ಸ್ಯಾಂಡಲ್‌ವುಡ್ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ ನಲ್ಲಿ ನಟಿಸುವ ಕನಸು ಹೊಂದಿದ್ದವರಿಗೆ ಇಲ್ಲಿದೆ ಸುವರ್ಣಾವಕಾಶ. ಕೆಜಿಎಫ್ -2 ಗಾಗಿ ಶುರುವಾಗಿದೆ ಆಡಿಶನ್. ಬನ್ನಿ, ನಿಮ್ಮ ಪ್ರತಿಭಾ ಅನಾವರಣಕ್ಕೆ ಇಲ್ಲಿದೆ ಅವಕಾಶ.
ಸ್ಯಾಂಡಲ್ ವುಡ್ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ ಲಿ ನಟಿಸಲು ಒಂದು ಅವಕಾಶ ಸಿಕ್ಕರೆ ಎಂದು ಎಲ್ಲರೂ ಕಾಯುತ್ತಿರುತ್ತಾರೆ. ಅಂತವರಿಗಾಗಿ ಇಲ್ಲಿದೆ ಸುವರ್ಣಾವಕಾಶ.
ಕೆಜಿಎಫ್ -2 ಶೂಟಿಂಗ್ ಶುರುವಾಗಿದೆ. ಕೆಲವು ಪಾತ್ರಕ್ಕಾಗಿ ಆಡಿಶನ್ ಶುರು ಮಾಡಿದೆ. 8-16 ವರ್ಷದೊಳಗಿನ ಹುಡುಗರು ಬೇಕಾಗಿದ್ದಾರೆ. ಅದೇ ರೀತಿ 25 ವರ್ಷಕ್ಕೂ ಮೇಲ್ಪಟ್ಟ ಕಲಾವಿದರೂ ಬೇಕಾಗಿದ್ದಾರೆ. ಇದೇ ಏಪ್ರಿಲ್ 26 ರಂದು ಆಡಿಶನ್ ಶುರುವಾಗಲಿದೆ. ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಆಡಿಶನ್ ನಡೆಯಲಿದೆ. ಆಡಿಶನ್ ಗೆ ಹೋಗುವ ಮುನ್ನ ಒಂದು ನಿಮಿಷದ ಡೈಲಾಗ್ ಸಿದ್ಧಪಡಿಸಿಕೊಳ್ಳಿ.
ಸ್ಥಳ: ಜಿಎಂ ರೆಜಾಯ್ಸ್
8 ನೇ ಅಡ್ಡರಸ್ತೆ, 8 ನೇ ಮೇನ್, ಮಲ್ಲೇಶ್ವರಂ, ಬೆಂಗಳೂರು
