ತಾತನಾದ ಸಂಭ್ರಮದಲ್ಲಿ ಬಿ.ಸಿ ಪಾಟೀಲ್. ಪುತ್ರಿ ಆಗಮನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸೃಷ್ಟಿ. 

'ಹ್ಯಾಪಿ ನ್ಯೂ ಇಯರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಆನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಜೂನ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

'Its a girl. ನಾವು ಈಗ ಫ್ಯಾಮಿಲಿ ಆಗಿದ್ದೀವಿ. ಮಗು ಆರೋಗ್ಯವಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕೆ ಧನ್ಯವಾದಗಳು. ಸೃಷ್ಟಿ ಸುಜಯ್ ಫ್ಯಾಮಿಲಿ,' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಟಿ ಸೋನು ಗೌಡ, ಪನ್ನಗಾಭರಣ, ಸುಹಾನಾ ಸೈಯದ್ ಸೇರಿ ಚಿತ್ರರಂಗದ ಆಪ್ತರು ಶುಭ ಹಾರೈಸಿದ್ದಾರೆ.

ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಸೀಮಂತ ಹೇಗಿತ್ತು ನೋಡಿ! 

ಹಲವು ವರ್ಷಗಳಿಂದ ಸೃಷ್ಟಿ ಮತ್ತು ಸುಜಯ್ ಪ್ರೀತಿಸುತಿದ್ದರು. 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು, 2021ರ ಮುದ್ದು ಲಕ್ಷ್ಮಿಯನ್ನು ಬರ ಮಾಡಿಕೊಂಡಿದ್ದಾರೆ. ಸುಜಯ್ ವೃತ್ತಿಯಲ್ಲಿ ಉದ್ಯಮಿ. ಕೆಲವು ತಿಂಗಳ ಹಿಂದೆ ನಡೆದ ಸರಳ ಸೀಮಂತದ ಪೋಟೋಗಳನ್ನು ಸೃಷ್ಟಿ ಹಂಚಿಕೊಂಡಿದ್ದರು. ಸ್ಯಾಂಡಲ್‌ವುಡ್‌ ಕೌರವನ ಕುಟುಂಬಕ್ಕೆ ಮಹಾರಾಣಿ ಆಗಮನವಾಗಿದೆ.

View post on Instagram