ ವಯಸ್ಸಿನಿಂದಲೇ ಹೇಳಿ ಕೊಡುತ್ತಿದ್ದಾರೆ ರಾಧಿಕಾ. 

ಅಭಿಮಾನಿಗಳ ಅದೊಂದು ಬೇಡಿಕೆಗೆ ಮಾಲ್ಡೀವ್ಸ್‌ನಿಂದಲೇ ಸ್ಪಂದಿಸಿದ ಯಶ್ ಕುಟುಂಬ 

'Never Underestimate the power of these two tiny words, They creat magic,'ಎಂದು ರಾಧಿಕಾ ವೀಡಿಯೋ ಪೋಸ್ಟ್ ಮಾಡಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. 

ಕೆಲವು ದಿನಗಳ ಹಿಂದೆ ಪುತ್ರನ ಜೊತೆ ಸಮಯ ಕಳೆಯುತ್ತಿರುವ ವಿಡಿಯೋವೊಂದನ್ನು ಯಶ್ ಶೇರ್ ಮಾಡಿಕೊಂಡಿದ್ದರು. ಆಟವಾಡುತ್ತಿರುವಾಗ ಯಥರ್ವ್‌ ಇದ್ದಕ್ಕಿದ್ದಂತೆ ಅಪಾಪೀನ್‌ ಎಂದು ಹೇಳಲು ಆರಂಭಿಸುತ್ತಾರೆ, ಏನೆಂದು ತಿಳಿಯದೇ ಯಶ್ ಎರಡು ಮೂರು ಬಾರಿ ಪದವನ್ನು ರಿಪೀಟ್ ಮಾಡುತ್ತಾರೆ. ಆ ನಂತರ ಕೈ ಸನ್ನೆ ಮಾಡುವ ಮೂಲಕ ಯಥರ್ವ್ ತೋರಿಸುತ್ತಾನೆ, ಓ ಏರೋಪ್ಲೇನ್‌ ಹೇಳುತ್ತಿದ್ಯಾ ಮಗನೇ ಎಂದು ಯಶ್ ಮುತ್ತಿಡುತ್ತಾರೆ. 

'ಅಪಾಪೀನ್‌' ಹಾರಿಸಿದ ಯಥರ್ವ್; ಯಶ್ ಹೇಳಿಕೊಟ್ಟ ಹೊಸ ಗೇಮ್‌ ನೋಡಿ! 

ಒಂದು ವರ್ಷದ ಮಗು ಇಷ್ಟೆಲ್ಲಾ ಮಾತನಾಡುತ್ತೆ ಅಂದ್ರೆ ಗ್ರೇಟ್, ನಮ್ಮ ರಾಧು ತುಂಬಾ ಸ್ಟ್ರೀಕ್ಟ್ ಮದರ್ ಅನ್ಸುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.