Asianet Suvarna News Asianet Suvarna News

ಸೈನಿಕ ಕುಟುಂಬದಿಂದ 'ವಿರಾಟಪರ್ವ' ಫಸ್ಟ್‌ ಲುಕ್‌ ಬಿಡುಗಡೆ!

ನಿರ್ದೇಶಕ ಅನಂತ್‌ಶೈನ್‌ ಅವರ ‘ವಿರಾಟಪರ್ವ’ ಚಿತ್ರಕ್ಕೆ ಸೈನಿಕ ಕುಟುಂಬದ ಬೆಂಬಲ ಸಿಕ್ಕಿದೆ. ಮೈಸೂರಿನ ಹುತಾತ್ಮ ಯೋಧ ಹೇಮ ಚಂದು ಅವರ ಕುಟುಂಬ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದೆ.

Martyer Hema chamdu family releases Kannada movie Virataparva film poster look
Author
Bangalore, First Published Jan 16, 2020, 9:15 AM IST
  • Facebook
  • Twitter
  • Whatsapp

 ಸೈನಿಕರ ದಿನಾಚರಣೆಯ ಪ್ರಯುಕ್ತ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದು, ಭಗತ್‌ ವೀರ್‌ ಸಿಂಗ್‌ ಪಾತ್ರದಲ್ಲಿ ಯಶ್‌ ಶೆಟ್ಟಿ, ಸಾಕಷ್ಟುಗಮನ ಸೆಳೆಯುವಂತಿದ್ದಾರೆ. ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ ಮೈಸೂರಿನ ಯೋಧ ಹೇಮ ಚಂದು, 2001ರಲ್ಲಿ ಜಮ್ಮು ಕಾಶ್ಮಿರದಲ್ಲಿ ಶತ್ರುಗಳ ಬಂದೂಕಿಗೆ ಬಲಿಯಾದವರು.

ಸಿನಿಮಾ ಬಿಟ್ಟು ಪತಿಗೆ ಸಾಥ್ ನೀಡಲು ಟೀಂ ಇಂಡಿಯಾ ಸೇರ್ತಾರಾ ಅನುಷ್ಕಾ ಶರ್ಮಾ?

ಸೈನಿಕರ ದಿನಾಚರಣೆಯ ಪ್ರಯುಕ್ತ ಮೈಸೂರಿನ ಯೋಧನ ಕುಟುಂಬದಿಂದ ನಮ್ಮ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಸಿರುವುದು ಖುಷಿ ವಿಚಾರ. ಚಿತ್ರದಲ್ಲಿ ದೇಶ ಭಕ್ತಿ ಮತ್ತು ದೇಶ ರಕ್ಷಣೆ ವಿಚಾರಗಳು ಇವೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಸದ್ಯದಲ್ಲೇ ತೆರೆಗೆ ತರುವುದಕ್ಕೆ ಪ್ಲಾನ್‌ ಮಾಡುತ್ತಿದ್ದೇನೆ.- ಅನಂತ್‌ ಶೈನ್‌, ನಿರ್ದೇಶಕ

CCD ಸಿದ್ಧಾರ್ಥ ಅಣ್ಣನ ಮಗ, ಮಾಜಿ ಶಿಕ್ಷಣ ಸಚಿವರ ಮೊಮ್ಮಗ 'ರಮಣ್' ಸಿನಿ ಫ್ಯಾಶನ್!

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ಕುಟುಂಬದಿಂದಲೇ ತಮ್ಮ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಸುವುದಕ್ಕೆ ಕಾರಣ, ಚಿತ್ರದ ಕತೆ ದೇಶ ಕಾಯುವ ಯೋಧನ ಕುರಿತಾಗಿರುವುದು. ಈ ಹಿಂದೆ ‘ಮುದ್ದು ಮನಸೆ’ ಚಿತ್ರ ನಿರ್ದೇಶಿಸಿದ ಅನಂತ್‌ ಶೈನ್‌ ಅವರ ಎರಡನೇ ಸಿನಿಮಾ ಇದು. ಸುನೀಲ್‌ ರಾಜ್‌ ನಿರ್ಮಾಪಕರು. ಇವರಿಗಿದು ಮೊದಲ ನಿರ್ಮಾಣದ ಸಿನಿಮಾ. ಯಶ್‌ ಶೆಟ್ಟಿಜತೆಗೆ ಆರು ಗೌಡ, ಸಿದ್ದು, ಅನ್ವಿತಾ ಸಾಗರ್‌, ಚೈತ್ರಾ ಕೊಟ್ಟೂರು ಮುಂತಾದವರು ನಟಿಸಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದ್ದು, ಶಿವು ಬಿ ಕುಮಾರ್‌ ಹಾಗೂ ಶಿವಸೇನಾ ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದಾರೆ. ವಿನೀತ್‌ ರಾಜ್‌ ಮೆನನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

Follow Us:
Download App:
  • android
  • ios