ವಿಜಯ್‌ ಪ್ರಚಾರ ಬಯಸದೆ ತಮ್ಮ ಸಂಸ್ಥೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೂ ಧನ ಸಹಾಯ ನೀಡಿದ್ದಾರೆ. ಕೆಜಿಎಫ್‌, ಯುವರತ್ನ ಚಿತ್ರತಂಡದ ಸದಸ್ಯರಿಗೆ ತಿಂಗಳುಗಳ ಹಿಂದೆಯೇ ಧನಸಹಾಯ ನೀಡಿದ್ದು, ಇದೀಗ ತಮ್ಮ ನಿರ್ಮಾಣದ, ಪ್ರಶಾಂತ್‌ ನೀಲ್‌ ನಿರ್ದೇಶನದ, ಪ್ರಭಾಸ್‌ ನಟನೆಯ ಸಲಾರ್‌ ಚಿತ್ರತಂಡದವರಿಗೂ ಆರ್ಥಿಕ ನೆರವು ನೀಡಿದ್ದಾರೆ. ಆ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಂಗಳೂರು: ಹೊಂಬಾಳೆ ಫಿಲಂಸ್‌ ಸಂಸ್ಥೆಯ ಮುಖ್ಯಸ್ಥ, ಕೆಜಿಎಫ್‌ ಸಿನಿಮಾ ನಿರ್ಮಾಪಕ ವಿಜಯ್‌ ಕಿರಗಂದೂರು ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 32 ಲಕ್ಷ ರು. ನೆರವು ನೀಡಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.

ಹುಟ್ಟೂರು ಮಂಡ್ಯದ ನೆರವಿಗೆ ಮುಂದಾದ ಕೆಜಿಎಫ್‌ ನಿರ್ಮಾಪಕ 

ಇಂಥಾ ಸಂಕಷ್ಟಸಮಯದಲ್ಲಿ ಸಿನಿಮಾ ಕಾರ್ಮಿಕರಿಗೆ ಧ್ವನಿಯಾಗಿದ್ದಕ್ಕೆ, ಅವರಿಗೆ ಸಹಾಯ ಹಸ್ತ ಚಾಚಿದ್ದಕ್ಕೆ ವಿಜಯ್‌ ಕಿರಗಂದೂರು ಹಾಗೂ ಹೊಂಬಾಳೆ ಫಿಲಂಸ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ.- ಸಾ.ರಾ. ಗೋವಿಂದು, ಚಲನಚಿತ್ರ ವಾಣಿಜ್ಯಮಂಡಳಿ ಮಾಜಿ ಅಧ್ಯಕ್ಷ

ಪ್ರಸ್ತುತ ಕಾರ್ಮಿಕರ ಒಕ್ಕೂಟದಲ್ಲಿ 21 ವಿಭಾಗಗಳಿವೆ. ಅದರಲ್ಲಿ 3200ರಷ್ಟುಸಿನಿಮಾ ಕಾರ್ಮಿಕರಿದ್ದಾರೆ. ಪ್ರತಿಯೊಬ್ಬರ ಬ್ಯಾಂಕ್‌ ಅಕೌಂಟ್‌ ಖಾತೆಯ ವಿವರಗಳನ್ನು ತರಿಸಿಕೊಂಡು, ತಲಾ 1000 ರು.ನಂತೆ ಅಷ್ಟೂಕಾರ್ಮಿಕರ ಖಾತೆಗೂ ಮೊತ್ತವನ್ನು ವರ್ಗಾಯಿಸಲಾಗಿದೆ. ವಿಜಯ ಕಿರಗಂದೂರು ಅವರ ಈ ನೆರವಿಗೆ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್‌ ಕೃತಜ್ಞತೆ ಸಲ್ಲಿಸಿದ್ದಾರೆ.