ಕಿಚ್ಚ ಸುದೀಪ್ ಬಾಲಿವುಡ್‌ಗೆ ಹಾರಿ 'ದಬಾಂಗ್- 3' ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ.  'ದಬಾಂಗ್-3' ಯಶಸ್ಸಿನ ನಂತರ ಸುದೀಪ್‌ಗೆ ಬೇರೆ ಬೇರೆ ಕಡೆಯಿಂದ ಆಫರ್‌ಗಳು ಬರುತ್ತಿದೆ ಎನ್ನಲಾಗಿದೆ. ಕಾಲಿವುಡ್‌ನಿಂದಲೂ ಆಫರ್ ಬಂದಿದ್ದು 'ಮನಾಡು' ಎನ್ನುವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು.  ನಿರ್ದೇಶಕರು ಸುದೀಪ್‌ರನ್ನು ಭೇಟಿ ಮಾಡಿ ಕಥೆಯನ್ನೂ ಹೇಳಿದ್ದಾರೆ.  ಕಥೆ ಕೇಳಿ ಸುದೀಪ್ ಆಫರನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು. ಸುದೀಪ್ ಕಾಲಿವುಡ್‌ಗೆ ಹಾರುವುದು ಪಕ್ಕಾ ಎನ್ನಲಾಗಿತ್ತು. 

 

ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಇವೆಲ್ಲಾ ಸುಳ್ಳು ಸುದ್ಧಿ. ಈ ರೀತಿ ನನಗೆ ಆಫರ್ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

'ಮಾನಾಡು' ಚಿತ್ರದಲ್ಲಿ ನಟ ಸಿಂಬು ನಟಿಸುತ್ತಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಕಥಾ ಹಂದರ ಇಟ್ಟುಕೊಂಡ ಸಿನಿಮಾ ಇದಾಗಿದೆ. ಇದರಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುವಂತೆ 'ಕಿಚ್ಚ ಸುದೀಪ್‌'ರನ್ನು ನಿರ್ದೇಶಕರು ಅಪ್ರೋಚ್ ಮಾಡಿದ್ದಾರೆ ಎನ್ನುವ ಸುದ್ಧಿ ಹರಿದಾಡುತ್ತಿತ್ತು. ಇದಕ್ಕೆ ಸುದೀಪ್ ತೆರೆ ಎಳೆದಿದ್ದಾರೆ. ಸದ್ಯ ಸುದೀಪ್ ಕೋಟಿಗೊಬ್ಬ- 3, ಬಿಗ್‌ಬಾಸ್ ಸೀಸನ್ -7 ರಲ್ಲಿ ಬ್ಯುಸಿಯಾಗಿದ್ದಾರೆ.