ಡಾರ್ಲಿಂಗ್‌ ಕೃಷ್ಣ ಅಭಿನಯ ಹಾಗೂ ನಿರ್ದೇಶನದ 'ಲವ್‌ ಮಾಕ್‌ಟೇಲ್‌' ಚಿತ್ರ ಈಗಾಗಲೇ ಸಿನಿ ಪ್ರೇಮಿಗಳ ಮೆಚ್ಚುಗೆ ಪಡೆದುಕೊಂಡಿದೆ. ಮೆಚ್ಚುಗೆಗೆ ತಕ್ಕಂತೆ ಶ್ರಮವಿರುತ್ತೆ ಅಲ್ವಾ? ಇಲ್ಲಿ ನೋಡಿ ಮೇಕಿಂಗ್ ವಿಡಿಯೋ.... 

ಸದ್ಯ ಗಾಂಧಿ ನಗರದಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿರುವುದು 'ಲವ್‌ ಮಾಕ್‌ಟೇಲ್‌' ಚಿತ್ರ. ತಮ್ಮ ಅಭಿನಯದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಡಾರ್ಲಿಂಗ್ ಆಗಿದ್ದ ಕೃಷ್ಣ ಈಗ ಆದಿಯಾಗಿಯೂ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ.

'ಲವ್‌ ಮಾಕ್ಟೇಲ್‌' ಅದಿತಿ ರಿಯಲ್‌ ಲೈಫ್‌ನ ಆದಿ ಯಾರು ನೋಡಿ!

ಚಿತ್ರಮಂದಿರದಲ್ಲಿ ತೆರೆ ಕಂಡಾಗ ಪಡೆಯದ ಮೆಚ್ಚುಗೆಯನ್ನು ಅಮೇಜಾನ್‌ ಪ್ರೈಂನಲ್ಲಿ ರಿಲೀಸ್‌ ಆದ ದಿನದಿಂದಲೂ ಪಡೆದುಕೊಳ್ಳುತ್ತಿದೆ. ಸ್ಕೂಲ್‌ ಹುಡುಗನ ಲೈಫಿನಲ್ಲಿ ಚಿಗುರಿದ ಲವ್ ಲೈಫ್‌ ದೊಡ್ಡವರಾಗುತ್ತಾ ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ, ಎಂದು ಈ ಚಿತ್ರದಲ್ಲಿ ಕಾಣಬಹುದು. ಹಾಡುಗಳು ಈಗಾಗಲೆ ಲಕ್ಷಾಂತರ ವ್ಯೂವ್ಸ್ ಪಡೆದುಕೊಂಡಿದೆ. ಸುಮಾರು ಒಂದು ವರ್ಷ ಇದಕ್ಕೆಂದೇ ಸಮಯ ಮೀಸಲಿಟ್ಟು ತಯಾರಿ ಮಾಡಿರುವ ಚಿತ್ರದ ಹಿಂದಿರುವ ಕಷ್ಟ-ಸುಖ- ಹಾಗೂ ತಮಾಷೆಗಳನ್ನು ನಿರ್ದೇಶಕ ಕಮ್‌ ನಟ ಡಾರ್ಲಿಂಗ್‌ ಕೃಷ್ಣ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

View post on Instagram

ಮಕ್ಕಳ ಜೊತೆ ಸ್ಕೂಲ್‌ ಹುಡುಗನ ಟ್ಯೂಷನ್‌ ಲವ್‌ ಸ್ಟೋರಿ ಚಿತ್ರೀಕರಣದ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜಿಗೆ ಕಾಲಿಟ್ಟಾಗ ಫರ್ಸ್ಟ್‌ ಟೈಂ ಹುಡುಗಿ ಜೊತೆ ಹೊಟೇಲ್ ಹೋದಾಗ ಅಲ್ಲಿನ ಹುಡುಗಿಯರು ಹೇಗೆಲ್ಲಾ ರಿಯಾಕ್ಟ್‌ ಮಾಡುತ್ತಾರೆ? ಅನ್ನೋ ದೃಶ್ಯದ ಮೇಕಿಂಗ್‌ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ತಮ್ಮ ಮೋಸ್ಟ್‌ ಫೇವರೆಟ್‌ ದೃಶ್ಯವೆಂದು ಹೇಳಿಕೊಂಡಿದ್ದಾರೆ. 

View post on Instagram

ಇನ್ನು ಕೆಲಸಕ್ಕೆ ಸೇರಿಕೊಂಡ ಮೇಲೆ ಅಲ್ಲಿನ ಲವ್‌ ಬಗ್ಗೆ ಹೇಳೋದು ಬೇಡ್ವಾ? ನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೈಗೆ ನಿಜವಾಗಲೂ ಇಂಜೆಕ್ಷನ್ ಹಾಕಲಾಗುತ್ತದೆ. ಅದರ ಮೇಕಿಂಗ್‌ ವಿಡಿಯೋ ಶೇರ್ ಮಾಡಿಕೊಂಡು 'ಇದು ನನಗೆ ತುಂಬಾ ನೋವುಂಟು ಮಾಡುವ ಸೀನ್‌ ಯಾಕಂದ್ರೆ ನನ್ನ ಲವ್‌ಗೆ ಹರ್ಟ್‌ ಮಾಡಿದೆ,,,' ಎಂದೂ ಬರೆದುಕೊಂಡಿದ್ದಾರೆ.

View post on Instagram