ಸ್ಯಾಂಡಲ್‌ವುಡ್‌ 'ಬುಲ್ ಬುಲ್' ರಚಿತಾ ರಾಮ್‌ರನ್ನು ನೇರವಾಗಿ ನೋಡಲು, ಮಾತನಾಡಿಸಲು, ಫೋಟೋ-ಆಟೋಗ್ರಾಫ್‌ ಪಡೆಯಲು ಅಭಿಮಾನಿಗಳು ಮನೆ ಬಳಿ ಕಾಯುವುದು ಸರ್ವೇ ಸಾಮಾನ್ಯ. ಕೋವಿಡ್‌-19 ಹೆಚ್ಚಾದ ಕಾರಣ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ರಚ್ಚುಗೆ ಒಂದು ದಿನ ಬೆಳಗ್ಗೆ  ಸೂಪರ್ ಸರ್ಪ್ರೈಸ್ ಕಾದಿತ್ತು ನೋಡಿ ..

ಚಿಕ್ಕಮಗಳೂರಿನಲ್ಲಿ ಪವರ್‌ ಸ್ಟಾರ್; ರಕ್ತ ಸುರಿಸುತ್ತಾ ಕೋಪದಲ್ಲಿ ಕುಳಿತ ರಚಿತಾ ರಾಮ್!

ಲಾಕ್‌ಡೌನ್‌ ಸಡಿಲಿಕೆ ನಂತರ ಚೆನ್ನೈನಲ್ಲಿ ತೆಲುಗಿನ 'ಸೂಪರ್ ಮಚ್ಚಿ'ಚಿತ್ರದ  ಚಿತ್ರೀಕರಣದಲ್ಲಿ ಪಾಲ್ಗೊಂಡ ರಚಿತಾ ರಾಮ್ ಬೆಂಗಳೂರಿಗೆ ಮರಳಿದ್ದಾರೆ. ಮನೆಯಲ್ಲೇ ಹೆಚ್ಚಾಗಿ ಸಮಯ ಕಳೆಯುವ ರಚಿತಾ ರಾಮ್‌ಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದು ಓರ್ವ ಆಟೋ ಡ್ರೈವರ್‌...ಹೆಸರು ಗೊತ್ತಿಲ್ಲ, ಎಲ್ಲಿಂದ ಬಂದದ್ದು ತಿಳಿದಿಲ್ಲ...ಈ ಬಗ್ಗೆ ರಚ್ಚು ಹೇಳಿದ ಮಾತು ಇಲ್ಲಿದೆ ನೋಡಿ ..

ಅಭಿಮಾನಿಗಳೇ ದೇವರು:

ರಚಿತಾ ರಾಮ್‌ ಮನೆಯ ಮುಂದೆ ಗಂಟೆಗಟ್ಟಲೆ ಕಾದು ಕುಳಿತಿದ್ದ  ಅಭಿಮಾನಿಯನ್ನು ನೋಡಿದ ರಚಿತಾ ತಾಯಿ  'ರಚ್ಚು ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯುತ್ತಿದ್ದಾರೆ ನೋಡು' ಎಂದು ಹೇಳಿದ್ದಾರೆ. ಯಾರಿರಬಹುದು ಎಂದು ರಚ್ಚು ಹೊರಗೆ ಹೋಗಿ ನೋಡಿದರೆ ಆಟೋ ಪಕ್ಕದಲ್ಲಿ ಮೂರು ಜನ ಕಾಯುತ್ತಿದ್ದರಂತೆ. ರಚಿತಾ ಅವರನ್ನು ನೋಡಿ ಫುಲ್ ಖುಷ್ ಆಗಿರುವ ಟವರು ರಚಿತಾ ಅವರಿಗೆ ಮಾತನಾಡಲು ಬಿಡದೇ ಫುಲ್ ಎಕ್ಸೈಟ್‌ಮೆಂಟ್ ನಿಂದ  'ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿಗಳು ನನ್ನ ಆಟೋ ಮೇಲೆ 1st ಪೋಟೋ ನಿಮ್ದೇ ಇರ್ಬೇಕು ಮೇಡಂ'  ಎಂದು ಹೇಳಿ ರಚ್ಚು ಫೋಟೋ ಅಂಟಿಸಿ ಆಟೋಗ್ರಾಫ್ ಹಾಗೂ ಸೆಲ್ಪಿ ಪಡೆದುಕೊಂಡಿದ್ದಾರೆ. 

ಅವರ ಪ್ರೀತಿಯನ್ನು ಕಂಡು ರಚಿತಾ ರಾಮ್ ಭಾವುಕರಾಗಿದ್ದಾರೆ. ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ ಎಂದು ಇನ್‌ಸ್ಟಾಗ್ರಾಂ ಮೂಲಕ ಅವರ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. 'ನಿಮ್ಮ Instagram accountನಲ್ಲಿ ಫೋಟೋ ಹಾಕಿ ನನ್ನನ್ನು ಟ್ಯಾಗ್ ಮಾಡಿ. ನಾನು ರಿಪೋಸ್ಟ್‌ ಮಾಡುತ್ತೇನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ' ಎಂದು ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

"ಅಭಿಮಾನಿಗಳೇ ದೇವ್ರು" ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತ ಪಡಿಸ್ತಾರೆ ತುಂಬಾ ಸಂತೋಷ ಆಗುತ್ತೆ. ಆದ್ರೇ ಇವತ್ ಬೆಳಿಗ್ಗೆ ಅಮ್ಮ ಬಂದು "ರಚ್ಚು ಬೆಳಿಗ್ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದ್ರು", ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡ್ದೇ "ಮೇಡಂ ನಾವ್ ನಿಮ್ ದೊಡ್ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ" ಎಂದು ಗಿಫ್ಟ್ ವ್ರಾಪರ್ ಒಪೆನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು; ನಿಜಕ್ಕೂ ಭಾವುಕನಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕನಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ; ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ❤️🙏 ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ❤️🙏 ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ🙏 ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ instagram account ನಲ್ಲಿ ಹಾಕಿ ನನ್ನನ್ನ tag ಮಾಡಿ. ನಾನು repost ಮಾಡುತ್ತೆನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ. ನಿಮ್ಮ, ರಚಿತಾ ರಾಮ್

A post shared by Rachita Ram (@rachita_instaofficial) on Jul 2, 2020 at 9:04am PDT

ಆಟೋ ಮುಂದಿರುವ ಫೋಟೋ ಶೇರ್ ಮಾಡಿದ 12 ಗಂಟೆಯಲ್ಲಿ 96 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಅಷ್ಟೇ ಅಲ್ಲದೆ ತಮ್ಮ ಪೋಸ್ಟ್‌ ಮೊದಲ ಸಾಲಿನಲ್ಲಿ 'ಅಭಿಮಾನಿಗಳೇ ದೇವ್ರು' ಎಂದ ಅಣ್ಣಾವ್ರ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಕೋವಿಡ್ 19ರ ಗಲಾಟೆಯ ಮಧ್ಯೆಯೇ ತಮ್ಮ 2ನೇ ಚಿತ್ರ ಸೂಪರ್ ಮಚ್ಚಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕೊರೋನಾ ವೈರಸ್ ಭಯವಿದ್ದರೂ, ರೊಮ್ಯಾಂಟಿಕ್ ದೃಶ್ಯಗಳಲ್ಲಿ ಭಾಗವಹಿಸಲು ಹೆದರೋಲ್ಲ ಎನ್ನುವ ಮೂಲಕ ತಮ್ಮ ವೃತ್ತಿಪರತೆಯನ್ನು ಪ್ರದರ್ಶಿಸಿದ್ದರು. 

ಕೊವೀಡ್ ಕಾಟಕ್ಕೆ ಇಡೀ ಭಾರತವೇ ಲಾಕ್‌ಡೌನ್ ಆದಾಗ ರಚಿತಾ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅದಿರಲಿ, ಎಲ್ಲ ನಟ, ನಟಿಯರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರೆ ರಚಿತಾ ಮಾತ್ರ ತುಟಿ ಪಿಟಕ್ ಎಂದಿರಲಿಲ್ಲ. ಆದರೆ, ಆಮೇಲೆ ನಾನು ಮುಖ ಮುಚ್ಚಿಕೊಂಡು, ಯಾರಿಗೂ ಗೊತ್ತಾಗದಂತೆ ಬಡವರು, ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ನೀಡಿದ್ದಾಗಿ ಎಂದು ಹೇಳಿದ್ದಾರೆ ಎಂಬುವುದು ಸುದ್ದಿಯಾಗಿದೆ. ಈ ಗಲಾಟೆಯಲ್ಲಿಯೇ ರಚಿತಾ ಮದುವೆಯಾಗುತ್ತಾರೆಂಬ ಗಾಸಿಪ್ ಸಹ ಹರಿದಾಡಿತ್ತು.