ಕಿಚ್ಚ ಸುದೀಪ್ ಗೆ ಅಡುಗೆ ಮಾಡುವುದೆಂದರೆ ಸಿಕ್ಕಾಪಟ್ಟೆ ಇಷ್ಟ. ಆಗಾಗ ಮನೆಯಲ್ಲಿ, ಸೆಟ್ ನಲ್ಲಿ ಅಡುಗೆ ಮಾಡುತ್ತಿರುತ್ತಾರೆ.  ಇತ್ತೀಚಿಗೆ ಸೈರಾ ಸೆಟ್ ನಲ್ಲೂ ಅಡುಗೆ ಮಾಡಿ ಗಮನ ಸೆಳೆದಿದ್ದರು. 

ಹಿಂದಿನ ಸೀಸನ್ ಬಿಗ್ ಬಾಸ್ ನಲ್ಲಿ ಮನೆಗೆ ಬರುವ ಅತಿಥಿಗಳಿಗೆ ವಿಶೇಷವಾದ ಅಡುಗೆಯನ್ನು ಮಾಡಿ ಬಡಿಸುತ್ತಿದ್ದರು. ಕಿಚ್ಚನ ಈ ಕಾರ್ಯಕ್ರಮ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. 

ಯೂಟ್ಯೂಬ್ ನಲ್ಲಿ Kiccha Creations ಎನ್ನುವ ಚಾನೆಲ್ ಹೊಂದಿದ್ದು ಅದರಲ್ಲಿ ಆಗಾಗ ಅಡುಗೆ ರೆಸಿಪಿ ಬಗ್ಗೆ ಹಾಕುತ್ತಿರುತ್ತಾರೆ.  ಕ್ರಿಸ್ಪಿ ಕ್ರೂಸಾಂಟ್ ಎನ್ನುವ ಹೊಸ ರೆಸಿಪಿಯನ್ನು ತಯಾರಿಸಿ ಶೇರ್ ಮಾಡಿಕೊಂಡಿದ್ದಾರೆ.  ನೀವೂ ಒಮ್ಮೆ ರೆಸಿಪಿ ತಯಾರಿಸಿ ನೋಡಿ.