Asianet Suvarna News Asianet Suvarna News

Breaking ಯಶ್ 19ನೇ ಚಿತ್ರ Toxic , ಕಣ್ಣು ಕುಕ್ಕುವ ಪೋಸ್ಟರ್ ಔಟ್!

19ನೇ ಚಿತ್ರಕ್ಕೆ 'Toxic' ಟೈಟಲ್ ಕೊಟ್ಟ ಯಶ್. 11 ದೇಶಗಳಲ್ಲಿ ರಿಲೀಸ್ ಆಗುತ್ತಿರುವ ಟೈಟಲ್. ಇದು ಪ್ಯಾನ್ ವರ್ಲ್ಡ್ ಸಿನಿಮಾ....

KGF Yash 19th film release title toxic release with KVN productions vcs
Author
First Published Dec 8, 2023, 9:57 AM IST

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ರಾಕಿಂಗ್ ಸ್ಟಾರ್, ಕೆಜಿಎಫ್‌ ಹಿಟ್‌ ಕಿಂಗ್ ಯಶ್ ನಟನೆಯ 19ನೇ ಸಿನಿಮಾದ ಶೀರ್ಷಿಗೆ ಇಂದು ಘೋಷಣೆಯಾಗಿದೆ. ಚಿತ್ರಕ್ಕೆ  Toxic ಟೈಟಲ್ ನೀಡಿರುವ ಚಿತ್ರ ತಂಡ ಕಣ್ಣು ಕುಕ್ಕುವ ಪೋಸ್ಟರ್ ರಿಲೀಸ್ ಮಾಡಿದೆ. ಕೆವಿಎನ್‌ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದ್ದು ಟೈಟಲ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿತ್ತು. ಈಗ ಕುತೂಹಲ ಕ್ರಿಯೇ ಆಗಿರುವುದು ಪಾತ್ರಧಾರಿಗಳ ಮೇಲೆ. 

ಕೆವಿನ್‌ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿರುವ ಯಶ್ ನಟನೆಯ 19ನೇ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ ಆಗಲಿದ್ದಾರೆ ಎನ್ನುವ ಸುದ್ದಿ ಕೇರಳ ಕಡೆಯಿಂದ ಕೇಳಿ ಬರುತ್ತಿದೆ. ಸಾಯಿ ಪಲ್ಲವಿ ಚಿತ್ರದ ಕತೆ ಕೇಳಿದ್ದಾರೆ ಎನ್ನಲಾಗಿದೆ. ಕೇರಳ ಮೂಲದ ಗೀತು ಮೋಹನ್‌ದಾಸ್‌ ಈ ಚಿತ್ರದ ನಿರ್ದೇಶಕಿ. ಮೋನ್‌ಸ್ಟಾರ್‌ ಮೈಂಡ್‌ ಕ್ರಿಯೆಶನ್ಸ್‌ ನಲ್ಲಿ ಮೂಡಿಬರಲಿರುವ ಟಾಕ್ಸಿಕ್ ಸಿನೆಮಾದ  ಟೈಟಲ್ ಅನ್ನು 11 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ.

ಯಶ್ 19ನೇ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ; ಕೇರಳದಲ್ಲಿ ದೊಡ್ಡ ಚರ್ಚೆ!

ಚಿತ್ರದ ಟೈಟಲ್‌ನ ಸಖತ್ ವಿಭಿನ್ನವಾಗಿ ಅನೌನ್ಸ್ ಮಾಡಿದ್ದಾರೆ. ಆರಂಭದಲ್ಲಿ ಜೋಕರ್ ಕಾರ್ಡ್‌ ಬರುತ್ತದೆ ನಂತರ ನಿರ್ಮಾಣ ಸಂಸ್ಥೆ ಹೆಸರು ಬರಲಿದೆ. ಮೋನ್‌ಸ್ಟಾರ್‌ ಮೈಂಡ್‌ ಕ್ರಿಯೆಶನ್ಸ್‌ ಬೆನ್ನಲೆ ನಿರ್ದೇಶಕಿ ಗೀತಾ ಮೋಹನದಾಸ್‌ ಎಂದು ಅನೌನ್ಸ್ ಆಗುತ್ತದೆ. ಯಶ್ ಸಂಪೂರ್ಣ ಲುಕ್ ರಿವೀಲ್ ಅಗಿಲ್ಲ ಆದರೆ ಕೈಯಲ್ಲಿ ರುದ್ರಾಕ್ಷಿ, ತಲೆಯಲ್ಲಿ ತೋಪಿ ಸ್ಪಷ್ಟವಾಗಿ ಕಾಣಿಸುತ್ತದೆ. ಟಾಕ್ಸಿಕ್‌  'A fairy tale of Grown ups' ಎಂದು ಟೈಟಲ್ ಅನೌನ್ಸ್ ಆಗುತ್ತದೆ. 'Chaos is man and you want him' ಅನ್ನೋ ಧ್ವನಿ ಕೇಳಿ ಬರುತ್ತದೆ. ಚಿತ್ರದ ಟೈಟಲ್ ಅನೌನ್ಸ್ ದಿನವೇ ಸಿನಿಮಾ ಏಪ್ರಿಲ್ 10 2025ರಲ್ಲಿ ರಿಲೀಸ್‌ ಎಂದು ರಿವೀಲ್ ಮಾಡಿದ್ದಾರೆ.

ವಿಷ ಅನ್ನುವ ಅರ್ಥ ಬರುವ ಟೈಟಲ್‌ ಟಾಕ್ಸಿಕ್‌. ವಿಷಕಾರಿ ವಿಷಯಗಳನ್ನು ಹೇಳುವ ಸಿನೆಮಾವಂತೆ, ಗೋವಾದ ಡ್ರಗ್‌ ಮಾಫೀಯಾ ಬಗ್ಗೆ ಇರುವ ಸಿನೆಮಾ ಎಂದು ಹೇಳಲಾಗುತ್ತಿದೆ. ಹಾಲಿವುಡ್‌ ಮೂವಿ ರೇಂಜ್‌ ನಲ್ಲಿ ಈ ಸಿನೆಮಾ ಮೂಡಿ ಬರುತ್ತಿದೆ. ಎಪ್ರಿಲ್‌ 10, 2025 ರಂದು  ರಿಲೀಸ್‌  ಆಗಲಿದೆ ಎಂದು ತಂಡ ಸ್ಪಷ್ಟಪಡಿಸಿದೆ.

ಭಾರತೀಯರು ಬರುತ್ತಿದ್ದೇವೆ ಎಂದು ಜಗತ್ತಿನ ಮುಂದೆ ತಲೆಯೆತ್ತಿ ಹೇಳ್ಬೇಕು; ರಾಕಿಂಗ್ ಸ್ಟಾರ್ ಯಶ್

ಗೀತು ಮೋಹನದಾಸ್ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮಹಿಳಾ ನಿರ್ದೇಶಕಿ,  ಲಯರ್ಸ್ ಡೈರಿ ಮತ್ತು ಮೂತುನ್ ಅಂಥ ಸಿನಿಮಾಗಳಿಗೆ ಪ್ರಸಿದ್ಧರಾಗಿದ್ದಾರೆ. ಲಯರ್ಸ್ ಡೈರಿ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಸೇರಿದಂತೆ ವಿಶ್ವದಾದ್ಯಂತ 6 ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. ಸದ್ಯ ಗೀತು ಅವರು ರಾಕಿಂಗ್ ಸ್ಟಾರ್ ಜೊತೆ ಮತ್ತೊಂದು ವಿಭಿನ್ನ ಕಾನ್ಸೆಪ್ಟ್‌ನ ಸಿನಿಮಾ ಮೂಲಕ ಬರ್ತಿದ್ದಾರೆ.

 

Follow Us:
Download App:
  • android
  • ios