ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಪೊಗರು' ಯಶಸ್ಸಿನ ನಂತರ 'ದುಬಾರಿ' ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳಲ್ಲಿ ಬ್ಯುಸಿಯಾಗಿರುವ ಧ್ರುವ ಬಿಡುವು ಮಾಡಿಕೊಂಡು, ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚಿಗೆ ಹೋಗಿದ್ದ ಔಟಿಂಗ್‌ ಫೋಟೋವನ್ನು ಪ್ರೇರಣಾ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. 

ಬೀಚ್‌ನಲ್ಲಿ ಪತ್ನಿ ಜೊತೆ ಸಮಯ ಕಳೆದ ಧ್ರುವ ಸರ್ಜಾ; ರೋಮ್ಯಾಂಟಿಕ್ ಫೋಟೋ ವೈರಲ್! 

'ಧ್ರುವ ತಿನ್ನಬೇಕಿತ್ತು, ನನಗೆ ಫೋಟೋ ಬೇಕಿತ್ತು. ಆದರೇನು ಮಾಡೋದು, ನನ್ನ ಮಾತು ಕೇಳಲೇ ಬೇಕು,' ಎಂದು ಎರಡು ಫೋಟೋಗಳನ್ನು ಹಂಚಿಕೊಂಡು ಪ್ರೇರಣಾ ಬರೆದುಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಸೀರಿಯಸ್‌ ಮುಖ ಮಾಡಿಕೊಂಡು ಧ್ರುವ ಸರ್ಜಾ ತಿನ್ನುತ್ತಿದ್ದಾರೆ, ಪ್ರೇರಣಾ ಪತಿ ಮುಖ ನೋಡುತ್ತಾ ನಗುತ್ತಿದ್ದಾರೆ. ಎರಡನೇ ಫೋಟೋದಲ್ಲಿ ಧ್ರುವ ಸೆಲ್ಫಿ ಕ್ಲಿಕ್  ಮಾಡಿದ್ದಾರೆ. ಧ್ರುವ ಸರ್ಜಾ ಫೋಟೋ ಹಂಚಿಕೊಳ್ಳುವುದು ಬಹಳ ಕಡಿಮೆ, ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. 'ಧ್ರುವ ಅಣ್ಣ ನಿಮಗೆ ಅಭಿಮಾನಿಗಳ ಜೊತೆ ಫೋಟೋ ತೆಗೆದಿಕೊಳ್ಳಲು ಇಷ್ಟ ಅಲ್ವಾ?' ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ' ಕ್ಯಾಮೆರಾ ಮುಂದೆ ನಿಂತೂ ನಿಂತೂ ರಿಯಲ್‌ ಲೈಫ್‌ನಲ್ಲಿ ಫೋಟೋ ಇಷ್ಟ ಇಲ್ಲ ಅನ್ಸುತ್ತೆ,' ಎಂದೂ ಕಾಮೆಂಟ್ ಮಾಡಿದ್ದಾರೆ.

ಪತ್ನಿಗೆ ರೋಮ್ಯಾಂಟಿಕ್ ಬರ್ತ್‌ಡೇ ಡೇಟ್‌ ಮಾಡಿಸಿದ ಧ್ರುವ ಸರ್ಜಾ; ವಿಡಿಯೋ ವೈರಲ್! 

ಪ್ರೇರಣಾ ಧ್ರುವ ಜೊತೆಗೆ ಶೇರ್ ಮಾಡಿಕೊಳ್ಳುವ ಪ್ರತಿಯೊಂದೂ ಫೋಟೋ ಹಾಗೂ ವಿಡಿಯೋ ತುಂಬಾನೇ ವೈರಲ್ ಅಗುತ್ತಿದೆ. ಕೆಲವು ತಿಂಗಳ ಹಿಂದೆ ಇಬ್ಬರೂ ಗೋವಾ ಬೀಚ್‌ನಲ್ಲಿ ರೊಮ್ಯಾಂಟಿಕ್‌ ಆಗಿ ಕುಳಿತು, ಅಲೆಗಳನ್ನು ನೋಡುತ್ತಿದ್ದ ಫೋಟೋ ಕೂಡ ವೈರಲ್ ಆಗಿತ್ತು.