Asianet Suvarna News Asianet Suvarna News

'ಬ್ಯಾಡ್‌ಮ್ಯಾನರ್ಸ್‌'ಗೆ ಪ್ರೀಮಿಯರ್‌ ಪದ್ಮಿನಿ ಪ್ರಮೋದ್‌ ವಿಲನ್‌!

ಮತ್ತೊಬ್ಬ ಭರವಸೆಯ ನಟನಿಗೆ ಮಹತ್ವದ ಪಾತ್ರ ನೀಡಿದ ದುನಿಯಾ ಸೂರಿ, ವಿಲನ್ ಪಾತ್ರದಲ್ಲಿ ಪ್ರಮೋದ್‌ ಹೇಗೆ ಕಾಣಿಸುತ್ತಾರೆ?

Premier Padmini fame Pramod to play villain role in Bad manners film vcs
Author
Bangalore, First Published Apr 23, 2021, 9:11 AM IST

ಅಭಿಷೇಕ್‌ ಅಂಬರೀಶ್‌ ನಟನೆಯ ‘ಬ್ಯಾಡ್‌ಮ್ಯಾನರ್ಸ್‌’ ಚಿತ್ರದಲ್ಲಿ ಪ್ರಮೋದ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಮೂಲಕ ಗಮನ ಸೆಳೆದು, ಸದ್ಯ ಹೀರೋ ಆಗಿ ಯಶಸ್ಸಿನ ಹಾದಿಯಲ್ಲಿರುವ ನಟ ಪ್ರಮೋದ್‌ ಈಗಾಗಲೇ ನಾಲ್ಕೈದು ಚಿತ್ರಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದರೂ ಅಭಿಷೇಕ್‌ಗೆ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Premier Padmini fame Pramod to play villain role in Bad manners film vcs

ಈಗಾಗಲೇ ಇಬ್ಬರ ಪಾತ್ರದ ಚಿತ್ರೀಕರಣ ಎರಡನೇ ಹಂತದಲ್ಲಿ ಮುಗಿದಿದ್ದು, ಮೂರನೇ ಹಂತದ ಚಿತ್ರೀಕರಣ ಏ.20ರಿಂದ ಕೋಲಾರದಲ್ಲಿ ನಡೆಯಬೇಕಿತ್ತು. ಕೊರೋನಾ ಕಾರಣಕ್ಕೆ ಚಿತ್ರೀಕರಣ ಮುಂದೂಡಲಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕ ಸೂರಿ ಅವರು ಮತ್ತೊಬ್ಬ ಭರವಸೆಯ ನಟನನ್ನು ವಿಲನ್‌ ಮಾಡಿದ್ದಾರೆ.

ನಿರೀಕ್ಷೆಗಿಂತ ಹೆಚ್ಚು ಅವಕಾಶಗಳು ಸಿಗುತ್ತಿವೆ: ಪ್ರಮೋದ್‌ 

ಸೂರಿ ‘ಟಗರು’ ಚಿತ್ರದಲ್ಲಿ ಧನಂಜಯ್‌ ಅವರನ್ನು ವಿಲನ್‌ ಮಾಡಿ, ಡಾಲಿ ಇಮೇಜ್‌ ತಂದುಕೊಟ್ಟರು. ಈಗ ಪ್ರಮೋದ್‌ ಸರದಿ. ಧನಂಜಯ್‌ ಅವರಂತೆಯೇ ಪ್ರಮೋದ್‌ ಕೂಡ ಹೀರೋ ಕಂ ವಿಲನ್‌ ಆಗಿ ಮಿಂಚಲಿದ್ದಾರೆಯೇ, ಡಾಲಿಗೆ ಸಿಕ್ಕ ಅದೃಷ್ಟಪ್ರಮೋದ್‌ಗೂ ಸಿಗಲಿದೆಯೇ ಎಂಬುದು ಎಲ್ಲರ ಕುತೂಹಲ.

'ರತ್ನನ್‌ ಪ್ರಪಂಚ'ದಲ್ಲಿ ಡಾಲಿ ಸೋದರನಾದ ಪ್ರಮೋದ್‌!

Follow Us:
Download App:
  • android
  • ios