ಪಾರ್ವತಮ್ಮನ ಆಶ್ರಯದಲ್ಲಿ ಕನ್ನಡ ಚಿತ್ರರಂಗ ಒಂದಾಗಿದ್ದ ಕಾಲ; ಇದು ಹೀಗ್ಯಾಕೆ ವೈರಲ್ ಆಗ್ತಿದೆ?!
ಸೋಷಿಯಲ್ ಮೀಡಿಯಾದಲ್ಲಿ ಅದೊಂದು ಫೋಟೋ ಭಾರೀ ವೈರಲ್ ಆಗುತ್ತಿದೆ. ಅದರಲ್ಲಿ ಕನ್ನಡದ ಸ್ಟಾರ್ ನಟರಾಗಿ ಬೆಳೆದಿರುವ ಪುನೀತ್ ಹಾಗೂ ದರ್ಶನ್ ಪಾರ್ವತಮ್ಮನವರ ಅಕ್ಕ-ಪಕ್ಕ ಕುಳಿತು ಫೋಟೋಗೆ ಲುಕ್ ಕೊಟ್ಟಿದ್ದಾರೆ. ಶೇರ್ ಮಾಡಲಾಗಿರುವ ಆ ಫೋಟೋಗೆ..
1975ರಲ್ಲಿ ಡಾ ರಾಜ್‌ಕುಮಾರ್ (Dr Rajkumar) ಅಭಿನಯದ 'ತ್ರಿಮೂರ್ತಿ' ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿ ಎನಿಸಿದರು. 80ರ ದಶಕದ ಬಳಿಕ ಫುಲ್ ಟೈಮ್ ನಿರ್ಮಾಪಕಿಯಾಗಿ ಪಾರ್ವತಮ್ಮ ಅವರು 80 ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 2017ರಲ್ಲಿ ಪಾರ್ವತಮ್ಮನವರು ನಿಧನರಾದರು. ಡಾ ರಾಜ್‌ಕುಮಾರ್ ಕುಟುಂಬ ತಮ್ಮ ಸಿನಿಮಾ ನಿರ್ಮಾಣ ಕೆಲಸವನ್ನು ಈಗಲೂ ಮುಂದುವರೆಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಚಿತ್ರಗಳ ಮೂಲಕ ಡಾ ರಾಜ್‌ಕುಮಾರ್ ಹಾಗೂ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರೆಲ್ಲರೂ ಸ್ಟಾರ್‌ಗಳಾಗಿ ಮೆರೆದರು. ಡಾ ರಾಜ್‌ಕುಮಾರ್ 1975ರಲ್ಲಿ ಪಾರ್ವತಮ್ಮನವರು ನಿರ್ಮಾಣ ಮಾಡುವುದಕ್ಕೂ ಮೊದಲೇ ದೊಡ್ ಸ್ಟಾರ್ ಆಗಿದ್ದರು. ಆದರೆ, ನಿರ್ಮಾಪಕರಿಂದ ಅವರಿಗೆ ತುಂಬಾ ಕಡಿಮೆ ಸಂಬಳ ಸಿಗುತ್ತಿತ್ತು ಎನ್ನಲಾಗಿದೆ.
ಮದುವೆಗೆ ರೆಡಿಯಾಗಿರುವ ಡಾಲಿ ಧನಂಜಯ್ ಅಂತಿಂಥವರಲ್ಲ, ಹತ್ತನೇ ಕ್ಲಾಸ್‌ನಲ್ಲಿ ಮಾಡಿದ್ದೇನು?
ಅದೇ ಕಾರಣಕ್ಕೆ ಪಾರ್ವತಮ್ಮನವರು ತಾವೇ ಪ್ರೊಡಕ್ಷನ್ ಹೌಸ್ ತೆರೆದು ಹಣ ತಮ್ಮ ಕೆಲಸಕ್ಕೆ ಪ್ರತಿಫಲ ಬರುವಂತೆ ನೋಡಿಕೊಂಡರು ಎನ್ನಲಾಗಿದೆ. ಪಾರ್ವತಮ್ಮನವರ ನಿರ್ಮಾಣದ ಚಿತ್ರಗಳ ಮೂಲಕವೇ ಕನ್ನಡದಲ್ಲಿ ಸ್ಟಾರ್ ನಟಿಯರಾಗಿ ಮೆರೆದ ನಟಿಯರಾದ ಸುಧಾರಾಣಿ, ಮಾಲಾಶ್ರೀ, ಅನು ಪ್ರಭಾಕರ್, ರಕ್ಷಿತಾ, ರಮ್ಯಾ ಈ ಎಲ್ಲರೂ ಸಿನಿಮಾರಂಗಕ್ಕೆ ಕಾಲಿಟ್ಟವರು. ಜೊತೆಗೆ, ಅಂದು ಪಾರ್ವತಮ್ಮ ರಾಜ್‌ಕುಮಾರ್ ನೇತೃತ್ವದ 'ವಜ್ರೇಶ್ವರಿ ಕಂಬೈನ್ಸ್'ನಲ್ಲಿಯೇ ಇಂದಿನ ಸ್ಟಾರ್ ನಟರಾದ ದರ್ಶನ್ ಸಹ ಕೆಲಸ ಮಾಡುತ್ತಿದ್ದರು.
ನಟ ದರ್ಶನ್ (Darshan) ಅವರು ಫೆಬ್ರವರಿ ರಂದು (08 ಫೆಬ್ರವರಿ 2002) ಬಿಡುಗಡೆ ಕಂಡ 'ಮೆಜೆಸ್ಟಿಕ್' ಸಿನಿಮಾ ಮೂಲಕ ಕನ್ನಡದಲ್ಲಿ ಸ್ಟಾರ್ ನಟರಾಗಿ ಬೆಳೆದರು. ಅದಕ್ಕೂ ಮೊದಲು 90ರ ದಶಕದಲ್ಲಿ ದರ್ಶನ್ ಅವರು ಕ್ಯಾಮೆರಾ ವಿಭಾಗದಲ್ಲಿ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ತಂತ್ರಜ್ಞರಾಗಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಮೆಜೆಸ್ಟಿಕ್ ಸಿನಿಮಾ ಸಕ್ಸಸ್ ಬಳಿಕ ನಟ ದರ್ಶನ್ ಅವರು ಸ್ವತಂತ್ರ ನಾಯಕರಾಗಿ ಚಿತ್ರರಂಗದಲ್ಲಿ ಸ್ಟಾರ್ ಆಗುವತ್ತ ಹೆಜ್ಜೆ ಹಾಕುತ್ತ ಇಂದು ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಸದ್ಯ ನಟ ದರ್ಶನ್ ಕೊಲೆ ಕೇಸ್ ಒಂದರ ಆರೋಪಿ ಸ್ಥಾನದಲ್ಲಿರುವುದು ಬಹುತೇಕರಿಗೆ ಗೊತ್ತಿರುವ ಸಂಗತಿ.
ರಶ್ಮಿಕಾ-ಪುನೀತ್ ಓಲ್ಡ್ ವಿಡಿಯೋ ವೈರಲ್, ಯಾರಿಗೆ ಕ್ಲಾಸ್ ತಗೋತಿದಾರೆ ನೆಟ್ಟಿಗರು?
ಅದೇ ವರ್ಷ, 2002ರ ಏಪ್ರಿಲ್‌ನಲ್ಲಿ 'ಅಪ್ಪು' ಸಿನಿಮಾದ ಮೂಲಕ (26 ಏಪ್ರಿಲ್ 2002) ಡಾ ರಾಜ್‌ಕುಮಾರ್ ಮೂರನೇ ಮಗ ಪುನೀತ್ ರಾಜ್‌ಕುಮಾರ್ (Puneeth Rajkumar) ಚಿತ್ರರಂಗಕ್ಕೆ ಬಂದು, ಮುಂದೆ ಸ್ಟಾರ್ ನಟರಾಗಿ ಬೆಳೆದರು. ಆದರೆ, ನಟ ಪುನೀತ್ ಅವರು ತಮ್ಮ 46ನೆಯ ವಯಸ್ಸಿನಲ್ಲಿಯೇ (29 October 2021) ಇಹಲೋಕ ತ್ಯಜಿಸಿದರು. ನಟ ಪುನೀತ್ ಅವರು ತಮ್ಮ ಸಿನಿಮಾ ಜರ್ನಿಯ ಪ್ರಾರಂಭದಲ್ಲಿ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಚಿತ್ರಗಳ ಮೂಲಕವೇ ತಮ್ಮ ಸಿನಿಮಾಯಾತ್ರೆ ಮಾಡಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅದೊಂದು ಫೋಟೋ ಭಾರೀ ವೈರಲ್ ಆಗುತ್ತಿದೆ. ಅದರಲ್ಲಿ ಕನ್ನಡದ ಸ್ಟಾರ್ ನಟರಾಗಿ ಬೆಳೆದಿರುವ ಪುನೀತ್ ಹಾಗೂ ದರ್ಶನ್ ಪಾರ್ವತಮ್ಮನವರ ಅಕ್ಕ-ಪಕ್ಕ ಕುಳಿತು ಫೋಟೋಗೆ ಲುಕ್ ಕೊಟ್ಟಿದ್ದಾರೆ. ಶೇರ್ ಮಾಡಲಾಗಿರುವ ಆ ಫೋಟೋಗೆ 'ಪಾರ್ವತಮ್ಮನ ಆಶ್ರಯದಲ್ಲಿ ಕನ್ನಡ ಚಿತ್ರರಂಗ ಒಂದಾಗಿದ್ದ ಕಾಲ..' ಎಂಬ ಶೀರ್ಷಿಕೆ ನೀಡಲಾಗಿದೆ. ಇಂದು ಪಾರ್ವತಮ್ಮ, ಪುನೀತ್ ನಮ್ಮೊಂದಿಗಿಲ್ಲ, ನಟ ದರ್ಶನ್ ಜೀವನ ದುರಂತಮಯವಾಗಿದೆ! ಇದಕ್ಕೆಲ್ಲಾ ಯಾರೂ ಏನೂ ಹೇಳಲು ಸಾಧ್ಯವಿಲ್ಲ, 'ಕಾಲಾಯ ತಸ್ಮೈ ನಮಃ..' ಎನ್ನಬೇಕಷ್ಟೇ!
ನಿರ್ದೇಶಕ ಜೋಗಿ ಪ್ರೇಮ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ದರ್ಶನ್ 'ಕರಿಯ' ಸಿನಿಮಾ ನಟಿ!