Asianet Suvarna News Asianet Suvarna News

ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ: ಮೇಘನಾ ರಾಜ್, ಧ್ರುವ ಸರ್ಜಾ ಭಾವುಕ ಪೋಸ್ಟ್​​

ಇಂದು ನಟ ಚಿರಂಜೀವಿ ಸರ್ಜಾ ಅವರ ಜನುಮ ದಿನ. ಈ ದಿನಕ್ಕೆ ಅವರ ಪತ್ನಿ ಮೇಘನಾ ರಾಜ್​ ಮತ್ತು ಸಹೋದರ ಧ್ರುವ ಸರ್ಜಾ ಭಾವುಕ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ. 
 

Meghana Raj  Dhruva Sarja shared an emotional post on Chirus birthday suc
Author
First Published Oct 17, 2023, 12:03 PM IST

ಚಿರಂಜೀವಿ ಸರ್ಜಾ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದಿವೆ. 2020ರ ಜೂನ್​ 7ರಂದು ಹೃದಯಾಘಾತದಿಂದ ಅಗಲಿದಾಗ ಇಡೀ ಚಿತ್ರರಂಗ ಶಾಕ್​ ಆಗಿತ್ತು. ಚಿರಂಜೀವಿ ಬದುಕಿರುತ್ತಿದ್ದರೆ, ಅಂದರೆ, ಅಕ್ಟೋಬರ್​ 17ರಂದು 39ನೇ ವರ್ಷ  ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಚಿರು ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದರೆ, ಪತ್ನಿ ಮೇಘನಾ ರಾಜ್​ ಕೂಡ ಭಾವುಕ ಪೋಸ್ಟ್​ ಮಾಡಿದ್ದಾರೆ. ಹ್ಯಾಪ್ಪಿ ಬರ್ತಡೇ ಹಸ್​ಬಂಡ್​ ಎಂದು ಹಳೆಯ ಫೋಟೋ ಒಂದನ್ನು ಶೇರ್​ ಮಾಡಿಕೊಂಡು ಮೇಘನಾ ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ ಚಿರಂಜೀವಿ ಅವರ ಸಹೋದರ ಧ್ರುವ ಸರ್ಜಾ ಕೂಡ ಅಣ್ಣನನ್ನು ನೆನಪಿಸಿಕೊಂಡು ಹುಟ್ಟುಹಬ್ಬಕ್ಕೆ ಶುಭಾಯ ಕೋರಿದ್ದಾರೆ. 

ಚಿರಂಜೀವಿ ಸರ್ಜಾ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಬ್ಬರ ಬಾಂಧವ್ಯ ಎಲ್ಲರಿಗೂ ಗೊತ್ತೇ ಇದೆ. ಅಣ್ಣ ಚಿರಂಜೀವಿ ಸರ್ಜಾ ಅಂದರೆ ಧ್ರುವಾ ಅವರಿಗೆ ಅಷ್ಟೊಂದು ಬಾಂಧವ್ಯವಿತ್ತು. ದಿಢೀರನೇ ಚಿರಂಜೀವಿ ಸರ್ಜಾ  ಹೃದಯಾಘಾತದಿಂದ ಅಗಲಿದಾಗ, ಧ್ರುವ ಸರ್ಜಾ ಮಾನಸಿಕವಾಗಿ ಕುಸಿದಿದ್ದರು. ಇವರಿಬ್ಬರು ಕೇವಲ  ಅಣ್ಣ ತಮ್ಮ ಆಗಿರಲಿಲ್ಲ, ಬದಲಿಗೆ  ಸ್ನೇಹಿತರಂತೆ ಇದ್ದರು. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತವರು. ಅಣ್ಣನ ನೆನಪಿಗೆ ಧ್ರುವ ಅವರು  ಕನಕಪುರ ರಸ್ತೆಯ ನೆಲಗುಳಿಯ ಬಳಿ ಇರುವ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ಸಮಾಧಿ ನಿರ್ಮಿಸಿದ್ದಾರೆ. ಕೆಲವು ದಿನಗಳ ಹಿಂದೆ ಫಾರ್ಮ್‌ಹೌಸ್‌ಗೆ ಭೇಟಿ ನೀಡಿರುವ ಧ್ರುವ ಯಾರಿಗೂ ಹೇಳದ ಹಾಗೆ ಅಣ್ಣನ ಸಮಾಧಿ ಪಕ್ಕದಲ್ಲಿರುವ ಜಾಗದಲ್ಲಿ ದಿಂಬು ಬೆಡ್‌ಶೀಟ್‌ ಹಾಕಿಕೊಂಡು ಮಲಗಿದ್ದರು. ಇದೀಗ ಚಿರು ಅವರ ಕೊನೆಯ  ಚಿತ್ರ ರಾಜಮಾರ್ತಾಂಡ ಬಿಡುಗಡೆಗೆ ಸಜ್ಜಾಗಿದ್ದು, ಅದರ ಟ್ರೇಲರ್​ ರಿಲೀಸ್​ ಆಗಿದೆ. ಟ್ರೇಲರ್​ ನೋಡಿ ಫ್ಯಾನ್ಸ್ ಭಾವುಕರಾಗಿದ್ದು ಕಣ್ಣೀರು ಸುರಿಸುತ್ತಿದ್ದಾರೆ.

ಒಂದೂರಲ್ಲಿ ಒಬ್ಬ ರಾಜ ಇದ್ದ... ಚಿರಂಜೀವಿ ಸರ್ಜಾ ಕೊನೆಯ ಚಿತ್ರ 'ರಾಜಮಾರ್ತಾಂಡ'ದ ಟ್ರೇಲರ್​ ಬಿಡುಗಡೆ

  ಚಿರು ಅವರ ಕೊನೆಯ  ಚಿತ್ರ ರಾಜಮಾರ್ತಾಂಡ ಚಿತ್ರವು ಇದೇ 6ನೇ ತಾರೀಖಿನಿಂದು ಬಿಡುಗಡೆಯಾಗಿದೆ. ಈ ಸಿನಿಮಾದ ಶೂಟಿಂಗ್ ಚಿರು ಇರುವಾಗಲೇ ಮುಗಿದಿತ್ತು. ಆದರೆ ಡಬ್ಬಿಂಗ್ ಮಾತ್ರ ಮುಗಿದಿರಲಿಲ್ಲ. ಆದರೆ ಇದೀಗ ಅದನ್ನು ಚಿರು ಸಹೋದರ, ನಟ ಧ್ರುವ ಸರ್ಜಾ ಅವರು ಕಂಪ್ಲೀಟ್ ಮಾಡಿದ್ದಾರೆ.  ಚಿತ್ರದಲ್ಲಿ ಅಣ್ಣ ಚಿರಂಜೀವಿ ಸರ್ಜಾ ಅವರಿಗೆ ತಮ್ಮ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.  ಧ್ರುವ ಸರ್ಜಾರ ಹುಟ್ಟುಹಬ್ಬದಂದೇ ಅಣ್ಣ ಚಿರಂಜೀವಿ ಸರ್ಜಾರ ಚಿತ್ರ ಬಿಡುಗಡೆಯಾಗಿದೆ.  ರಾಮ್‌ನಾರಾಯಣ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರ ಧ್ವನಿಯಿದೆ. ಅಣ್ಣ ಅಕಾಲಿಕವಾಗಿ ಮೃತಪಟ್ಟ ಬಳಿಕ ತಮ್ಮ ಧ್ರುವ ಸರ್ಜಾ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು.

ಇನ್ನು ಮೇಘನಾ ಮತ್ತು ಚಿರು ಅವರ ದಾಂಪತ್ಯದ ಕುರಿತು ಹೇಳುವುದಾದರೆ, ಇಬ್ಬರೂ ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೇಘನಾ ರಾಜ್‌ ಅವರನ್ನು ಚಿರಂಜೀವಿ ಸರ್ಜಾ ಮನೆಯವರನ್ನು ಒಪ್ಪಿಸಿ 2 ಮೇ 2018 ರಂದು ವಿವಾಹವಾಗಿದ್ದರು. ಮದುವೆಯಾದ ಎರಡೇ ವರ್ಷದಲ್ಲಿ 7 ಜೂನ್‌ 2020 ಮಧ್ಯಾಹ್ನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. ಚಿರು ನಿಧನರಾದಾಗ ಮೇಘನಾ 5 ತಿಂಗಳ ಗರ್ಭಿಣಿಯಾಗಿದ್ದರು.  22 ಅಕ್ಟೋಬರ್‌ 2020 ರಂದು ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. 


ಈ ಹಿಂದೆ ರಾಜಮಾರ್ತಾಂಡ ಕುರಿತು ಮಾತನಾಡಿದ್ದ ಚಿರು ಪತ್ನಿ,  ನಟಿ ಮೇಘನಾ ರಾಜ್‌, 'ಅದ್ಯಾಕೋ ಗೊತ್ತಿಲ್ಲ. ಚಿರಂಜೀವಿ ಸರ್ಜಾ ನಟಿಸುವ ಬೇರೆ ಚಿತ್ರಗಳ ಸಂಭಾಷಣೆಯನ್ನು ಸೆಟ್‌ನಲ್ಲಿ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗುತ್ತಿದ್ದರು. ಆದರೆ ರಾಜಮಾರ್ತಾಂಡ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಈ ಚಿತ್ರವನ್ನು ಅವರು ಅಷ್ಟೊಂದು ಹಚ್ಚಿಕೊಂಡಿದ್ದರು. ಅವರು ನಮ್ಮೊಂದಿಗೆ ಇಲ್ಲದ ಈ ಸಮಯದಲ್ಲಿ ರಾಜಮಾರ್ತಾಂಡ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಸದಾ ನಿಮಗೆ ಇರುತ್ತದೆ' ಎಂದು ಸ್ಮರಿಸಿಕೊಂಡಿದ್ದರು. 

ಕುತೂಹಲದ ವಿಷಯವೆಂದರೆ,   ಧ್ರುವ ಸರ್ಜಾ, ಚಿರು ಮತ್ತು ಚಿರು ಮಗನ ಹುಟ್ಟುಹಬ್ಬವು  ಅಕ್ಟೋಬರ್‌ನಲ್ಲೇ ಇರುವುದು ವಿಶೇಷ. 

ಧ್ರುವ ಸರ್ಜಾ ಮಗಳಿಗೆ ಒಂದು ವರ್ಷ: ತಂಗಿಯ ಜೊತೆ ಚಿರು ಪುತ್ರನ ಕ್ಯೂಟ್​ ಮಾತುಕತೆ ವೈರಲ್

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

Follow Us:
Download App:
  • android
  • ios