Asianet Suvarna News Asianet Suvarna News

ಮೃತಪಟ್ಟವ್ಯಕ್ತಿಗೆ ಮತ್ತೆ ಮೂರು ದಿನ ಬದುಕಲು ಅವಕಾಶ ಸಿಕ್ಕರೆ ಏನಾಗತ್ತೆ?

ಆಕರ್ಷಕ ಟೈಟಲ್‌ ಹೊತ್ತು ಬರುತ್ತಿರುವ ಕನ್ನಡ ಸಿನಿಮಾಗಳ ಸಾಲಿಗೆ ಈಗ ಹೊಸ ಸೇರ್ಪಡೆ ‘ತುರ್ತು ನಿರ್ಗಮನ’. ಇದು ಸುನೀಲ್‌ ರಾವ್‌, ರಾಜ್‌ ಬಿ. ಶೆಟ್ಟಿ, ಸಂಯುಕ್ತ ಹೆಗ್ಡೆ ಅಭಿನಯದ ಸಿನಿಮಾ. ಈ ಹಿಂದೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹೇಮಂತ್‌ ಕುಮಾರ್‌ ಇದರ ನಿರ್ದೇಶಕ.

Know more about kannada movie thurthu nirgamana
Author
Bangalore, First Published Mar 5, 2020, 2:10 PM IST

ಬಸ್ಸು, ರೈಲು ಇತ್ಯಾದಿ ಸಾರಿಗೆ ವಾಹನಗಳಲ್ಲಿ ತುರ್ತು ನಿರ್ಗಮನ ಎಂದು ಬರೆದಿರುತ್ತಾರೆ. ಹಾಗೆ ಕಂಡ ಬರಹ ಸೃಷ್ಟಿಸಿದ ಕುತೂಹಲದಲ್ಲಿ ಹುಟ್ಟಿದ ಕತೆ ಇದು. ‘ಮೃತಪಟ್ಟವಿಕ್ರಮ್‌ ಎಂಬಾತನಿಗೆ ಕೊನೆಯ ಮೂರು ದಿನಗಳು ಮತ್ತೆ ಜೀವಿಸಲು ಸಿಕ್ಕಾಗ ಆತ ಏನೆಲ್ಲಾ ಸಂದಿಗ್ಧ ಸ್ಥಿತಿಗೆ ಸಿಲುಕುತ್ತಾನೆ ಎನ್ನುವ ಫ್ಯಾಂಟಸಿ ಕತೆ ಇದು. ಬಸ್ಸು, ರೈಲುಗಳಲ್ಲಿ ಕಂಡ ತುರ್ತು ನಿರ್ಗಮನ ಎನ್ನುವ ಬರಹವೇ ಈ ಕತೆ ಹುಟ್ಟಲು ಕಾರಣ. ಆ ಬರಹದ ಹಿಂದಿನ ಇತಿಹಾಸವನ್ನು ಹುಡುಕುವ ಪ್ರಯತ್ನದಲ್ಲಿ ಈ ಸಿನಿಮಾದ ಕತೆ ಹುಟ್ಟಿತು. ಅದರ ಜತೆಗೆ ಬಾಲ್ಯದಲ್ಲಿ ನನ್ನಜ್ಜಿ ಹೇಳುತ್ತಿದ್ದ ಕಾಲ್ಪನಿಕ ಕಥೆಗಳು ಪ್ರೇರಣೆ ಆದವು’ ಎನ್ನುತ್ತಾ ಚಿತ್ರದ ಕತೆಯ ಎಳೆ ಬಿಡಿಸಿಟ್ಟರು ನಿರ್ದೇಶಕ ಹೇಮಂತ್‌ ಕುಮಾರ್‌.

'ಎಕ್ಸ್‌ಕ್ಯೂಸ್‌ಮಿ' ನಟ ಸುನೀಲ್‌ ಈಗ 'ತುರ್ತು ನಿರ್ಗಮನ'ದಲ್ಲಿ!

ಇತ್ತೀಚೆಗೆ ಚಿತ್ರತಂಡ ಟೀಸರ್‌ ಲಾಂಚ್‌ ಜತೆಗೆ ಎರಡು ಹಾಡುಗಳ ಪ್ರದರ್ಶನದೊಂದಿಗೆ ಮಾಧ್ಯಮದ ಮುಂದೆ ಬಂದಿತ್ತು. ಇಲ್ಲಿನ ಇನ್ನೊಂದು ವಿಶೇಷ ನಟ ಸುನೀಲ್‌ ರಾವ್‌ ರೀ-ಎಂಟ್ರಿ. ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರದಲ್ಲಿ ಲವರ್‌ಬಾಯ್‌ ಆಗಿ ಮಿಂಚಿ ಒಂದಷ್ಟುವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವಾಗಿದ್ದ ಸುನೀಲ್‌ ರಾವ್‌ ಈಗ ತುರ್ತು ನಿರ್ಗಮನದ ಮೂಲಕ ತಮ್ಮ ವೃತ್ತಿಬದುಕಿನ ಎರಡನೇ ಇನ್ನಿಂಗ್‌ ಆರಂಭಿಸುತ್ತಿರುವ ಖುಷಿಯಲ್ಲಿದ್ದಾರೆ. ಇಲ್ಲಿ ಸೋಂಬೇರಿ ವಿಕ್ರಮ್‌ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ‘ಕತೆ ಮತ್ತು ಪಾತ್ರ ಎರಡು ಇಲ್ಲಿ ವಿಶೇಷವಾಗಿದೆ. ಎಲ್ಲರ ಜೀವನದ ಕಾಲಘಟ್ಟಗಳಲ್ಲೂ ನಡೆದಿರುವ ಘಟನೆಯೇ ಚಿತ್ರದಲ್ಲಿದೆ’ ಎಂದರು.

 

ರಾಜ್‌ ಬಿ. ಶೆಟ್ಟಿಟ್ಯಾಕ್ಸಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಫಿಲಾಸಫಿಯ ನೆಲೆಗಟ್ಟಿನಲ್ಲಿ ಹುಟ್ಟು ಮತ್ತು ಸಾವನ್ನು ನಿರೂಪಿಸುವ ಸಿನಿಮಾ ಇದಾಗಿದೆ ಎಂದರು. ಧೀರೇಂದ್ರ ದಾಸ್‌ ಸಂಗೀತ ನೀಡಿದ್ದಾರೆ. ಪ್ರಯಾಗ್‌ ಮುಕುಂದನ್‌ ಛಾಯಾಗ್ರಹಣವಿದೆ. ಬಿ. ಅಜಿತ್‌ ಕುಮಾರ್‌ ಸಂಕಲನ ನಿರ್ವಹಿಸಿದ್ದಾರೆ. ಭರತ್‌ ಕುಮಾರ್‌ ಹಾಗೂ ಹೇಮಂತ್‌ ಕುಮಾರ್‌ ಬಂಡವಾಳ ಹಾಕಿದ್ದಾರೆ. ಸುಧಾರಾಣಿ, ಅಚ್ಯುತ್‌ಕುಮಾರ್‌, ಸಂಯುಕ್ತ ಹೆಗ್ಡೆ, ಹಿತಾ ಚಂದ್ರಶೇಖರ್‌ ತಾರಾಗಣದಲ್ಲಿದ್ದು, ಮಾಚ್‌ರ್‍ ತಿಂಗಳ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರಲು ಆಲೋಚನೆ ನಿರ್ಮಾಪಕರಲ್ಲಿದೆ.

Follow Us:
Download App:
  • android
  • ios