ಸ್ಟಾರ್ ಕಿಡ್ಸ್ ಐರಾ ಮತ್ತು ಜೂನಿಯರ್‌ ಯಶ್‌ ತಮ್ಮ ಬದುಕಿಗೆ ಎಂಟ್ರಿ  ಕೊಟ್ಟಾಗಿನಿಂದಲೂ ಸಿನಿಮಾದಿಂದ ದೂರ ಉಳಿದಿರುವ ನಟಿ ರಾಧಿಕಾ ಪಂಡಿತ್ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಕೆಜಿಎಫ್ 2 ಚಿತ್ರೀಕರಣವೂ ಶೆಡ್ಯೂಲ್ ಪ್ರಕಾರ ನಡೆಯುತ್ತಿರುವ ಕಾರಣ ಯಶ್‌ ಕೂಡ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ರಾಧಿಕಾಗೆ ಸಹಾಯ ಮಾಡುತ್ತಿದ್ದಾರೆ.

12 ವರ್ಷದ ಸಿನಿ ಜರ್ನಿ: ತೆರೆ ಮೇಲೆ ಬರಲು ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರೆಡಿ!

ರಾಧಿಕಾ ಪೋಸ್ಟ್:

ನಟಿ ರಾಧಿಕಾ ಪಂಡಿತ್ ಮೂಲತಃ ಗೋವಾದವರಾದ ಕಾರಣ ಬೀಚ್‌ ಸ್ಥಳಗಳನ್ನು ತುಂಬಾ ಇಷ್ಟ ಪಡುತ್ತಾರೆ. ಪ್ರತಿ ವರ್ಷವೂ ಸಮಯ ಮಾಡಿಕೊಂಡು ಫ್ಯಾಮಿಲಿ ವೆಕೇಶನ್‌ ಹೋಗುತ್ತಾರೆ.  ಈ ಹಿಂದೆ ಟ್ರ್ಯಾವಲ್ ಮಾಡಿದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

 

'ನಾನು ಬೀಚ್‌ ಮಿಸ್ ಮಾಡುತ್ತಿದ್ದೀನಿ, ಮಕ್ಕಳನ್ನು ಸಂಜೆ ಪಾರ್ಕ್‌ಗೆ ಕರೆದು ಹೋಗುವುದನ್ನು ಮಿಸ್‌ ಮಾಡುತ್ತೇನೆ, ಸ್ನೇಹಿತರನ್ನು ಭೇಟಿ ಮಾಡುವುದನ್ನು ಮಿಸ್ ಮಾಡುತ್ತೇನೆ. ಇನ್ನು ತುಂಬಾ ವಿಚಾರಗಳನ್ನು ಮಿಸ್ ಮಾಡುತ್ತಿರುವೆ. ಆದರೆ ಪ್ರಜ್ಞಾವಂತ ನಾಗರೀಕರಾಗಿ ಎಲ್ಲವೂ ನಾರ್ಮಲ್‌ ಸ್ಥಿತಿಗೆ ಬರುವವರೆಗೂ ನಾವು ಮನೆಯಲ್ಲಿಯೇ ಸುರಕ್ಷಿತವಾಗಿರಬೇಕು ಎಂದು ಜಾಗೃತಿ ಮೂಡಿಸಿದಲ್ಲದೇ ನೀವೆಲ್ಲರೂ ಏನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೀರಾ? ' ಎಂದು ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ.