ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ; ಟ್ರೆಂಡ್ ಆಗುತ್ತಿದೆ ’ರುಸ್ತುಂ’ ಟ್ರೇಲರ್
ಶಿವಣ್ಣ ಬಹುನಿರೀಕ್ಷಿತ ’ರುಸ್ತುಂ’ ಟ್ರೇಲರ್ ರಿಲೀಸ್ | ಶಿವಣ್ಣ ಡೈಲಾಗ್ ಡಿಲವರಿಗೆ ಅಭಿಮಾನಿಗಳು ಫುಲ್ ಖುಷ್! | ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡ ವಿವೇಕ್ ಒಬೆರಾಯ್
ಬೆಂಗಳೂರು (ಏ. 14): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಹುನಿರೀಕ್ಷಿತ ’ರುಸ್ತುಂ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟಗರು ಚಿತ್ರದಲ್ಲಿ ಪೊಲೀಸ್ ಆಗಿ ಖದರ್ ತೋರಿಸಿದ್ದ ಶಿವಣ್ಣ ಮತ್ತೆ ರುಸ್ತುಂನಲ್ಲಿ ಖಾಕಿ ಧರಿಸಿ ಅಬ್ಬರಿಸಿದ್ದಾರೆ.
ಇಲ್ಲಿಯೂ ಕೂಡಾ ಲಾಂಗ್, ಮಚ್ಚು ಝಳಪಿಸಿದ್ದಾರೆ. ಶಿವಣ್ಣನ ಮಾಸ್ ಡೈಲಾಗ್ ಅಭಿಮಾನಿಗಳಲ್ಲಿ ಕಿಕ್ಕೇರಿಸುತ್ತಿದೆ. ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ ಡೈಲಾಗ್ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.
ಈ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ ನಿರ್ದೇಶಕ ರವಿ ವರ್ಮಾ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ ಇದಾಗಿದೆ. ಶಿವಣ್ಣನಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಸಾಥ್ ನೀಡಿದ್ದಾರೆ. ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಕೂಡಾ ಈ ಚಿತ್ರದಲ್ಲಿದ್ದಾರೆ.