ರಚಿತಾರಾಮ್‌ ಅಭಿನಯದ ‘ಶಬರಿ ಸರ್ಚಿಂಗ್‌ ಫಾರ್‌ ರಾವಣ’ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದೆ. ವ್ಯಾಪಕ ಮೆಚ್ಚುಗೆಯೂ ನವೀನ್‌ ಶೆಟ್ಟಿಈ ಸಿನಿಮಾ ಮೂಲಕ ಮೊದಲ ಬಾರಿ ಡೈರೆಕ್ಟರ್‌ ಹ್ಯಾಟ್‌ ಧರಿಸಿದ್ದಾರೆ.

‘ಪುರಾಣದ ಶಬರಿಯಂತೆ, ನಮ್ಮ ನಾಯಕಿಯೂ ಆಶ್ರಮದಲ್ಲಿರುತ್ತಾಳೆ. ಆಕೆಗಿರುವಂಥಾ ಅಗಾಧ ತಾಳ್ಮೆ ನಮ್ಮ ನಾಯಕಿಯೂ ಇರುತ್ತೆ. ಆದರೆ ಪುರಾಣದ ಶಬರಿ ತಾಳ್ಮೆ ತಪ್ಪಲ್ಲ. ಅಷ್ಟೇ ತಾಳ್ಮೆ ಇರುವ ನಮ್ಮ ನಾಯಕಿ ಒಂದು ಹಂತದಲ್ಲಿ ತಾಳ್ಮೆ ತಪ್ಪುತ್ತಾಳೆ. ಅದರ ಪರಿಣಾಮ ಏನಾಗುತ್ತೆ ಅನ್ನೋದು ಸಿನಿಮಾದ ಒನ್‌ಲೈನ್‌. ಜೊತೆಗೆ ಪ್ರತೀ ಸಲ ರಾವಣನನ್ನು ಸಾಯಿಸಲು ರಾಮನೇ ಬರಬೇಕಿಲ್ಲ. ಅವನ ಭಕ್ತರೂ ರಾವಣ ಸಂಹಾರ ಮಾಡಬಹುದು ಎಂಬ ವಿಚಾರವೂ ಇದೆ’ ಎನ್ನುತ್ತಾರೆ ನಿರ್ದೇಶಕ ನವೀನ್‌ ಶೆಟ್ಟಿ.

ಶಂಕರ್‌ ನಾಗ್‌ ಹಾಡಿಗೆ ಕುಣಿದ ರಚಿತಾ ರಾಮ್; ವೀಡಿಯೋ ನೋಡಿ!

ಇದೊಂದು ರಿವೆಂಜ್‌ ಥ್ರಿಲ್ಲರ್‌. ಇದು ರಚಿತಾರಾಮ್‌ ಅವರ 36ನೇ ಚಿತ್ರ. ರಘು ಮುಖರ್ಜಿ, ಅಚ್ಯುತ ಕುಮಾರ್‌, ಪ್ರತಾಪ್‌ ನಾರಾಯಣ್‌, ಅರ್ಚನಾ ಕೊಟ್ಟಿಗೆ ತಾರಾಗಣದಲ್ಲಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ, ಹೊಸ ಪ್ರತಿಭೆ ವಿಶಾಲ್‌ ಕುಮಾರ್‌ ಗೌಡ ಡಿಓಪಿ, ಕೇಶವ್‌ ಹಾಗೂ ಚೇತನ್‌ ಅವರ ಸ್ಕ್ರೀನ್‌ ಪ್ಲೇ, ಸುರೇಶ್‌ ಅರ್ಮುಗಂ ಸಂಕಲನವಿದೆ.

ಕರಣ್‌ ಆಚಾರ್ಯ ಚಿತ್ರಿಸಿದ ಶಬರಿ

ಈಗ ಬಿಡುಗಡೆಯಾಗಿರುವ ಶಬರಿ ಪೋಸ್ಟರ್‌ನಲ್ಲಿರುವ ಪೇಂಟಿಂಗ್‌ ಪ್ರಸಿದ್ಧ ಕಲಾವಿದ ಕರಣ್‌ ಆಚಾರ್ಯ ಅವರದು. ಸತತ ಒಂದು ವಾರಗಳ ಕಾಲ ಚಿತ್ರತಂಡ ಅವರ ಜೊತೆಯಲ್ಲಿದ್ದು ಈ ಪೇಂಟಿಂಗ್‌ ಸಿದ್ಧಪಡಿಸಿದ್ದಾರೆ.

‘ನಾನು ಮೊದಲು ಸಂಕಲನಕಾರ ಸುರೇಶ್‌ ಅರ್ಮುಗಂ ಜೊತೆಗೆ ಅಸೋಸಿಯೇಟ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದೆ. ಕಳೆದ ಲಾಕ್‌ಡೌನ್‌ ಟೈಮ್‌ನಲ್ಲೇ ಈ ಕಥೆ ಹೊಳೆಯಿತು. ಯಾವ ಕಮರ್ಷಿಯಲ್‌ ಹೀರೋಗೂ ಕಮ್ಮಿಯಿಲ್ಲದ ನಾಯಕಿ ಪಾತ್ರವದು. ಕೋವಿಡ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಮೇ ಮೊದಲ ವಾರದಿಂದ ಶೂಟಿಂಗ್‌ಗೆ ಹೊರಡುತ್ತೇವೆ. ಮೊದಲ ಹತ್ತು ದಿನದ ಶೂಟಿಂಗ್‌ ಮೈಸೂರಲ್ಲಿ, ಆಮೇಲೆ ಇಡೀ ಸಿನಿಮಾದ ಶೂಟಿಂಗ್‌ ಬೆಂಗಳೂರಿನಲ್ಲೇ ನಡೆಯಲಿದೆ’ ಎನ್ನುತ್ತಾರೆ ನವೀನ್‌. ಕಿರಣ್‌ ಕುಮಾರ್‌ ಸಿ ಈ ಚಿತ್ರದ ನಿರ್ಮಾಪಕ.

View post on Instagram

ಇದು ಮೈಥಲಾಜಿಕಲ್‌ ಸಿನಿಮಾ ಖಂಡಿತಾ ಅಲ್ಲ. ನಮ್ಮ ಶಬರಿ ಈ ಕಾಲದ ಹುಡುಗಿ. ಆದರೆ ಪುರಾಣ ಕಾಲದ ಶಬರಿಗೂ, ನಮ್ಮ ಸಿನಿಮಾದ ಶಬರಿಗೂ ಕೆಲವೊಂದು ವಿಚಾರಗಳಲ್ಲಿ ಸಿಮಿಲಾರಿಟಿ ಇದೆ.- ನವೀನ್‌ ಶೆಟ್ಟಿ, ನಿರ್ದೇಶಕ