ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಮಗನನ್ನು ಎತ್ತಿಕೊಂಡು ಬೇಬಿ ಶಾರ್ಕ್ ಡು ಡು ಅಂತ ಹಾಡಿದ್ದಾರೆ. ಮಾಲ್ಡೀವ್ಸ್ ಅಂಡರ್ ವಾಟರ್ ವೆಕೇಷನ್ ಹೇಗಿತ್ತು ನೋಡಿ
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಯಶ್-ರಾಧಿಕಾ ಮಾಲ್ಡೀವ್ಸ್‌ನಲ್ಲಿ ಫ್ಯಾಮಿಲಿ ವೆಕೇಷನ್ ಎಂಜಾಯ್ ಮಾಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಬಂದಿಳಿದ ನಂತರ ಚಂದ ಚಂದದ ಫೋಟೋಸ್ ಶೇರ್ ಮಾಡಿದ್ದಾರೆ ಯಶ್ ದಂಪತಿ.
ಐರಾ ತಮ್ಮನ ಜೊತೆ ಮಾಲ್ಡೀವ್ಸ್ ಮರಳಿನಲ್ಲಿ ಮುದ್ದಾಗಿ ಆಟವಾಡುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಇನ್ನು ಯಶ್ ರಾಧಿಕಾ ಕಪಲ್ ಫೋಸ್ ಕೂಡಾ ಮುದ್ದಾಗಿ ಮೂಡಿ ಬಂದಿದೆ.
ಅಭಿಮಾನಿಗಳ ಅದೊಂದು ಬೇಡಿಕೆಗೆ ಮಾಲ್ಡೀವ್ಸ್‌ನಿಂದಲೇ ಸ್ಪಂದಿಸಿದ ಯಶ್ ಕುಟುಂಬ
ಇದೀಗ ಯಶ್ ಮಗನ ಜೊತೆ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ನೀರಿನಾಳದಲ್ಲಿ ಗಾಜಿನ ಒಳಗೆ ಮಗನ ಜೊತೆಗೆ ನಿಂತು ಸೆಲ್ಫೀ ಕ್ಲಿಕ್ಕಿಸಿದ್ದಾರೆ. ನೀರಿನಲ್ಲಿ ಪುಟ್ಟ ಪುಟ್ಟ ಮೀನುಗಳು ಈಜುವುನ್ನೂ ಕಾಣಬಹುದು. ಮಕ್ಕಳಿಗೆ ಇದಕ್ಕಿಂತ ಇಂಟ್ರೆಸ್ಟಿಂಗ್ ಬೇರೇನು ಬೇಕು ಹೇಳಿ..?

ಫೊಟೋ ಶೇರ್ ಮಾಡಿರುವ ಯಶ್, ಬೇಬಿ ಶಾರ್ಕ್ ಡೂ ಡೂ ಡೂ ವಿತ್ ಡಾಡಿ ಶಾರ್ಕ್ ಡೂ ಡೂ ಡೂ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ನೋವೈ ಕೇಳಿರ್ಬೋದಲ್ಲಾ ಬೇಬಿ ಶಾರ್ಕ್ ಸಾಂಗ್, ಯಶ್ ಫೋಟೋಗಂತೂ ಕರೆಕ್ಟಾಗಿ ಸೂಟ್ ಆಗಿದೆ.
