ಕಾಂತಾರ ಚಿತ್ರದ ಒಂದು ಹಾಡಿನ ವಿರುದ್ಧ ಕಾಪಿ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.   ವರಾಹ ರೂಪಂ ಹಾಡನ್ನು ಕಾಪಿ ಮಾಡಿದ್ದಾರೆ ಎಂದು ಮಲಯಾಳಂನ ನವರಸಂ ತಂಡ ಆರೋಪ ಮಾಡಿದೆ.

ಕಾಂತಾರ ಸಿನಿಮಾ ದೇಶದಾದ್ಯಂತ ಸದ್ದು ಮಾಡುತ್ತಿದೆ. ದೈವದ ಗಗ್ಗರಕ್ಕೆ ಇಡೀ ಭಾರತೀಯ ಸಿನಿಮಾರಂಗ ದಂಗಾಗಿದೆ. ರಿಷಬ್ ಶೆಟ್ಟಿ ನಿರ್ದೇಶನ, ನಟನೆ, ಕರಾವಳಿಯ ಆಚಾರ, ವಿಚಾರಗಳನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬೇರೆ ಬೇರೆ ಭಾಷೆಗಳಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ಸಿನಿ ಗಣ್ಯರು ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾದ ಮತ್ತೊಂದು ಹೈಲೆಟ್ ಅಂದರೆ ಹಾಡುಗಳು. ಕಾಂತಾರ ಹಾಡುಗಳು ಸಹ ಸಿನಿ ಪ್ರಿಯರ ಹೃದಯ ಗೆದ್ದಿವೆ. ಆದರೀಗ ಚಿತ್ರದ ಒಂದು ಹಾಡಿನ ವಿರುದ್ಧ ಕಾಪಿ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ವರಾಹ ರೂಪಂ ಹಾಡನ್ನು ಕಾಪಿ ಮಾಡಿದ್ದಾರೆ ಎನ್ನಲಾಗಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಲಯಾಳಂನ 'ನವರಸಂ' ಎನ್ನುವ ಆಲ್ಬಂನಿಂದ ಈ ಹಾಡನ್ನು ಕದಿಯಲಾಗಿದೆ ಎನ್ನುವ ಆರೋಪ ಎದುರಾಗಿದೆ. ನವರಸಂ ಆಲ್ಬಂನ ಹಾಡನ್ನ ಬಹುತೇಕ ಯತಾವತ್ತಾಗಿ ಕಾಂತಾರ ಹಾಡಿನಲ್ಲಿ ಬಳಸಲಾಗಿದೆ ಎನ್ನಲಾಗಿದೆ. 'ನವರಸಂ' ಆಲ್ಬಂ ಹಾಡನ್ನು ತೈಕ್ಕುಡಂ ಬ್ರಿಡ್ಜ್​ ತಂಡ ಸಿದ್ಧಪಡಿಸಿದೆ. ತೈಕ್ಕುಡಂ ಬ್ರಿಡ್ಜ್ ನವರು ಕಾಂತಾರ ಸಿನಿಮಾ ವಿರುದ್ಧ ಕೇಸ್ ಹಾಕಲು ನಿರ್ಧರಿಸಿದ್ದಾರೆ. 

‘ಕಾಂತಾರ’ ಚಿತ್ರ ಬಿಡುಗಡೆ ಆದಾಗಲೇ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ಇರುವ ಸಾಮ್ಯತೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ‘ಇದು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ’ ಎಂದು ಅಜನೀಶ್​ ಬಿ. ಲೋಕನಾಥ್ ಅವರು ಸಮಜಾಯಿಷಿ ನೀಡಿದ್ದರು. ಇಷ್ಟು ದಿನ ಸುಮ್ಮನಿದ್ದ ‘ತೈಕ್ಕುಡಂ ಬ್ರಿಡ್ಜ್​’ ತಂಡದವರು ಈಗ ಕೇಸ್​ ಹಾಕಲು ನಿರ್ಧರಿಸಿದ್ದಾರೆ. ಇದೀಗ ಮೂಲ ಆಲ್ಬಂ ಮಾಡಿದವರು 'ಕಾಂತಾರ' ಸಿನಿಮಾದ ನಿರ್ಮಾಪಕ, ನಿರ್ದೇಶಕ, ಹಾಗೂ ಸಂಗೀತ ನಿರ್ದೇಶಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

'ನಮ್ಮ ನವರಸಂ ಹಾಡನ್ನು ಕಾಂತಾರ ಚಿತ್ರತಂಡ ನಕಲು ಮಾಡಿದೆ. ಇದು ಆಡಿಯೋ ಕಾಪಿ ರೈಟ್ಸ್ ಉಲ್ಲಂಘನೆ ಆಗಿದೆ. ನಾವು ಕಾಂತಾರ ಚಿತ್ರತಂಡದ ವಿರುದ್ದ ಕಾನೂನು ಸಮರ ಮಾಡ್ತಿವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕಾಪಿ ರೈಟ್ಸ್ ವಿಚಾರವಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರ್ ಅವರಿಗೆ ಟ್ಯಾಗ್ ಮಾಡಿದ್ದಾರೆ ತೈಕ್ಕುಡಂ ಬ್ರಿಡ್ಜ್.

KGF ಹಿಂದಿಕ್ಕಿದ ಕಾಂತಾರ; ಕರ್ನಾಟಕದಲ್ಲಿ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆ

ಕಾಂತಾರ ಚಿತ್ರ ಬಿಡುಗಡೆ ಆದಾಗಲೇ ವರಾಹ ರೂಪಂ...ಮತ್ತು ನವರಸಂ... ಹಾಡಿನ ನಡುವೆ ಸಾಮ್ಯತೆ ಇದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ‘ಇದು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ’ ಎಂದು ಅಜನೀಶ್​ ಬಿ. ಲೋಕನಾಥ್ ಪ್ರತಿಕ್ರಿಯೆ ನೀಡಿದ್ದರು. ಆದರೀಗ ನವರಸಂ ತಂಡವೇ ಆರೋಪ ಮಾಡಿದೆ. ಇಷ್ಟು ದಿನ ಸುಮ್ಮನಿದ್ದ ತೈಕ್ಕುಡಂ ಬ್ರಿಡ್ಜ್​ ತಂಡದವರು ಈಗ ಕೇಸ್​ ಹಾಕಲು ನಿರ್ಧರಿಸಿದ್ದಾರೆ.

ತುಂಬಾ ಹೆಮ್ಮೆಯಾಗುತ್ತಿದೆ; ಕಾಂತಾರ ನೋಡಿ ಹೊಗಳಿದ ನಟಿ ಪೂಜಾ ಹೆಗ್ಡೆ

ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾಗೆ ಆಡಿಯೋ ಕಾಪಿರೈಟ್ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ರಿಷಬ್ ಶೆಟ್ಟಿ ಹಾಗೂ ಅಜನೀಶ್ ಕಾಂಬಿನೇಷನ್‌ನ ಕಿರಿಕ್ ಪಾರ್ಟಿ ಚಿತ್ರದಲ್ಲಿ ಶಾಂತಿಕ್ರಾಂತಿ ಹಾಡನ್ನು ಕದ್ದಿದ್ದ ಅರೋಪ ಎದುರಿಸಿದ್ರು. ಈಗ ಮತ್ತೆ ಈ ಜೋಡಿಗೆ ಅದೇ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸಿನಿಮಾತಂಡ ಅಥವಾ ರಿಷಬ್ ಕಡೆಯಿಂದ ಯಾವ ಪ್ರತಿಕ್ರಿಯೆ ಬರಲಿದೆ ಎಂದು ಕಾದುನೋಡಬೇಕಿದೆ.